ನಿನ್ನೆ ಅಧ್ಯಕ್ಷರು, ಇಂದು ಕಾರ್ಯದರ್ಶಿ ರಾಜೀನಾಮೆ…..!

Spread the love

ಮುಂಡಗೋಡ : ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ‍ ಸ್ಥಾನಕ್ಕೆ ಮಂಜುನಾಥ ರೇವಣಕರ ಇಂದು ರಾಜೀನಾಮೆ ನೀಡಿದ್ದಾರೆ.

ತಾನು ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತನಾಗಿ ದುಡಿದು ಈಗ ಸದ್ಯ ಯುವ ಮೋರ್ಚಾ ಕಾರ್ಯದರ್ಶಿಯಾಗಿ ಎರಡು ವರ್ಷಗಳಿಂದ ಪಕ್ಷದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದೆ. ಈಗ ನಮಗೆ ಹಲವಾರು ಕಾರಣಗಳಿಂದ ಹಾಗೂ ನಮ್ಮ ವೈಯಕ್ತಿಕ ಕೆಲಸ ಆಗದೇ ಇರುವ ಕಾರಣ ಮನನೊಂದು ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಸಹಕರಿಸಿದ ಜಿಲ್ಲಾಧ್ಯಕ್ಷರಿಗೆ ಹಾಗೂ ಸಚಿವರಿಗೆ ಧನ್ಯವಾದಗಳನ್ನು ಅವರು ತಿಳಿಸಿದ್ದಾರೆ.

ನಿನ್ನೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಗಣೇಶ ಶಿರಾಲಿ ರಾಜೀನಾಮೆ ನೀಡಿದ್ದರು. ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಇಗ ಸಾಬೀತಾಗಿದೆ. ಒಳಗೊಳಗೆ ಮುಸುಕಿನ ಗುದ್ದಾಟ ನಡೆದಿದೆ ಎಂಬುದು ಬಹಿರಂಗಗೊಂಡಿದೆ.

ಹೊಸ ಬಿಜೆಪಿ ಹಾಗೂ ಹಳೇ ಬಿಜೆಪಿ ಮತ್ತು ಸ್ಥಳೀಯ ಮುಖಂಡರ ಒಳಗಿನ ತಿಕ್ಕಾಟಕ್ಕೆ ಬಿಜೆಪಿ ಬಸವಳಿದು ಹೋಗುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಬಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ : ಹಿಂ.ಜಾ.ವೇ. ಮನವಿ

ಮುಂಡಗೋಡ : ಬಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ, ಹಿಂದು ಮಂದಿರ ಮತ್ತು ಹಿಂದುಗಳ ಮನೆಗಳ ಧ್ವಂಸ ಇವೆಲ್ಲವನ್ನೂ ತಕ್ಷಣ ತಡೆಯಬೇಕೆಂದು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು ಎಂದು ಹಿಂದು ಜಾಗರಣಾ ವೇದಿಕೆಯವರು ಇಂದು ಮುಂಡಗೋಡ ತಹಶೀಲದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹಿಂದು ಜಾಗರಣಾ ವೇದಿಕೆಯ ತಾಲೂಕಾ ಅಧ್ಯಕ್ಷ ಪ್ರಕಾಶ ಬಡಿಗೇರ, ಪ.ಪಂ. ಉಪಾಧ್ಯಕ್ಷ ಮಂಜುನಾಥ ಹರಮಲಕರ, ಹಿಂದು ಜಾಗರಣಾ ವೇದಿಕೆಯ ಪ್ರಮುಖರಾದ ಕೃಷ್ಣಮೂರ್ತಿ, ಗೋಪಾಲ ದೇವಾಡಿಗ, ಗಣೇಶ ಶಿರಾಲಿ, ಮಲ್ಲಿಕಾರ್ಜುನ ಗೌಳಿ, ಭಗವಂತ ಗುಡಕರ, ಮಂಜುನಾಥ ಪಾಟೀಲ, ವಿಶ್ವನಾಥ ನಾಯರ, ಮಹೇಶ ಯಲಿವಾಳ, ಶಿವಯೋಗಿ ಚಿಕ್ಕಮಠ ಮುಂತಾದವರಿದ್ದರು.

ಪೊಲೀಸ ಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಪದೋನ್ನತಿಯಲ್ಲಿ ಅನ್ಯಾಯ

ಮುಂಡಗೋಡ : ಉತ್ತರಕನ್ನಡ ಜಿಲ್ಲೆಯ ಪೊಲೀಸ ಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಪದೋನ್ನತಿಯಲ್ಲಿ ಅನ್ಯಾಯ ಮಾಡುತ್ತಿರುವ ಬಗ್ಗೆ ಕರ್ನಾಟಕ ದಲಿತ ರಕ್ಷಣಾ ವೇದಿಕೆಯವರು ಇಂದು ರಾಜ್ಯಪಾಲರಿಗೆ ಮುಂಡಗೋಡ ತಹಶೀಲದಾರರ ಮೂಲಕ ಮನವಿ ಸಲ್ಲಿಸಿದರು.

ಒಟ್ಟು 58 ಜನ ಸಿಬ್ಬಂದಿಗೆ ಅನ್ಯಾಯ ಮಾಡಿರುತ್ತಾರೆ. 58 ಜನರಿಗೂ ಕೂಡಲೇ ಪದೋನ್ನತಿ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಚಿದಾನಂದ ಹರಿಜನ, ರಾಜ್ಯ ಸಂಘಟನಾ ಕಾರ್ಯದರ್ಶಿ ಚನ್ನಬಸು, ತಾಲೂಕಾಧ್ಯಕ್ಷ ಶಿವಾನಂದ ಮುಡಸಾಲಿ, ನಗರಾಧ್ಯಕ್ಷ ರಾಮಚಂದ್ರ ಹರಿಜನ ಮುಂತಾದವರಿದ್ದರು.