
ಶಿರಸಿ : ಸಾಹಿತ್ಯಾಭಿಮಾನಿ ಬಳಗ ಹಳಿಯಾಳ ಅವರು ಕವಿ ಶಾಂತಿನಾಥ ದೇಸಾಯಿ ಹಾಗೂ ಚುಟುಕುಗಳ ಬ್ರಹ್ಮ ಡಾ. ದಿನಕರ ದೇಸಾಯಿ ಅವರ ಸ್ಮರಣಾರ್ಥ ಕೊಡುವ ರಾಜ್ಯಮಟ್ಟದ *ಚುಟುಕುಶ್ರೀ* ಪ್ರಶಸ್ತಿಗೆ ಶ್ರೀ ಮಾರಿಕಾಂಬಾ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ನಾರಾಯಣ ಭಾಗ್ವತ ಅವರು ಭಾಜನರಾಗಿದ್ದಾರೆ. ನಾಟಕ, ಗಾಯನ, ಚಿತ್ರಕಲೆಗಳೊಂದಿಗೆ ಸಾಹಿತ್ಯ ರಚನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ನಾರಾಯಣ ಭಾಗ್ವತ್ ಅವರು ಈ ಹಿಂದೆ ರಾಜ್ಯ ಮಟ್ಟದ ಕವನ ರಚನಾ ಸ್ಪರ್ಧೆಯಲ್ಲಿ ವಿಜೇತರಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಹಣಕಾಸಿನ ವ್ಯವಹಾರ, ಅನೈತಿಕ ಸಂಬಂಧವೇ ಮಹಬೂಬಲಿ ಜಮಖಂಡಿ ಕೊಲೆಗೆ ಕಾರಣ…..

ಮುಂಡಗೋಡ : ಕಳೆದ 2 ದಿನಗಳ ಹಿಂದೆ ಕಲ್ಲಳ್ಳಿ ಸೇತುವೆ ಕೆಲಗೆ ಹಳ್ಳದಲ್ಲಿ ನಡೆದಿದ್ದ ಮುಂಡಗೋಡದ ಜಮಖಂಡಿ ಮೆಟಲ್ ಸ್ಟೋರ್ಸನ ಮಾಲೀಕರಾದ ಮಹಬೂಬಲಿ ಜಮಖಂಡಿ(51) ಸಂಶಯಾಸ್ಪದ ಸಾವಿನ ರಹಸ್ಯವನ್ನು ಮುಂಡಗೋಡ ಪೊಲೀಸರು ಭೇದಿಸಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇದೊಂದು ಪೂರ್ವ ನಿಯೋಜಿತ ಕೊಲೆಯಾಗಿದ್ದು, ಹಣಕಾಸಿನ ವ್ಯವಹಾರ ಮತ್ತು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಬೂಬಲಿ ಜಮಖಂಡಿ ಅವರ ಕೊಲೆ ಮಾಡಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸ ಅಧಿಕಾರಿಗಳು ಹಾಗೂ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು…..
ಕೊಲೆ ಮಾಡಿದ ಆರೋಪಿಗಳಾದ ಲಕ್ಕೊಳ್ಳಿ ಗ್ರಾಮದ ಇಬ್ರಾಹೀಂ ಶಿಗ್ಗಾಂವಿ(31), ಆತನ ಅಣ್ಣ ಶರೀಫ ಶಿಗ್ಗಾಂವಿ(38) ಹಾಗೂ ಆತನ ಪತ್ನಿ ನಾಜಿಯಾಬಾನು ಇಬ್ರಾಹೀಂ ಶಿಗ್ಗಾಂವಿ(26) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣವನ್ನು ಭೇದಿಸಲು ಎಸ್.ಪಿ. ಸುಮನ್ ಪನ್ನೇಕರ್, ಎಡಿಶನಲ್ ಎಸ್.ಪಿ. ಎಸ್.ಬದರಿನಾಥ, ಶಿರಸಿ ಡಿ.ಎಸ್.ಪಿ. ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಮುಂಡಗೋಡ ಸಿ.ಪಿ.ಐ. ಸಿದ್ದಪ್ಪ ಸಿಮಾನಿ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.
ಈ ಪ್ರಕರಣವನ್ನು ಭೇದಿಸಿ ಕೊಲೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾದ ಸಿ.ಪಿ.ಐ. ಸಿದ್ದಪ್ಪ ಸಿಮಾನಿ, ಪಿ.ಎಸ್.ಐ. ಬಸವರಾಜ ಮಬನುರ, ಪಿ.ಎಸ್.ಐ. ಎನ್.ಡಿ.ಜಕ್ಕಣ್ಣವರ್, ಪಿ.ಎಸ್.ಐ. ಮಲ್ಲಿಕಾರ್ಜುನ, ಸಿಬ್ಬಂದಿಗಳಾದ ಗನಪತಿ ಹುನನಳ್ಲಿ, ಧರ್ಮರಾಜ ನಾಯ್ಕ, ವಿನೋದಕುಮಾರ, ಅರುಣಕುಮಾರ, ಅಣ್ಣಪ್ಪ ಬಡಿಗೇರ, ಶರತ ದೇವಾಳಿ, ರಾಘು ಪಟಗಾರ, ತಿರುಪತಿ ಚೌಡಣ್ಣವರ್, ಮಹೇಶ ಹತ್ತಳ್ಳಿ, ಟೆಕ್ನಿಕಲ್ ಸೆಲ್ ಕಾರವಾರದ ಸಿಬ್ಬಂದಿಗಳಾದ ಸುಧೀರ ಮಡಿವಾಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಇವರುಗಳಿಗೆ ಎಸ್.ಪಿ.ಯವರು ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.