ಚೆನ್ನೈ: ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ಶುಕ್ರವಾರ ಬೆಳಗ್ಗೆ ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮೆದುಳಿಗೆ ರಕ್ತ ಸಂಚಾರವನ್ನು ಪುನಃಸ್ಥಾಪನೆ ಮಾಡುವ ಸಲುವಾಗಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಅ.28ರಂದು ತಲೆಸುತ್ತು ಬಂದಂಥ ಅನುಭವವಾದ ಕಾರಣ ರಜನಿಕಾಂತ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡವು ರಜನಿ ಅವರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದ ಬಳಿಕ, ಕ್ಯಾರೋಟಿಡ್ ಆರ್ಟರಿ ರೀವ್ಯಾಸ್ಕಾಲರೈಸೇಷನ್ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಿದರು.
aಅದರಂತೆ, ಶುಕ್ರವಾರ ಯಶಸ್ವಿಯಾಗಿ ಸರ್ಜರಿ ನೆರವೇರಿಸಲಾಗಿದೆ. ಕೆಲವೇ ದಿನಗಳಲ್ಲಿ ಅವರನ್ನು ಡಿಸಾcರ್ಜ್ ಮಾಡಲಾಗುತ್ತದೆ ಎಂದು ಆಸ್ಪತ್ರೆಯ ಸಹಸ್ಥಾಪಕ ಡಾ. ಅರವಿಂದನ್ ಸೆಲ್ವರಾಜ್ ತಿಳಿಸಿದ್ದಾರೆ.