ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಬಾಲಿವುಡ್ , ಟಾಲಿವುಡ್

Spread the love

ಬೆಂಗಳೂರು : ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಬಾಲಿವುಡ್ ಚಿತ್ರರಂಗದ ಗಣ್ಯರು ಕೂಡ ಕಂಬನಿ ಮಿಡಿದಿದ್ದಾರೆ.

https://twitter.com/juniorbachchan?ref_src=twsrc%5Etfw%7Ctwcamp%5Etweetembed%7Ctwterm%5E1454023608171327488%7Ctwgr%5E%7Ctwcon%5Es1_&ref_url=https%3A%2F%2Fkannadadunia.com%2Flive-news%2Fpuneeth-rajkumar-gone-too-soon-tributes-from-anil-kapoor-ajay-devgn-abhishek-bachchan-and-other-bollywood-stars%2F

ಬಾಲಿವುಡ್ ನಟರಾದ ಅನಿಲ್ ಕಪೂರ್, ಅಭಿಷೇಕ್ ಬಚ್ಚನ್, ಸಂಜಯ್ ದತ್, ಅಜಯ್ ದೇವಗನ್, ರಿತೇಶ್ ದೇಶ್ ಮುಖ್, ನಟಿಯರಾದ ತಾಪ್ಸಿ ಪನ್ನು, ರಿಚಾ ಚಡ್ಜಾ, ಸೇರಿದಂತೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ಇನ್ನೂ, ಬಾಲಿವುಡ್ ಮಾತ್ರವಲ್ಲದೇ ತೆಲಗು, ಮಲಯಾಳಂ ಚಿತ್ರರಂಗದ ಗಣ್ಯರು ಕೂಡ ಸಂತಾಪ ಸೂಚಿಸಿದ್ದಾರೆ.

ಪುನೀತ್​ ನೆಚ್ಚಿನ ತಾಣವಾಗಿತ್ತು ಅಂಜನಾದ್ರಿ..! ಜೇಮ್ಸ್​ ಚಿತ್ರೀಕರಣದ ವೇಳೆ ಹನುಮಂತನ ಜನ್ಮ ಸ್ಥಳಕ್ಕೆ ಭೇಟಿ ನೀಡಿದ್ದ ಅಪ್ಪು

ಬಾಲನಟನಾಗಿ ಕಾಣದಂತೆ ಮಾಯವಾದನೋ ಎಂಬ ಹಾಡನ್ನ ಹಾಡಿದ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಇಂದು ನಿಜವಾಗಿಯೂ ಅಭಿಮಾನಿಗಳ ಕಣ್ಣಿಂದ ಮಾಯವಾಗಿ ಬಿಟ್ಟಿದ್ದಾರೆ. ಪುನೀತ್​​ರನ್ನು ಈ ರೀತಿಯಾಗಿ ನೋಡುವ ದಿನ ಇಷ್ಟು ಬೇಗ ಬರಬಹುದು ಎಂಬ ಸಣ್ಣ ಕಲ್ಪನೆಯೂ ಇಲ್ಲದ ವೇಳೆಯಲ್ಲಿಯೇ ದೊಡ್ಮನೆ ಕುಡಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಕನ್ನಡದ ಮೇರು ನಟ ಪುನೀತ್​ ರಾಜ್​ಕುಮಾರ್​​ಗೆ ಅಂಜನಾದ್ರಿ ಬೆಟ್ಟ ಅತ್ಯಂತ ನೆಚ್ಚಿನ ತಾಣವಾಗಿತ್ತು. ಹನುಮಂತನ ಜನ್ಮಸ್ಥಳವೆಂದೇ ಕರೆಯಲ್ಪಡುವ ಈ ಬೆಟ್ಟಕ್ಕೆ ಪುನೀತ್​ ಪದೇ ಪದೇ ಭೇಟಿ ನೀಡುತ್ತಿದ್ದರು. ದೊಡ್ಮನೆ ಹುಡುಗ, ರಣವಿಕ್ರಮ, ಜೇಮ್ಸ್​ ಸೇರಿದಂತೆ ಅನೇಕ ಸಿನಿಮಾಗಳ ಚಿತ್ರೀಕರಣವನ್ನೂ ಪುನೀತ್​ ಈ ಭಾಗದಲ್ಲಿಯೇ ಮಾಡಿದ್ದಾರೆ.

2 ತಿಂಗಳ ಹಿಂದೆಯಷ್ಟೇ ಜೇಮ್ಸ್​ ಚಿತ್ರದ ಚಿತ್ರೀಕರಣಕ್ಕಾಗಿ ಪುನೀತ್​ ಅಂಜನಾದ್ರಿಗೆ ಆಗಮಿಸಿದ್ದರು. ಈ ವೇಳೆ ಅಂಜನಾದ್ರಿ ಬೆಟ್ಟವನ್ನು ಏರಿದ್ದರು. ಬಳಿಕ ಮಣಿಭದ್ರೇಶ್ವರ ತಳವಾರಘಟ್ಟ ಆನೆಗೊಂದಿಯನ್ನು ಕಣ್ತುಂಬಿಕೊಂಡಿದ್ದರು. ಅಂಜನಾದ್ರಿ ಬೆಟ್ಟ ಏರಿದ್ದ ಪುನೀತ್​ ಅಲ್ಲಿದ್ದ ಮಂಗಗಳಿಗೂ ಬಾಳೆ ಹಣ್ಣು ನೀಡಿದ್ದರು.
ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಈ ಎಲ್ಲಾ ಘಟನೆಗಳು ನೆನಪಾಗಿ ಕಾಡುತ್ತಿವೆ. ಪುನೀತ್​ ಒಬ್ಬ ನಟನಾಗಿ ಅಲ್ಲ ವ್ಯಕ್ತಿತ್ವದ ಮೂಲಕವೇ ಕರುನಾಡಿನ ಪಾಲಿಗೆ ರಾಜಕುಮಾರ ಎನಿಸಿದವರು. ಎಲ್ಲರನ್ನೂ ಒಂದೇ ರೀತಿ ಕಾಣುತ್ತಿದ್ದ ಪುನೀತ್​ ಮತ್ತೊಮ್ಮೆ ಇದೇ ನಾಡಿನಲ್ಲಿ ಹುಟ್ಟಿ ಬರಲಿ ಎಂಬುದೇ ಎಲ್ಲರ ಆಶಯವಾಗಿದೆ.