ಆತ್ಮಹತ್ಯೆ ಮಾಡಿಕೊಂಡ ಯುವತಿ

ಮುಂಡಗೋಡ  :    ಮನೆಯಲ್ಲಿ  ಯಾರೂ  ಇಲ್ಲದಾಗ  ಯುವತಿಯೊಬ್ಬಳು  ನೇಣು  ಹಾಕಿಕೊಂಡು  ಆತ್ಮಹತ್ಯೆ  ಮಾಡಿಕೊಂಡ  ಘಟನೆ ಪಟ್ಟಣದ  ಇಂದಿರಾನಗರದಲ್ಲಿ  ಜರುಗಿದೆ.  ಮುಸ್ಕಾನ ಸುಲೇಮಾನ್ ಶೇಖ( 19) ವಷ೯  ಎಂಬವಳೆ  ಆತ್ಮಹತ್ಯೆ  ಮಾಡಿಕೊಂಡಿದ್ದು  ಆತ್ಮಹತ್ಯೆಗೆ  ಕಾರಣ  ಏನೆಂದು  ತಿಳಿದು  ಬಂದಿಲ್ಲ. ಪೊಲೀಸರು  ಸ್ಥಳಕ್ಕೆ  ಭೇಟಿ ನೀಡಿ  ಪರಿಶೀಲನೆ  ನಡೆಸಿದ್ದಾರೆ.  ಈ  ಕುರಿತು  ಪ್ರಕರಣ  ದಾಖಲಾಗಿದೆ.

Read More

ಚಿರತೆ ಹಿಡಿಯಲು ಬೋನು ರೆಡಿ..!

ಮುಂಡಗೋಡ : ತಾಲೂಕಿನ ಇಂದೂರ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮುಂದಾಗಿದೆ. ಇಂದೂರ ಹೊರವಲಯದ ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯುವ ಕಾರ‍್ಯಚರಣೆ ಕೈಗೊಂಡಿದ್ದಾರೆ. ಜಾಹೀರಾತು

Read More

ರಾಜೀವ್‍ಗಾಂಧಿ ಖೇಲ್‍ರತ್ನ ಪ್ರಶಸ್ತಿಯ ಹೆಸರು ಬದಲಾಯಿಸಿದ ಮೋದಿ ಸರ್ಕಾರ

ನವದೆಹಲಿ : ಕ್ರೀಡೆಯಲ್ಲಿ ಅತ್ಯತ್ತಮ ಸಾಧನೆ ಮಾಡಿದವರಿಗೆ ನೀಡಲಾಗುವ ರಾಜೀವ್‍ಗಾಂಧಿ ಖೇಲ್‍ರತ್ನ ಪ್ರಶಸ್ತಿಯ ಹೆಸರನ್ನು ಬದಲಾವಣೆ ಮಾಡಲಾಗಿದ್ದು, ಹಾಕಿ ಕ್ರೀಡೆಯ ಭೀಷ್ಮ ಮೇಜರ್ ಧ್ಯಾನಚಂದ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿ ಆಗಸ್ಟ್ ವೇಳೆಗೆ ಕ್ರೀಡಾ ಪ್ರಶಸ್ತಿಗಳ ಘೋಷಣೆಯಾಗಬೇಕಿತ್ತು. ಒಲಿಂಪಿಕ್ ಕ್ರೀಡೆ ನಡೆಯುತ್ತಿರುವುದರಿಂದ ಅಲ್ಲಿ ಗೆದ್ದವರಿಗೂ ಪ್ರಶಸ್ತಿ ನೀಡಬೇಕಿರುವುದರಿಂದ ರಾಜೀವ್‍ಗಾಂಧಿ ಖೇಲ್‍ರತ್ನ, ಅರ್ಜುನ, ದ್ರೋಣಾಚಾರ್ಯ, ಧ್ಯಾನ್‍ಚಂದ್, ರಾಷ್ಟ್ರೀಯ ಖೇಲ್‍ಪುರುಷೋತ್ತಮ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡುವುದನ್ನು ವಿಳಂಬ ಮಾಡಲಾಗಿದೆ. ಈ ನಡುವೆ ಕೇಂದ್ರ ಯುವಜನಸೇವೆ…

Read More

ರಾಜ್ಯದಾದ್ಯಂತ ನೈಟ್ ಕರ್ಫ್ಯೂ : ಬೊಮ್ಮಾಯಿ

ಬೆಂಗಳೂರು : ಕೋವಿಡ್ ಪಾಸಿಟಿವಿಟಿ ದರ ಮತ್ತೆ ಏರಿಕೆಯಾಗಿರುವುದರಿಂದ ರಾಜ್ಯದಾದ್ಯಂತ ರಾತ್ರಿ 9 ಗಂಟೆಯಿಂದಲೇ ನೈಟ್ ಕರ್ಫ್ಯೂ ಮತ್ತು ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್‌ಡೌನ್ ವಿಧಿಸಲು ನಿರ್ಧಾರ ಕೈಗೊಂಡಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದಿನಿಂದಲೇ ರಾಜ್ಯದಾದ್ಯಂತ ಈಗಿರುವ ನೈಟ್ ಕರ್ಫ್ಯೂವನ್ನು ರಾತ್ರಿ 9 ಗಂಟೆಯಿಂದ ಮತ್ತು ಕೋವಿಡ್ ಪ್ರಕರಣಗಳು ಹೆಚ್ಚಿರುವ ಮಹಾರಾಷ್ಟ್ರ ಮತ್ತು ಕೇರಳದ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್‌ಡೌನ್ ಜಾರಿಗೆ ಬರಲಿದೆ. ನೆರೆಯ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಲಾಕ್‌ಡೌನ್…

Read More

ಆಗಸ್ಟ್ 23ರಿಂದ ಶಾಲೆಗಳು ಆರಂಭ

ಬೆಂಗಳೂರು : ರಾಜ್ಯದಲ್ಲಿ 2 ಹಂತಗಳಲ್ಲಿ ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದ್ದು, ಮೊದಲ ಹಂತದಲ್ಲಿ ಆಗಸ್ಟ್ 23ರಿಂದ ಶಾಲೆ-ಕಾಲೇಜುಗಳು ಆರಂಭವಾಗಲಿವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಆಗಸ್ಟ್ 23ರಿಂದ 9, 10, 11 ಹಾಗೂ 12 ನೇ ತರಗತಿಗಳು ಆರಂಭವಾಗಲಿವೆ. ಬ್ಯಾಚ್ ವೈಸ್ ಶಾಲೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು. ಇನ್ನು ಪ್ರಾಥಮಿಕ ಶಾಲೆಗಳು ಅಂದರೆ 1ರಿಂದ 8ನೇ ತರಗತಿವರೆಗಿನ ಶಾಲೆಗಳನ್ನು ತೆರೆಯುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ, ಕೊರೊನಾ ತೀವ್ರತೆ ನೋಡಿಕೊಂಡು ಮುಂದಿನ…

Read More

ಕರ್ನಾಟಕದ 1785 ಮಂದಿಗೆ ಕೊರೊನಾ ಸೋಂಕು, 25 ಸಾವು

ಬೆಂಗಳೂರು : ಕರ್ನಾಟಕದಲ್ಲಿ ಗುರುವಾರ ಒಂದೇ ದಿನ 1785 ಮಂದಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟಿದೆ. 25 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು 1651 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಜಿಲ್ಲೆಗಳಲ್ಲಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ಒಟ್ಟು 29,13,512 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 28,52,368 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 24,414 ಮಂದಿಯಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಒಟ್ಟು 36,705 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದಿನ ಸೋಂಕು ಖಚಿತ ಪ್ರಕರಣದ ಸರಾಸರಿ ಶೇ 1.10 ಇದೆ….

Read More

ಬೆಳ್ಳಿ ಪದಕ ವಿಜೇತ ರವಿಕುಮಾರ್ ದಹಿಯಾಗೆ 4 ಕೋಟಿ ನಗದು ಬಹುಮಾನ ಘೋಷಿಸಿದ ಹರಿಯಾಣ ಸರ್ಕಾರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಕೊರಳೇರಿಸಿಕೊಂಡ ಕುಸ್ತಿಪಟು ರವಿಕುಮಾರ್ ದಹಿಯಾಗೆ ಹರಿಯಾಣ ಸರ್ಕಾರ ಭಾರಿ ಬಹುಮಾನ ಘೋಷಿಸಿದೆ. ತಮ್ಮ ರಾಜ್ಯದವರಾದ ರವಿಕುಮಾರ್ ಬೆಳ್ಳಿ ಪದಕ ಮುಡಿಗೇರಿಸಿಕೊಂಡ ಸಂದರ್ಭದಲ್ಲಿ ಅವರಿಗೆ 4 ಕೋಟಿ ರೂಪಾಯಿ ನಗದು ಬಹುಮಾನ. ಕ್ಲಾಸ್‌ 1 ದರ್ಜೆಯ ಉದ್ಯೋಗ ನೀಡಲಾಗುವುದು ಸರ್ಕಾರ ಪ್ರಕಟಿಸಿದೆ. ರಾಜ್ಯದ ಯಾವುದೇ ಭಾಗದಲ್ಲಿ ಶೇ. 50ರಷ್ಟು ರಿಯಾಯಿತಿಯೊಂದಿಗೆ ಒಂದು ಪ್ಲಾಟ್ ನೀಡಲಾಗುವುದು ಎಂದು ಘೋಷಿಸಿದೆ. ಅಲ್ಲದೆ, ರವಿ ಅವರ ಗ್ರಾಮ ನಹ್ರಿಯಲ್ಲಿ ಕುಸ್ತಿ ತರಬೇತಿಗಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವುದಾಗಿ…

Read More

ಜೋಗದ ಸಿರಿ ಕಂಡು ಸಂಭ್ರಮಿಸಿದ ನಟ ಜಗ್ಗೇಶ್

ಬೆಂಗಳೂರು : ನವರಸ ನಾಯಕ ಜಗ್ಗೇಶ್ ಅವರು ತಮ್ಮ ಸಿನಿಮಾಗಳ ಶೂಟಿಂಗ್ ಬ್ಯುಝಿ ಶೆಡ್ಯೂಲ್ಡ್ ನಡುವೆಯೂ ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ. ಬುಧವಾರ ಜೋಗಕ್ಕೆ ತೆರಳಿದ್ದ ಜಗ್ಗಣ್ಣ, ಅಲ್ಲಿಯ ಜಲಧಾರೆಯನ್ನು ಕಣ್ತುಂಬಿಕೊಂಡಿದ್ದಾರೆ. ಜೋಗದ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟರಿನಲ್ಲಿ ಬರೆದುಕೊಂಡಿದ್ದಾರೆ. ” ಪ್ರಕೃತಿಯಲ್ಲಿ ನನ್ನ ಪ್ರತಿರೂಪ ಪ್ರತಿಬಿಂಬವಿದೆ ಎಂದು ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವ ಮಾತನ್ನು ಉಲ್ಲೇಖಿಸಿರುವ ಅವರು, ಪ್ರಕೃತಿಯ ಕಂಡಾಗ ಮನ ಆನಂದ ಮೂಡುವ ಮತ್ತೊಂದು ಸ್ಥಿತಿಯೇ ಭಕ್ತಿ….

Read More