ನ್ಯೂಸ್:8-2-2022(3), ಕೊಪ್ಪ ಬಳಿ ಅಪಘಾತ : ಸಾವು

Share Now

ಮುಂಡಗೋಡ: ಲಾರಿ ಓವರ ಟೆಕ್ ಮಾಡಲು ಹೋಗಿ ಬೈಕ್ ಸ್ಕಿಡ್ ಆಗಿ ಲಾರಿಯಡಿ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡ ಘಟನೆ ತಾಲೂಕಿನ ಕೊಪ್ಪ ಬಳಿ ಇಂದು ಸಂಭವಿಸಿದೆ.

ನಂದಿಕಟ್ಟಾ ಗ್ರಾಮದ ಷರೀಫ್ ಎಂಬಾತನೇ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. 

ಬೈಕನಲ್ಲಿದ್ದ ಮತ್ತೋರ್ವ ವಿಶ್ವನಾಥ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾನೆ. 

ಬೈಕನಲ್ಲಿದ್ದ ಇಬ್ಬರೂ ನಂದಿಕಟ್ಟಾ ಗ್ರಾಮದಿಂದ ಮುಂಡಗೋಡ ಕಡೆ ಹೋಗುತ್ತಿದ್ದಾಗ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ.