Headlines

ಮಾದಕ ದ್ರವ್ಯ ಮಾರಾಟ ಆರೋಪ : ಅಣ್ಣಾ ಬಾಂಡ್ ಖ್ಯಾತಿಯ ನೈಜೀರಿಯಾ ನಟ ಚೆಕ್ವುಮೆ ಮಾಲ್ವಿನ್ ಬಂಧನ

Spread the love

ಬೆಂಗಳೂರು : ಡ್ರಗ್ ಪೆಡ್ಲಿಂಗ್ ಆರೋಪದ ಮೇಲೆ ಹಲವಾರು ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ನೈಜೀರಿಯಾದ ನಟ ಚೆಕ್ವುಮೆ ಮಾಲ್ವಿನ್ ಅವರನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬೆಂಗಳೂರು ಪೊಲೀಸರಿಗೆ ಸುಳಿವು ದೊರೆತ ನಂತರ ನಟನನ್ನು ನಗರದ ಎಚ್ ಬಿಆರ್ ಲೇಔಟ್ ಪ್ರದೇಶದ ಕಟ್ಟಡದಿಂದ ಬಂಧಿಸಲಾಗಿದೆ. ಪೊಲೀಸ್ ಸಿಬ್ಬಂದಿ 15 ಗ್ರಾಂ ಎಂಡಿಎಂಎ (commonly called ecstasy or molly), 250 ಮಿಲೀ ಹಶೀಶ್ ತೈಲ, ಮೊಬೈಲ್ ಫೋನ್ ಗಳು ರೂ 2,500 ನಗದು ಮತ್ತು 8 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

ಸಿಂಗಮ್, ವಿಶ್ವರೂಪಂ, ದಿಲ್ವಾಲೆ, ಅಣ್ಣಾ ಬಾಂಡ್, ಪರಮಾತ್ಮ ಮತ್ತು ಜಂಬೂ ಸಫಾರಿ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ಚೆಕ್ವುಮೆ ಮಾಲ್ವಿನ್ ಅವರನ್ನು NDPS (Narcotic Drugs and Psychotropic Substances) ಕಾಯ್ದೆ, 1985ರ ಸೆಕ್ಷನ್ ಗಳ ಅಡಿಯಲ್ಲಿ ಬಂಧಿಸಲಾಗಿದೆ.

ಆರೋಪಿ ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ ಸರಬರಾಜು ಮಾಡುತ್ತಿದ್ದನು ಎಂದು ವರದಿಯಾಗಿದೆ.