ಶನಿ ದೋಷದ ಬಗ್ಗೆ ಜನರಲ್ಲಿ ಅಪನಂಬಿಕೆಗಳೇ ಹೆಚ್ಚು.ಶುಭ, ಅಶುಭ ಫಲಗಳಿಗೆ ಕಾರಣವೇನು?

ಸಾಮಾನ್ಯವಾಗಿ ಶನಿಗ್ರಹದ ಬಗ್ಗೆ ಜನರಲ್ಲಿ ಅಪನಂಬಿಕೆಗಳೇ ಹೆಚ್ಚು. ಗೋಚಾರದಲ್ಲಿ ಬರುವ ಏಳೂವರೆ ಶನಿ, ಅಷ್ಠಮ ಶನಿ, ಪಂಚಮ ಶನಿ ಹಾಗೂ ಶನಿ ದಶಾ, ಭುಕ್ತಿ ಕಾಲದಲ್ಲಿ ಅಶುಭ ಫಲಗಳೇ ಸಂಭವಿಸುತ್ತದೆ ಎಂದು ಎಲ್ಲರ ನಂಬಿಕೆ. ಕರ್ಮಕಾರಕನಾದ ಶನಿ, ನ್ಯಾಯ, ನೀತಿ ಅಧಿಪತಿಯಾದ ಶನಿ, ತಮ್ಮ ಪ್ರಾರಬ್ಧ ಕರ್ಮಕ್ಕೆ ಅನುಗುಣವಾಗಿ ಈ ಜನ್ಮದಲ್ಲಿ ಫಲಗಳನ್ನು ಕೊಡುತ್ತಾನೆ. ಹಿಂದಿನ ಜನ್ಮದ ಕರ್ಮದ ಫಲದ ಪ್ರಕಾರ ಶನಿಯು, ಉಚ್ಛ ರಾಶಿ, ಮೂಲ ತ್ರಿಕೋನ, ನ್ವ ಕ್ಷೇತ್ರ, ಮಿತ್ರ ಕ್ಷೇತ್ರ, ನೀಚ ರಾಶಿ ಹಾಗೂ…

Read More

ವರಮಹಾಲಕ್ಷ್ಮಿ ಹಬ್ಬದ ದಿನ ಚಿನ್ನ, ಬೆಳ್ಳಿ, ದರ ಎಷ್ಟಿದೆ?

ಬೆಂಗಳೂರು : ಕಳೆದ ಹಲವು ದಿನಗಳಿಂದ ಚಿನ್ನ ಬೆಳ್ಳಿ, ದರ ಏರಿಕೆ ಇಳಿಕೆಯಾಗುತ್ತಿದೆ. ಇದೀಗ ಇಂದು ವರಮಹಾಲಕ್ಷ್ಮಿ ಹಬ್ಬದಂದು 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹4,713 ದಾಖಲಾಗಿದೆ. ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,100 ರೂ ಮತ್ತು 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹48,100 ರೂಪಾಯಿ ದಾಖಲಾಗಿದೆ. ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹62,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ…

Read More

ಕಿಡ್ನಿ ಖರೀದಿಸುವ ಸೋಗಿನಲ್ಲಿ 7.97 ಲಕ್ಷ ವಂಚನೆ

ಬೆಂಗಳೂರು: ಕಿಡ್ನಿ ಖರೀದಿಸುವ ಸೋಗಿನಲ್ಲಿ ತನಗೆ 7.97 ಲಕ್ಷ ರೂ. ವಂಚಿಸಲಾಗಿದೆ ಎಂದು ವೈಯಾಲಿಕಾವಲ್‌ನ 36ರ ಹರೆಯದ ಮಹಿಳೆ ಕೇಂದ್ರ ವಿಭಾಗ ಸಿಇಎನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಡ್ನಿ ಮಾರಾಟದ ಬಗ್ಗೆ ಜಾಹೀರಾತು ನೋಡಿದ ಮಹಿಳೆ, ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಮಹಿಳೆ, ತನ್ನನ್ನು ಡಾ| ಸೀಮಾ ರೈ ಎಂದು ಪರಿಚಯಿಸಿಕೊಂಡು, ಕಿಡ್ನಿ ಹೊಂದಾಣಿಕೆಯಾದರೆ 1 ಕೋಟಿ ರೂ. ಕೊಡುವ ಭರವಸೆ ನೀಡಿದ್ದರು. ಅನಂತರ ನೋಂದಣಿ ಶುಲ್ಕ, ರಕ್ತ ಪರೀಕ್ಷೆ, ಆರ್‌ಬಿಐ ಮಾರ್ಗಸೂಚಿ…

Read More

ಶಸ್ತ್ರಚಿಕಿತ್ಸೆಗೊಳಗಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೆಹಲಿಯ ಸೈನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎಂಬ ಮಾಹಿತಿ ಬಂದಿದೆ. ರಾಷ್ಟ್ರಪತಿಗಳು ಕಣ್ಣಿನ ಪೊರೆಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಶಸ್ತ್ರಚಿಕಿತ್ಸೆಯಾಗಿದ್ದ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ರಾಷ್ಟ್ರಪತಿ ಭವನ ಹೇಳಿಕೆ ನೀಡಿದೆ. 75 ವರ್ಷದ ರಾಮನಾಥ್ ಕೋವಿಂದ್ ಕಳೆದ ಮಾರ್ಚ್ ನಲ್ಲಿ ಎದೆನೋವಿಗೊಳಗಾಗಿದ್ದರು. ಇದಾದ ಬಳಿಕ ಅವರು ಆಗಾಗ ಆರೋಗ್ಯ ತಪಾಸಣೆಗೊಳಗಾಗುತ್ತಿದ್ದಾರೆ. ಇದೀಗ ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

Read More

ಕೊರೊನಾ 3ನೇ ಅಲೆ ನಡುವೆಯೇ ಕಲಬುರ್ಗಿಯಲ್ಲಿ ಡೆಂಗ್ಯೂ ಅಟ್ಟಹಾಸ

ಕಲಬುರ್ಗಿ: ಕೊರೊನಾ ಮೂರನೇ ಅಲೆ ಅಟ್ಟಹಾಸದ ನಡುವೆ ಕಲಬುರ್ಗಿ ಜಿಲ್ಲೆಯಲ್ಲಿ ಡೆಂಗ್ಯೂ ಹಾವಳಿ ಹೆಚ್ಚಿದ್ದು, ಸಾವಿರಾರು ಜನರು ವಿಪರೀತ ಜ್ವರದಿಂದ ಬಳಲುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಜಿಲ್ಲೆಯ ಜನರಲ್ಲಿ ಡೆಂಗ್ಯೂ ಜ್ವರ ಹೆಚ್ಚಿದ್ದು, ಸರ್ಕಾರಿ, ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ. ಪ್ರತಿ ದಿನ ಜನರು ಆತಂಕದಿಂದ ಬದುಕುವಂತಾಗಿದೆ. ಮಾರ್ಚ್, ಏಪ್ರೀಲ್ ನಲ್ಲಿ ಒಂದಿಬ್ಬರಲ್ಲಿ ಕಾಣಿಸಿಕೊಂಡಿದ್ದ ಡೆಂಗ್ಯೂ ಜ್ವರ ಜುಲೈನಲ್ಲಿ 30 ಜನರಲ್ಲಿ ಡೆಂಗ್ಯೂ ವರದಿಯಾಗಿತ್ತು. ಇದೀಗ ಆಗಸ್ಟ್ ಮೊದಲ ವಾರದಲ್ಲಿ ಮತ್ತೆ 30 ಜನರಲ್ಲಿ ಡೆಂಗ್ಯೂ ದೃಢವಾಗಿದೆ.

Read More

ಕಡತ ವಿಲೇವಾರಿ ಮಾಸಾಚರಣೆ: ಕ್ರಿಯಾ ಯೋಜನೆ ರೂಪಿಸಲು ಸೂಚನೆ

ಕಾರವಾರ : ‘ಜಿಲ್ಲೆಯಲ್ಲಿ ಆ.16ರಿಂದ ಸೆ.15ವರೆಗೆ ಕಡತ ವಿಲೇವಾರಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಬಾಕಿ ಇರುವ ಕಡತಗಳು, ಪ್ರತಿ ವಾರಕ್ಕೆ ನಿಗದಿ ಪಡಿಸಲಾದ ಗುರಿ, ವಿಲೇವಾರಿ ಮಾಡಲಾದವು ಹಾಗೂ ಬಾಕಿ ಇರುವವುಗಳ ವಿಲೇವಾರಿಗೆ ಕೈಗೊಳ್ಳಬೇಕಾಗಿರುವ ಕ್ರಮಗಳಿಗೆ ವಿಸ್ತೃತವಾದ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ. ‘ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಡತ ವಿಲೇವಾರಿ ಮಾಸಾಚರಣೆ ಹಮ್ಮಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಕರೆ ನೀಡಿದ್ದಾರೆ. ಅದರ ಅಂಗವಾಗಿ ಜಿಲ್ಲೆಯಲ್ಲಿ…

Read More

‘ನಾಸಾ’ದ ಪ್ರಶಸ್ತಿಗೆ ಕನ್ನಡಿಗ ಆಯ್ಕೆ: ₹ 1 ಕೋಟಿ 42 ಸಾವಿರ ವಿದ್ಯಾರ್ಥಿವೇತನ

ಸಿದ್ದಾಪುರ : ತಾಲ್ಲೂಕಿನ ಸಶಿಗುಳಿ ಗ್ರಾಮದ ದಿನೇಶ ವಸಂತ ಹೆಗಡೆ, ನಾಸಾದ (ಭೂಮಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಅನುದಾನದಲ್ಲಿ) ‘ಫ್ಯೂಚರ್ ಇನ್ವೆಸ್ಟಿಗೇಟರ್’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರು ಅಮೆರಿಕದ ಹಂಟ್ಸ್‌ವಿಲ್‌ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಡಾಕ್ಟರೇಟ್ ಅಧ್ಯಯನ ಮಾಡುತ್ತಿದ್ದಾರೆ. ಅವರೊಂದಿಗೆ, ಕ್ಯಾಥರೀನ್ ಡೇವಿಡ್ಸನ್ ಎಂಬುವವರೂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಬ್ಬರೂ ತಲಾ ₹ 1 ಕೋಟಿ 42 ಸಾವಿರ (1,35,000 ಅಮೆರಿಕನ್ ಡಾಲರ್) ವಿದ್ಯಾರ್ಥಿವೇತನ ಪಡೆಯಲಿದ್ದಾರೆ. ಪ್ರಸ್ತುತ ದಿನೇಶ ಅವರು ‘ಯು.ಎ.ಎಚ್ ಸೆಂಟರ್ ಫಾರ್ ಸ್ಪೇಸ್ ಪ್ಲಾಸ್ಮಾ ಮತ್ತು…

Read More

ತೃಪ್ತಿ ವೈನ್ ಶಾಪ್ ಮೇಲ್ಛಾವಣಿ ತೆಗೆದು ೧,೯೩,೫೦೦ರೂ. ನಗದು ಹಣ ಕಳ್ಳರು

ಮುಂಡಗೋಡ : ಪಟ್ಟಣದ ತೃಪ್ತಿ ವೈನ್ ಶಾಪ್‌ನ ಮೇಲ್ಛಾವಣಿಯನ್ನು ತೆಗೆದು ೧,೯೩,೫೦೦ರೂ. ನಗದು ಹಣ ಕಳ್ಳರು ದೋಚಿಕೊಂಡು ಹೋದ ಘಟನೆ ಕಳೆದ ರಾತ್ರಿ ಸಂಭವಿಸಿದೆ. ವೈನ್ ಶಾಪ್‌ನ ಮೇಲ್ಛಾವಣಿಯ ತಗಡು ತೆಗೆದು ಅದರ ಕೆಳಗಿದ್ದ ಪಾಟಿಕಲ್ಲು ಒಡೆದು ಅದರ ಕೆಳಗೆ ಇದ್ದ ಹಲಗೆಯನ್ನು ಕಬ್ಬಿಣದ ರಾಡಿನಿಂದ ಮೀಟಿ ತೆಗೆದು ಅಂಗಡಿ ಒಳ ಹೊಕ್ಕಿ ಕಳ್ಳರು ನಗದು ಹಣ ೧,೯೩,೫೦೦ರೂ. ದೋಚಿಕೊಂಡು ಹೋಗಿದ್ದಾರೆಂದು ತೃಪ್ತಿ ವೈನ್ ಶಾಪ್‌ನವರು ಪೊಲೀಸಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಳ್ಳರ ಪತ್ತೆಗಾಗಿ ಕಾರವಾರದಿಂದ ಶ್ವಾನದಳ…

Read More

ನಾನು ಹಿಂದೂ ದೇವತೆಗಳಿಗೆ ಅಪಮಾನ ಮಾಡಿಲ್ಲ, ಆ ಬಗ್ಗೆ ರಾಜ್ಯದ ಜನತೆ ಕ್ಷಮೆ ಕೋರುವೆ – ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು : ಹಿಂದೂ ಧರ್ಮ ಮತ್ತು ಆಚಾರ-ವಿಚಾರದಲ್ಲಿ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಯಾವುದೇ ಸಂದರ್ಭದಲ್ಲಿಯೂ ನಾನು ಹಿಂದೂ ಧರ್ಮಕ್ಕಾಗಲೀ, ದೇವತೆಗಳ ಬಗ್ಗೆಯಾಗಲೀ ಅಪಮಾನ ಮಾಡುವ ಕೆಲಸ ಮಾಡೋದಿಲ್ಲ. ಅಂದು ಅಚಾತುರ್ಯದಿಂದ ನಡೆದಂತ ಪ್ರಮಾದವಾಗಿದೆ. ಅಂದೇ ಆ ಬಗ್ಗೆ ರಾಜ್ಯದ ಜನತೆಯ ಕ್ಷಮೆ ಕೋರಿದ್ದೇನೆ ಎಂಬುದಾಗಿ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟ ಪಡಿಸಿದ್ದಾರೆ. ಸಚಿವ ಮುರುಗೇಶ್ ನಿರಾಣಿ ವಿರುದ್ಧ ವ್ಯಕ್ತಿಯೊಬ್ಬರು ಹಿಂದೂ ದೇವತೆಗಳಿಗೆ ಅಪಮಾನ ಕುರಿತಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ನ್ಯಾಯಪೀಠವು,…

Read More

ನಾಳೆ ಹಂಪಿ ವೀಕ್ಷಣೆ ಮಾಡಲಿದ್ದಾರೆ ಉಪರಾಷ್ಟ್ರಪತಿ

ಬೆಂಗಳೂರು : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಕುಟುಂಬ ಸಮೇತವಾಗಿ ನಾಳೆಯಿಂದ ವಿಶ್ವವಿಖ್ಯಾತ ಹಂಪಿ ವೀಕ್ಷಣೆ ಮಾಡಲಿದ್ದಾರೆ. ನಾಳೆ ಮತ್ತು ಆ.21ರಂದು ತುಂಗಭದ್ರಾ ಡ್ಯಾಂ ಮತ್ತು ಐತಿಹಾಸಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತಿರುವ ವೆಂಕಯ್ಯ ನಾಯ್ಡು ಅವರ ಜೊತೆಯಲ್ಲಿ ಅವರ ಧರ್ಮ ಪತ್ನಿ ಎಂ ಉಷಾ ಸಹ ಆಗಮಿಸುತ್ತಿದ್ದಾರೆ. ಸುಗಮ ಪ್ರವಾಸಕ್ಕಾಗಿ ಹಂಪಿಯಲ್ಲಿ ಹಲವು ರೀತಿಯ ಸಿದ್ಧತೆ ನಡೆಯುತ್ತಿದ್ದು, ನಾಳೆ ಹುಬ್ಬಳ್ಳಿಯಿಂದ ಹೆಲಿಕಾಪ್ಟರ್ ಮೂಲಕ ಹೊಸಪೇಟೆಯ ತಾಲೂಕು ಕ್ರೀಡಾಂಗಣಕ್ಕೆ ಸಂಜೆ 5.20ಕ್ಕೆ ಉಪರಾಷ್ಟ್ರಪತಿಗಳು ಆಗಮಿಸುವರು. ನಂತರ…

Read More