ನ್ಯೂಸ್:8-2-2022(4), ತಾರಕಕ್ಕೆರಿದ ಹನುಮಾಪುರ ಶ್ರೀಕಾಳಿಕಾಮಠದ ಉತ್ತರಾಧಿಕಾರಿ ಪಟ್ಟಾಧಿಕಾರ ಪ್ರಕರಣ..!

Share Now

ಮುಂಡಗೋಡ : ತಾಲೂಕಿನ ಹನುಮಾಪುರ ಶ್ರೀಕಾಳಿಕಾಮಠದ ಉತ್ತರಾಧಿಕಾರಿ ಪಟ್ಟಾಧಿಕಾರ ಪ್ರಕರಣ ತಾರಕಕ್ಕೇರಿದೆ.

ಈ ಉತ್ತರಾಧಿಕಾರಿ ಪಟ್ಟಾಧಿಕಾರ ವಿವಾದ ಈಗ ಎರಡು ಗುಂಪುಗಳಾಗಿ ಮಾರ್ಪಟ್ಟಿದೆ.

ಕಳೆದ ರಾತ್ರಿ ಒಂದು ಗುಂಪು ಗಂಗಾಧರಯ್ಯ ಹಿರೇಮಠ ಅವರನ್ನು ಹನುಮಾಪುರ ಶ್ರೀಕಾಳಿಕಾಮಠದ ಉತ್ತರಾಧಿಕಾರಿ ಪಟ್ಟಾಧಿಕಾರ ಎಂದು ಘೋಷಣೆ ಮಾಡಿದೆ.

ಹಿಂದಿನ ಶ್ರೀಗಳ ಒಡನಾಡಿಯಾದ ಶ್ರೀಓಂಕಾರ ಶಿವಾಚಾರ್ಯ ಸವಾಮಿಗಳು, ವಿಶ್ವರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ವೀರಶೈವ ಗುರುಪರಂಪರೆಯ ವಿಧಿ, ವಿಧಾನಗಳನ್ನು ನೆರವೇರಿಸಿದರು.

ಇನ್ನೊಂದು ಗುಂಪು ದಿ.10ರಂದು ಸೋಮಶೇಖರ ದೇವರನ್ನು ಹನುಮಾಪುರ ಮಠದ ಉತ್ತರಾಧಿಕಾರಿ ಪಟ್ಟಾಧಿಕಾರ ಕಾರ್ಯಕ್ರಮವನ್ನು ಏರ್ಪಡಿಸಿದೆ.