ಕೆಲಸ ಕೊಡಿಸೋ ನೆಪದಲ್ಲಿ ವೇಶ್ಯಾವಾಟಿಕೆಗೆ ದೂಡಿದ ಆಂಟಿ..! ಫೋನ್ ಕಾಲ್ ಮೂಲಕವೇ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಖತರ್ನಾಕ್ ಲೇಡಿ

Spread the love

ಬೆಂಗಳೂರು: ಕೆಲಸ ಕೊಡಿಸೋ ನೆಪದಲ್ಲಿ ವೇಶ್ಯವಾಟಿಕೆಗೆ ದೂಡಿದ ಮುಂಬೈ ಮೂಲದ ಮಹಿಳೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೆಲಸ ಕೊಡಿಸುವುದಾಗಿ ಬಾಂಗ್ಲಾ ಮೂಲದ ಇಬ್ಬರು ಮಹಿಳೆಯರನ್ನು ಬೆಂಗಳೂರಿಗೆ ಕರೆತಂದ ಜ್ಯೋತಿ ಎಂಬ ಮಹಿಳೆ ವೇಶ್ಯವಾಟಿಕೆಗೆ ದೂಡಿದ್ದಾರೆ.

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಎನ್ ಜಿ ಒ ಸಂಸ್ಥೆ ಕೊಡಿಗೆಹಳ್ಳಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಎನ್ ಜಿ ಒ ಸಹಯೋಗದೊಂದಿಗೆ ಭದ್ರಪ್ಪ ಲೇಔಟ್ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದು,

ಕೆಲಸದ ಆಮೀಶ ತೋರಿದ ಜ್ಯೋತಿ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಅಲ್ಲದೇ ಮಹಿಳೆ & ಅಪ್ರಾಪ್ತೆಯನ್ನು ಪೊಲೀಸರು ರಕ್ಷಣೆ ಮಾಡಿದ್ದು, ಬಾಂಗ್ಲಾದೇಶ & ಪಶ್ಚಿಮ ಬಂಗಾಳದ ಮೂಲದವರು ಎಂದು ತಿಳಿದು ಬಂದಿದೆ. ಫೋನ್ ಕಾಲ್ ಮೂಲಕ ಜ್ಯೋತಿ ಈ ದಂಧೆ ನಡೆಸುತ್ತಿದ್ದು, ಈ ಹಿಂದೆಯೂ ಕೂಡ ಇದೇ ಪ್ರಕರಣದಲ್ಲಿ ಬಂಧನವಾಗಿದ್ದಳು ಎನ್ನಲಾಗಿದೆ. ಸದ್ಯ ಆರೋಪಿಯಿಂದ ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಪೊಲೀಸರು, ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.