ಸಿದ್ದರಾಮಯ್ಯ, ಎಂ.ಟಿ.ಬಿ. ಅಕ್ಕಪಕ್ಕ ಕುಳಿತು ಭೋಜನ

ಹೊಸಕೋಟೆ : ನಗರದಲ್ಲಿ ಶುಕ್ರವಾರ ನಡೆದ ಕನಕ ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನಾ ಸಮಾರಂಭವು ರಾಜಕೀಯವಾಗಿ ವಿರೋಧಿಗಳಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಎಂ.ಟಿ.ಬಿ ನಾಗರಾಜ್ ಅವರ ಮುಖಾಮುಖಿಗೆ ವೇದಿಕೆಯಾಯಿತು. ಸೊಸೈಟಿಯ ಉದ್ಘಾಟನೆಗೆ ಬಂದಿದ್ದ ಸಿದ್ದರಾಮಯ್ಯ ಅವರು ಎಂ.ಟಿ.ಬಿ ನಾಗರಾಜ್ ಅವರೊಟ್ಟಿಗೆ ಒಂದೇ ಟೇಬಲ್‌ನಲ್ಲಿ ಕುಳಿತು ಊಟ ಮಾಡಿ ಕುಶಲೋಪರಿ ವಿಚಾರಿಸಿದ್ದು, ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ತಡವಾಗಿ ಬಂದರು. ಅವರ ಬರುವಿಕೆಗಾಗಿ ಎಂ.ಟಿ.ಬಿ ನಾಗರಾಜ್ ಕಾದು ಕುಳಿತಿದ್ದರು. ಜತೆಯಲ್ಲಿಯೇ ಊಟ…

Read More

ಕಾಡಾನೆ ಅನುಮಾನಾಸ್ಪದ ಸಾವು

ಹುಣಸೂರು: ಗುರುಪುರ ಬಳಿಯ ಎನ್.ವಿಲೇಜ್ ಎಂಬಲ್ಲಿ 25ರಿಂದ 30 ವರ್ಷದ ಮಕನ ಆನೆ ಅನುಮಾನಾಸ್ಪದವಾಗಿ ಮೃತಪಟ್ಟಿದೆ. ಗುರುಪುರ ಗ್ರಾಮದ ಬಳಿಯ ಎನ್.ವಿಲೇಜ್‌ನಲ್ಲಿನ ಟಿಬೆಟ್‌ ನಿವಾಸಿ ಹೋಂಡಾ ಅವರಿಗೆ ಸೇರಿದ ಜಮೀನಿನಲ್ಲಿ ಮಕನ ಆನೆ ತಂತಿ ಬೇಲಿಗೆ ಹೊಂದಿಕೊಂಡಂತೆ ಬಿದ್ದು ಮೃತಪಟ್ಟಿದೆ. ಅರಣ್ಯ ಇಲಾಖೆಯ ಎಸಿಎಫ್ ಸತೀಶ್, ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ನಮನ ನಾರಾಯಣ ನಾಯಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಆನೆ ಮೈ ಮೇಲೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಗುಂಡು ಹೊಡೆದಿರುವ ಗಾಯವೂ ಇಲ್ಲ. ಮರಣೋತ್ತರ…

Read More

7ರ ಬಾಲಕಿ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ

ಸುಳ್ಯ : ಸಂಸ್ಕೃತದಲ್ಲಿ ಸ್ಪಷ್ಟ ಹಾಗೂ ನಿರರ್ಗಳವಾಗಿ ಶ್ಲೋಕಗಳನ್ನು ಪಠಿ ಸುವ ಜಾಲೂರು ಗ್ರಾಮದ ಮಾಬಲಡ್ಕ ಸರಮಾ ಭಟ್‌ ಎಂ. ಅವರು ಚಿಕ್ಕ ವಯಸ್ಸಿ ನಲ್ಲಿಯೇ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದ ಸಾಧನೆ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ 7ರ ಹರೆಯದ ಸರಮಾ ಒಟ್ಟು 40 ನಿತ್ಯ ಪಠಣದ ಶ್ಲೋಕಗಳನ್ನು ಹೇಳುತ್ತಾರೆ. ಕನಕಧಾರ ಸ್ತೋತ್ರ 21 ಚರಣಗಳು, ದೇವ್ಯಾಪರಾಧ ಕ್ಷಮಾಪಣ ಸ್ತೋತ್ರ 12 ಚರಣಗಳು, ಶಿವ ಮಾನಸಪೂಜಾ ಸ್ತೋತ್ರ 20 ಗೆರೆಗಳು ಇವೆ. 10 ಸಂಸ್ಕೃತ ಸುಭಾಷಿತಗಳು, 12…

Read More

ಸೆಪ್ಟೆಂಬರ್ 10ರ ವೇಳೆಗೆ ಕರ್ನಾಟಕದ ಕೋವಿಡ್ ಪ್ರಕರಣಗಳು 30 ಲಕ್ಷ ತಲುಪುವ ಸಾಧ್ಯತೆ

ಬೆಂಗಳೂರು : ಸೆಪ್ಟೆಂಬರ್ 10ರ ವೇಳೆಗೆ ಭಾರತದ ಕೋವಿಡ್ ಪ್ರಕರಣಗಳು 32.8 ಕೋಟಿ (3,28,42,435) ಮತ್ತು ಸಾವುಗಳು 4.40 ಲಕ್ಷ (4,40,220) ತಲುಪುವ ನಿರೀಕ್ಷೆಯಿದೆ ಎಂದು ಜೀವನ್ ರಕ್ಷಾ ವಿಶ್ಲೇಷಣೆ ತಿಳಿಸಿದೆ. ಕರ್ನಾಟಕದ ಕೋವಿಡ್ ಅಂಕಿಅಂಶಗಳು 29.50 ಲಕ್ಷ (29,50,000) ಮತ್ತು ಸಾವುಗಳು 37,470ಅನ್ನು ತಲುಪುವ ನಿರೀಕ್ಷೆಯಿದೆ. ಕೆಲವು ಜಿಲ್ಲೆಗಳು ಇತರರಿಗಿಂತ ಕೆಟ್ಟದಾಗಿವೆ. ಕೇಸ್ ಲೋಡ್ ವಿಷಯದಲ್ಲಿ ಸಮಸ್ಯೆ ಪ್ರದೇಶಗಳು ಬೆಂಗಳೂರು ನಗರ, ಇದು ಕಳೆದ ನಾಲ್ಕು ವಾರಗಳಲ್ಲಿ ರಾಜ್ಯದಲ್ಲಿ ಶೇಕಡಾ ೨೪ ರಷ್ಟು ಹೊಸ ಪ್ರಕರಣಗಳನ್ನು…

Read More

ಶಿರಸಿ : ಕಾಡಿನ ನಿಜ ನಾಗರ ಹಾವಿಗೆ ಹಾಲೆರದು‌ ಪೂಜೆ.!

ಶಿರಸಿ : ಗಿಡ ,ಮರ , ಬಳ್ಳಿ ,ಪ್ರಾಣಿ ,ಪಕ್ಷಿ , ನದಿ , ಸಮುದ್ರ , ಪರ್ವತ , ಬೆಟ್ಟ , ಗುಡ್ಡಗಳನ್ನು ಆರಾಧಿಸುವ ಭಾರತೀಯ ಆಚಾರ – ವಿಚಾರ ಪ್ರಪ್ರಥಮ ದೈವೀಕರಿಸಿದ ಪ್ರಾಣಿ “ನಾಗ” ಅಥವಾ “ಸರ್ಪ”. ಪರಶುರಾಮ ಸೃಷ್ಟಿ ಎಂದು ನಂಬಲಾಗುವ ಈ ಪಶ್ಚಿಮ ಕರಾವಳಿಯಲ್ಲಂತೂ ನಾಗ ಶ್ರದ್ಧೆ ವಿಶಿಷ್ಟವಾಗಿದೆ. ನಾಗರ ಪಂಚಮಿಯ ಆಚರಣೆಯಲ್ಲಿ ಪ್ರಾದೇಶಿಕ ಭಿನ್ನತೆ ಇದೆ. ನಾಗರ ಬನದಲ್ಲಿ ಪೂಜೆ ಮಾಡಿ ಭಕ್ತಿ ಶ್ರದ್ಧೆ ಅರ್ಪಿಸುವುದು ನಾಗರ ಪಂಚಮಿಯ ದಿನ ಸರ್ವೇ…

Read More

ನಿಸರ್ಗ ವೈನ್ ಶಾಪ್‌ನ ಕಳ್ಳತನ

ಮುಂಡಗೋಡ : ತಾಲೂಕಿನ ಮಳಗಿ ಗ್ರಾಮದ ನಿಸರ್ಗ ವೈನ್ ಶಾಪ್‌ನ ಶೆಟರ್ ಕತ್ತರಿಸಿ ಒಳಗಿದ್ದ ಮದ್ಯದ ಬಾಟಲಿ, ಹಾಗೂ ೧೦ಸಾವಿರರೂ. ನಗದು ಮತ್ತು ಸಿಸಿಟಿವಿ, ಡಿವಿಆರ್ ದುಷ್ಕರ್ಮಿಗಳು ಕದ್ದುಕೊಂಡು ಹೋದ ಘಟನೆ ಸಂಭವಿಸಿದೆ.ವೈನ್ ಶಾಪ್‌ನಲ್ಲಿದ್ದ ಸಿಸಿಟಿವಿ, ಡಿವಿಆರ್‌ನ್ನು ಕಳ್ಳರು ಕದ್ದುಕೊಂಡು ಹೋಗಿರುವುದರಿಂದ ಕಳ್ಳರ ಪತ್ತೆ ಮಾಡಲು ಪೊಲೀಸರಿಗೆ ಸ್ವಲ್ಪ ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ.ಘಟನಾಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ಮಳಗಿ ಸೆಂಟ್ ಮಿಲಾಗ್ರಿಸ್ ಸೊಸೈಟಿಯಲ್ಲಿ ಕಳ್ಳತನವಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Read More

ನ್ಯಾಯಬೆಲೆ ಅಂಗಡಿಯ ವಿತರಕರ ಮೇಲೆ ಹಲ್ಲೆ ಘಟನೆ : ಖಂಡನೆ

ಮುಂಡಗೋಡ : ಹಳಿಯಾಳ ತಾಲೂಕಿನ ಶಿವಪುರ ಗ್ರಾಮದ ನ್ಯಾಯಬೆಲೆ ಅಂಗಡಿಯ ವಿತರಕ ಬಸವರಾಜ ಹರಿಜನ ಎಂಬುವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಹಲ್ಲೆ ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಂಡಗೋಡ ತಾಲೂಕು ಪಡಿತರ ವಿತರಕರ ಸಂಘದವರು ಗ್ರೇಡ್ ೨ ತಹಶೀಲದಾರ ಜಿ.ಬಿ.ಭಟ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಡಿತರ ವಿತರಕರ ಸಂಘದ ರಾಜ್ಯ ಸಂಘಟನಾ ಕಾರ‍್ಯದರ್ಶಿ ಶ್ರೀಧರ ಡೋರಿ, ರಾಜ್ಯ ಸಮಿತಿ ಸದಸ್ಯ ಸಿ.ಕೆ.ಅಶೋಕ, ರಾಧಾಕೃಷ್ಣ ರಾಯ್ಕರ, ಪಿ.ಡಿ.ನಾಯ್ಕ,…

Read More

ಕೊರೋನಾ 3ನೇ ಅಲೆ ತಗ್ಗಿಸಲು ತಜ್ಞರ ಸಲಹೆ ಪಡೆದು ನಿರ್ಧಾರ; ಅಂಗಾಂಗ ದಾನಕ್ಕೆ ಬೊಮ್ಮಾಯಿ ಕರೆ

ಉಡುಪಿ: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕೊರೋನಾ 3ನೇ ಅಲೆ ಏಳುವ ಲಕ್ಷಣ ದಟ್ಟವಾಗಿ ಕಾಡುತ್ತಿದೆ. ಮಕ್ಕಳಲ್ಲಿ ವಿಶೇಷವಾಗಿ ಕಳೆದ 10 ದಿನಗಳಿಂದ ಕೊರೋನಾ ಮಹಾಮಾರಿ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಕೊರೊನಾ 3ನೇ ಅಲೆ ತಗ್ಗಿಸಲು ತಜ್ಞರ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಇಂದು ಬೆಳಗ್ಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಇಂದು ಬೆಂಗಳೂರಿಗೆ ಬಂದ ತಕ್ಷಣ ತಜ್ಞರ ತುರ್ತು ಸಭೆ ಕರೆದಿದ್ದಾರೆ. ತಜ್ಞರ ವರದಿ ಮತ್ತು ಅವರ ಅಭಿಪ್ರಾಯ ಆಧರಿಸಿ…

Read More

ಆಟೋ-ಬಸ್ ಚಾಲಕರು, ತಾಂತ್ರಿಕ ಸಿಬ್ಬಂದಿ ಮೃತಪಟ್ಟರೆ 5 ಲಕ್ಷ ಪರಿಹಾರ..!

ಬೆಂಗಳೂರು : ಆಟೋ ರಿಕ್ಷಾ, ಬಸ್ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿ ಮೃತಪಟ್ಟರೆ ಸರ್ಕಾರದಿಂದ ಐದು ಲಕ್ಷ ಪರಿಹಾರ ನೀಡುವ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕಾಲಕ್ಕೆ ನಾನೇ ಚಾಲಕನಾಗಿ ಕೆಲಸ ಮಾಡಿದ್ದೆ. ಕಾರ್ಮಿಕರ ಕಷ್ಟಗಳು ಏನೆಂಬುದು ನನಗೆ ಗೊತ್ತು. ಹೀಗಾಗಿ ಕಾರ್ಮಿಕರು ಮೃತಪಟ್ಟರೆ ಐದು ಲಕ್ಷ ಪರಿಹಾರ ಕೊಡುವ ಹೊಸ ಮಸೂದೆಯನ್ನು ಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು. ಕಾರ್ಮಿಕ ಇಲಾಖೆಯಲ್ಲಿ…

Read More

ಪೊಲೀಸ್ ಮನೆ ಆವರಣದಲ್ಲಿ ಹಾವು ಪ್ರತ್ಯಕ್ಷ

ದಾಂಡೇಲಿ : ನಾಗರ ಪಂಚಮಿಯ ದಿನದಂದೆ ಪೊಲೀಸ್ ಸಿಬ್ಬಂದಿ ಮಹಾದೇವ ಮನೆಯ ಆವರಣಕ್ಕೆ ಹಾವು ಕಾಣಿಸಿಕೊಂಡಿತು. ಹಾವು ನೋಡಿದ ಅವರ ಪುಟ್ಟ ಮಗ ಅಥರ್ವ ಕಿರುಚಾಡಿ, ಅಲ್ಲೆ ಇದ್ದ ತಂದೆ ಮಹಾದೇವ ಅವರ ಗಮನಕ್ಕೆ ತಂದಿದ್ದಾನೆ. ಅವರು ಉರಗ ಪ್ರೇಮಿ ರಾಘವೇಂದ್ರ.ವಿ.ನಾಯಕ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರತ ತಜ್ಞ ರಾಘವೇಂದ್ರ ಸುರಕ್ಷಿತವಾಗಿ ಹಾವನ್ನು ಹಿಡಿದು ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ. ರಾಘವೇಂದ್ರವರ ಈ ಕಾರ್ಯಕ್ಕೆ ಮಹಾದೇವ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read More