
ಮುಂಡಗೋಡ : ಛತ್ರಪತಿ ಶಿವಾಜಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಉತ್ತಮ ಸಂಘ ಪ್ರಶಸ್ತಿಯನ್ನು ಕೆ.ಡಿ.ಸಿ.ಸಿ. ಬ್ಯಾಂಕ ನೀಡಿದೆ.
೨೦೨೦-೨೧ನೇ ಸಾಲಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಮುಂಡಗೋಡದ ಛತ್ರಪತಿ ಶಿವಾಜಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಉತ್ತಮ ಸಂಘ ಎಂದು ಜಿಲ್ಲಾ ಮಟ್ಟದ ಬಹುಮಾನ ೫ ಸಾವಿರರೂ.ದೊಂದಿಗೆ ಪ್ರಶಸ್ತಿಯನ್ನು ಇಂದು ಶಿರಸಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಮತ್ತು ಕೆಡಿಸಿಸಿ ಬ್ಯಾಂಕ ಅಧ್ಯಕ್ಷರಾದ ಶಿವರಾಮ ಹೆಬ್ಬಾರ್ ನೀಡಿದರು.
ಛತ್ರಪತಿ ಶಿವಾಜಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಅಧ್ಯಕ್ಷರಾದ ನಾಗರಾಜ ಬೆಣ್ಣಿ ಮತ್ತು ಮುಖ್ಯ ಕಾರ್ಯನಿರ್ವಾಹಕರಾದ ದಶರಥ ಸಾಳುಂಕೆ ಪ್ರಶಸ್ತಿಯನ್ನು ಸ್ವೀಕರಿಸಿದರು. ಕೆಡಿಸಿಸಿ ಬ್ಯಾಂಕ ನಿರ್ದೇಶಕರಾದ ಎಲ್.ಟಿ.ಪಾಟೀಲ ಈ ಸಂದರ್ಭದಲ್ಲಿ ಇದ್ದರು.
ಮುಂಡಗೋಡ ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯ ವರ್ಗಾವಣೆ…..

ಮುಂಡಗೋಡ : ಕಳೆದ ಆರು ವರ್ಷಗಳಿಂದ ಮುಂಡಗೋಡ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂಗನಬಸಯ್ಯ ಅವರನ್ನು ಯಲ್ಲಾಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯಾಗಿ ವರ್ಗಾವಣೆಗೊಳಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಂಗನಬಸವಯ್ಯ ಅವರು ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡುತ್ತಿದ್ದರು.
ಕೋವಿಡ್ ಸಂದರ್ಭದಲ್ಲಿ ಇವರು ಉತ್ತಮ ಸೇವೆ ಸಲ್ಲಿಸಿ ಜನ ಮನ್ನಣೆಗೆ ಪಾತ್ರರಾಗಿದ್ದರು.
ಪಟ್ಟಣ ಪಂಚಾಯತಿಯ ಹಳೆಯ ಪುರಸಭಾಭವನದಲ್ಲಿದ್ದ ಕುರ್ಚಿ ಕಳುವು…..

ಮುಂಡಗೋಡ : ಪಟ್ಟಣ ಪಂಚಾಯತಿಯ ಹಳೆಯ ಪುರಸಭಾಭವನದಲ್ಲಿ ಕುರ್ಚಿ ಮತ್ತು ಕುರ್ಚಿಗೆ ಬಳಸಿದ ಸಾಮಾನುಗಳನ್ನು ಹಾಗೂ ಕಟ್ಟಿಗೆಗಳನ್ನು ದುಷ್ಕರ್ಮಿಗಳು ಕಳುವು ಮಾಡಿಕೊಂಡು ಹೋದ ಘಟನೆ ಸಂಭವಿಸಿದೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಇದು ತುಂಬಾ ಹಳೆಯ ಭವನವಾಗಿದೆ.
ಈ ಹಿಂದೆ ಇಡೀ ತಾಲೂಕಿನ ವಿಶೇಷ ಕಾರ್ಯಕ್ರಮಗಳು ಇದೆ ಪುರಸಭಾ ಭವನದಲ್ಲಿಯೇ ನಡೆಯುತ್ತಿತ್ತು. ಅದೆಷ್ಟೋ ಮದುವೆಗಳು, ನಾಟಕಗಳು, ಮನರಂಜನಾ ಕಾರ್ಯಕ್ರಮಗಳು ಇಲ್ಲಿ ನಡೆದಿದ್ದವು.

ಕಳೆದ ಆರೇಳು ವರ್ಷಗಳಿಂದ ಸಭಾಭವನ ಬಳಕೆಯಾಗದೆ ಪಟ್ಟಣ ಪಂಚಾಯತಿಯ ವಸ್ತುಗಳನ್ನು ಉಪಯೋಗಿಸಲಾಗುತ್ತಿತ್ತು.
ದುಷ್ಕರ್ಮಿಗಳು ಈ ಸಭಾಭವನ ಒಳಹೊಕ್ಕು ಸುಮಾರು ಎರಡು ನೂರಕ್ಕೂ ಹೆಚ್ಚು ಕಬ್ಬಿಣದ ಕುರ್ಚಿಗಳನ್ನು ಹಾಗೂ ಅದಕ್ಕೆ ಬಳಸಿದ ಕಟ್ಟಿಗೆಯನ್ನು ಕದ್ದುಕೊಂಡು ಹೋಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಒಬ್ಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.