ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ನಿಧನ

ವಿಜಯಪುರ : ಶ್ರೇಷ್ಠ ಶಿಕ್ಷಕ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ (96) ಸೋಮವಾರ ಬೆಳಿಗ್ಗೆ ನಿಧನರಾದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ನಗರದಲ್ಲಿ ಇರುವ ತಮ್ಮ ಮನೆಯಲ್ಲಿ ಬೆಳಗಿನ ಜಾವ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಪತ್ನಿ ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ‌ ಕನ್ನಡ ವಿಭಾಗದ ಡೀನ್ ಡಾ.ಮಹೇಶ ಚಿಂತಾಮಣಿ ಸೇರಿ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಹಲಸಂಗಿ ಗೆಳೆಯರ ಬಳಗದ ಸದಸ್ಯರಾಗಿದ್ದ ಈಶ್ವರಚಂದ್ರ ಚಿಂತಾಮಣಿ ಅವರು,…

Read More

ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ- 2021ಕ್ಕೆ ವಾಸುದೇವ ಆಯ್ಕೆ

ಕಾರವಾರ : ಅಪರೂಪದ ನಾಣ್ಯಗಳನ್ನು ಸಂಗ್ರಹಿಸುವ ಮೂಲಕ ತಾಲ್ಲೂಕಿನ ಶೇಜವಾಡದ ನಿವಾಸಿ ವಾಸುದೇವ ಅನಂತ ಹರ್ಚಿಕರ್ ‘ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ-2021’ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅವರು 2006ರಿಂದ 2020ರವರೆಗೆ ದೇಶದಲ್ಲಿ ಬಿಡುಗಡೆಯಾಗಿರುವ 21 ವಿಧಗಳ ನಾಣ್ಯಗಳನ್ನು ತಮ್ಮ ಸಂಗ್ರಹದಲ್ಲಿ ಹೊಂದಿದ್ದಾರೆ. ಅವರು ನಗರದ ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಯಾಗಿದ್ದಾರೆ. ಮೂರು ವರ್ಷಗಳಿಂದ ನಾಣ್ಯ ಸಂಗ್ರಹದ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ದೇಶದಲ್ಲಿ ಕೆಲವು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಕಾಲು ಆಣೆ, ಅರ್ಧ ಆಣೆ, ಎರಡೂ ಕಾಲು…

Read More

ನನ್ನ ಜಿಲ್ಲೆಗೂ ಒಲಿಂಪಿಕ್ ಕೀರ್ತಿ: ಸಭಾಧ್ಯಕ್ಷ ಕಾಗೇರಿ

ಬೆಂಗಳೂರು : ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ಅವರ ತರಬೇತುದಾರ ಕರ್ನಾಟಕದ ಕಾಶಿನಾಥ್ ನಾಯ್ಕ ಅವರಿಗೆ 10 ಲಕ್ಷ ರೂಪಾಯಿಗಳ ನಗದು ಬಹುಮಾನ ಘೋಷಿಸಿರುವ ಸರ್ಕಾರದ ನಿರ್ಧಾರಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟನೆ ಹೊರಡಿಸಿರುವ ಕಾಗೇರಿ ಅವರು, ಸ್ವರ್ಣ ಇತಿಹಾಸ ಬರೆದ ಕ್ರೀಡಾಪಟುವಿನ ತರಬೇತುದಾರರಿಗೆ ನಗದು ಬಹುಮಾನ ಘೋಷಿಸುವುದು “ಉದಾತ್ತ, ಪ್ರೋತ್ಸಾಹದಾಯಕ ಮತ್ತು ಪ್ರೇರಣಾತ್ಮಕವಾಗಿದೆ. ಇದು ಸರ್ಕಾರದ ಕಡೆಯಿಂದ ಉತ್ತೇಜನವಾಗಿದೆ. ತರಬೇತುದಾರರ ಸೇವೆಗಳನ್ನು ಗುರುತಿಸುವ ಈ…

Read More

ನಾಳೆ ದಿ.9ರಂದು ಕೃಷಿ ಕೂಲಿಕಾರರ ಪ್ರತಿಭಟನೆ

ಮುಂಡಗೋಡ : ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಸಂಹಿತೆಗಳು ಹಾಗೂ ಜನ ವಿರೋಧಿ ಕೃಷಿ ಕಾನೂನುಗಳು ಮತ್ತು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ರದ್ದುಪಡಿಸಬೇಕು ಎಂಬಿತ್ಯಾದಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ನಾಳೆ ದಿ.9ರಂದು ಸಿ.ಐ.ಟಿ.ಯು., ರೈತಸಂಘ, ಕೃಷಿಕೂಲಿಕಾರರ ಸಂಘದವರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕೃಷಿ ಕೂಲಿಕಾರರ ಸಂಘದ ತಾಲೂಕಾ ಅಧ್ಯಕ್ಷ ಭೀಮಣ್ಣ ಭೋವಿ ತಿಳಿಸಿದ್ದಾರೆ.

Read More

ಮಹದೇಶ್ವರ ಬೆಟ್ಟ: ಭಕ್ತರ ಅನುಪಸ್ಥಿತಿಯಲ್ಲಿ ಭೀಮನ ಅಮಾವಾಸ್ಯೆ ಪೂಜೆ

ಮಹದೇಶ್ವರ ಬೆಟ್ಟ : ಭೀಮನ ಅಮಾವಾಸ್ಯೆ ಪ್ರಯುಕ್ತ ಇಲ್ಲಿನ ಮಲೆಮಹದೇಶ್ವರ ಸ್ವಾಮಿಗೆ ಭಾನುವಾರ ವಿಶೇಷ ಪೂಜೆ ಪೂಜೆ ಸರಳ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿತು. ವಾರಾಂತ್ಯ ಕರ್ಫ್ಯೂ ಹಾಗೂ ಕೋವಿಡ್‌ ನಿಯಂತ್ರಣಕ್ಕಾಗಿ ವಾರಾಂತ್ಯದಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಿದ್ದರಿಂದ ಅವರ ಅನುಪಸ್ಥಿತಿಯಲ್ಲಿ ವಿವಧಿ ವಿಧಾನಗಳು ನಡೆದವು. ಸಾಮಾನ್ಯವಾಗಿ ಭೀಮನ ಅಮಾವಾಸ್ಯೆ ದಿನದಂದು ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆಯುತ್ತಾರೆ. ಧಾರ್ಮಿಕ ಕಾರ್ಯಕ್ರಮ : ಭಾನುವಾರ ಮುಂಜಾವು 3 ಗಂಟೆಯಿಂದಲೇ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ…

Read More

ಸ್ವಾತಂತ್ರ್ಯ ಸಂಗ್ರಾಮದ ನೆನಪು; ಕ್ವಿಟ್ ಇಂಡಿಯಾ ಚಳವಳಿ

ಬೆಂಗಳೂರು : ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಲು ಆಗಸ್ಟ್ 8ರ 1942ರಲ್ಲಿ ಮಹಾತ್ಮ ಗಾಂಧಿ ಕ್ವಿಟ್ ಇಂಡಿಯಾ ಚಳವಳಿ ಆರಂಭಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ವಿಟ್ ಇಂಡಿಯಾ ಚಳವಳಿ ಅತಿ ಮಹತ್ವದ್ದು ಎಂದು ಇತಿಹಾಸ ಹೇಳುತ್ತದೆ. ಭಾರತದ ಪಾಲಿಗೆ ಆಗಸ್ಟ್ ಅಂದರೆ ಕ್ರಾಂತಿಯ ತಿಂಗಳು. ಆಗಸ್ಟ್ 8 ನಾವು ಎಂದಿಗೂ ಮರೆಯಲಾಗದ ಕ್ರಾಂತಿಯ ದಿನ. ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ ಎಂದು ನಾವು ಎಚ್ಚರಿಕೆಯನ್ನು ಕೊಟ್ಟ ದಿನವಾಗಿವೆ. ದೇಶಕ್ಕೆ ಸ್ವತಂತ್ರ್ಯ ಸಿಕ್ಕಿದ್ದು ಸಹ ಆಗಸ್ಟ್ ತಿಂಗಳಿನಲ್ಲಿಯೇ. 1942ರ ಆಗಸ್ಟ್ 8ರಂದು…

Read More

ಖಾತೆ ಹಂಚಿಕೆ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ: ರೆಬೆಲ್ ಆದ ಆನಂದ್ ಸಿಂಗ್, ಎಂಟಿಬಿ ನಾಗರಾಜ್

ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಮಂತ್ರಿಮಂಡಲದಲ್ಲಿ 29 ಸಚಿವರಿಗೆ ಖಾತೆ ಹಂಚಿಕೆ ಮಾಡಿಯಾದ ಬೆನ್ನಲ್ಲೇ ಹಲವರ ಅಸಮಾಧಾನ ಸ್ಫೋಟಗೊಂಡಿದೆ. ತಮ್ಮಿಷ್ಟದ ಖಾತೆ ಸಿಕ್ಕಿಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ತಮಗೆ ಸಚಿವ ಸ್ಥಾನ ನೀಡಲಿಲ್ಲವೇಕೆ ಎಂದು ಮುಖ್ಯಮಂತ್ರಿಗಳ ಮನೆಬಾಗಿಲು ತಟ್ಟುತ್ತಿದ್ದಾರೆ. ಇಂದು ಬೆಳಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಶಾಸಕ ಸತೀಶ್ ರೆಡ್ಡಿ ಹೊರಗೆ ಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು 1993ರಿಂದ ಭಾರತೀಯ ಜನತಾ ಪಾರ್ಟಿಯಲ್ಲಿದ್ದೇನೆ, ಮೂರು ಬಾರಿ ಶಾಸಕ, ನಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿದ್ದೆ,…

Read More

ಒಂದೇ ಲಸಿಕೆಯ ಎರಡು ಡೋಸ್ ಗಳಿಗಿಂತ ಕೋವಿಶೀಲ್ಡ್, ಕೋವ್ಯಾಕ್ಸಿನ್ ಸಂಯೋಜನೆಯ ಡೋಸ್ ನಿಂದ ಉತ್ತಮ ಫಲಿತಾಂಶ!

ನವದೆಹಲಿ : ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಐಸಿಎಂಆರ್ ನಡೆಸಿರುವ ಅಧ್ಯಯನದಲ್ಲಿ ಮಹತ್ವದ ಅಂಶ ಬಹಿರಂಗಗೊಂಡಿದೆ. 98 ಮಂದಿಯನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಈ ಪೈಕಿ 18 ಮಂದಿ ಪ್ರಮಾದವಶಾತ್ ಎರಡೂ ಭಿನ್ನ ಡೋಸ್ ಗಳ ಲಸಿಕೆಯನ್ನು ಪಡೆದುಕೊಂಡಿದ್ದರು. ಉತ್ತರ ಪ್ರದೇಶದಲ್ಲಿ ಮೊದಲ ಡೋಸ್ ನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದುಕೊಂಡು ಎರಡನೇ ಡೋಸ್ ನಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡಿದ್ದರು. ಈ ರೀತಿ ಪ್ರಮಾದವಶಾತ್ ಎರಡೂ ಭಿನ್ನ ಡೋಸ್ ಗಳನ್ನು ಪಡೆದವರಲ್ಲಿ ಎರಡೂ ಡೋಸ್ ಗಳಲ್ಲಿ ಒಂದೇ ಲಸಿಕೆ ಪಡೆದುಕೊಂಡವರಿಗಿಂತ ಹೆಚ್ಚು ರೋಗನಿರೋಧಕ…

Read More

ನಾಳೆ ಎಸ್‌ಎಸ್‌ಎಲ್ ಸಿ ಪರೀಕ್ಷಾ ಫಲಿತಾಂಶ ಘೋಷಣೆ

ಬೆಂಗಳೂರು: ಸೋಮವಾರ ಮಧ್ಯಾಹ್ನ ಎಸ್‌ಎಸ್‌ಎಲ್ ಸಿ ಪರೀಕ್ಷಾ ಫಲಿತಾಂಶವನ್ನು ಘೋಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಹೊಸದಾಗಿ ನೇಮಕಗೊಂಡ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ನಾಳೆ ಅಂದರೆ ಸೋಮವಾರ ಮಧ್ಯಾಹ್ನ 3: 30 ಕ್ಕೆ SSLC ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಲಿದ್ದಾರೆ ಎಂದು ಕರ್ನಾಟಕ ಮಾಧ್ಯಮಿಕ ಶಾಲಾ ಪರೀಕ್ಷಾ ಮಂಡಳಿಯ (KSEEB) ನಿರ್ದೇಶಕಿ ಸುಮಂಗಲಾ ವಿ ಅವರು ಹೇಳಿದ್ದಾರೆ. ಫಲಿತಾಂಶವನ್ನು ಅಧಿಕೃತ KSEEB ವೆಬ್‌ಸೈಟ್ sslc.karnataka.gov.in ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ವಿದ್ಯಾರ್ಥಿಗಳು ಒಟ್ಟು ಶೇ….

Read More

ಒಳ್ಳೆಯ ಕೆಲಸ ಮಾಡಿದ್ದಾರೆ BSY : ಸಿದ್ಧರಾಮಯ್ಯ ಶ್ಲಾಘನೆ

ಬೆಂಗಳೂರು : ಸಚಿವ ಸಂಪುಟ ದರ್ಜೆ ಸೌಲಭ್ಯವನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಾಪಸ್ ನೀಡಿದ್ದಾರೆ. ಯಡಿಯೂರಪ್ಪ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಾನೇ ಯಡಿಯೂರಪ್ಪನವರಿಗೆ ಹೇಳೋಣ ಅಂದುಕೊಂಡಿದ್ದೆ. ನಾನು ಹೇಳುವ ಮೊದಲೇ ಯಡಿಯೂರಪ್ಪ ವಾಪಸ್ ಮಾಡಿದ್ದಾರೆ. ಅದು ಒಳ್ಳೆಯ ನಿರ್ಧಾರವಾಗಿದೆ. ಸಂಪುಟ ದರ್ಜೆ ಸ್ಥಾನಮಾನವನ್ನೊಪ್ಪದೇ ಯಡಿಯೂರಪ್ಪ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ಯಡಿಯೂರಪ್ಪ ಸಂಪುಟ ದರ್ಜೆ ಸ್ಥಾನವನ್ನು ನಿರಾಕರಿಸಿರುವುದಕ್ಕೆ ಮಾಜಿ ಸಿಎಂ…

Read More