Headlines

ಬೇಲಿಗೆ ಸೀರೆ ಹಾಕಿ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಣೆ

ಮುಂಡಗೋಡ : ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ವಿಶೇಷವಾದ ಮಾರ್ಗವನ್ನು ಕಂಡು ಹಿಡಿಯುವ ಮೂಲಕ ತಮ್ಮ ಬೆಳೆಯನ್ನು ರಕ್ಷಣೆಗೆ ಮುಂದಾಗಿದ್ದಾರೆ.ತಾಲೂಕಿನ ರೈತರಿಗೆ ಭತ್ತದ ಪ್ರಮುಖ ಬೆಳೆಯಾಗಿದ್ದು ಬಹುತೇಕ ರೈತರು ಭತ್ತದ ಬೆಳೆಯ ನ್ನು ಬೆಳೆಯುತ್ತಾರೆ.ಆದರೆ ಮಳೆಯ ಏರುಪೇರಿನಿಂದ ಕೆಲ ವರ್ಷಗಳಿಂದ ತಾಲೂಕಿನ ರೈತರು ಗೋವಿನಜೋಳವನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತಿದ್ದಾರೆ. ಈ ಬಾರಿ ತಾಲೂಕಿನಲ್ಲಿ ಐದುಸಾವಿರ ಹೆಕ್ಟರಗೂ ಅಧಿಕ ಪ್ರದೇಶದಲ್ಲಿ ಗೋವಿನಜೋಳ ಬೆಳೆ ಬೆಳೆಯಲಾಗಿದೆ.ಗೋವಿನಜೋಳ ಬೆಳೆಗಾರರು ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಗದ್ದೆಯ ಸುತ್ತಲು ಬೇಲಿಯನ್ನು ಹಾಕುತ್ತಾರೆ….

Read More

ನಿವೃತ್ತಿ ಸೈನಿಕನಿಗೆ ಅದ್ದೂರಿ ಸ್ವಾಗತ

ಮುಂಡಗೋಡ : ಸೇನೆಯಲ್ಲಿ ೧೮ ವರ್ಷ ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತಿಯಾದ ಚಂದ್ರು ಶಿಗ್ಗಾಂವಿ ಅವರನ್ನು ಇಂದು ಮಳಗಿ ಮತ್ತು ಗೊಟಗೋಡಿಕೊಪ್ಪ ಗ್ರಾಮಸ್ಥರು ಅವರನ್ನು ಟ್ಯಾಕ್ಟರನಲ್ಲಿ ಮೆರವಣಿಗೆ ಮಾಡಿ ಅದ್ದೂರಿಯಾಗಿ ಸ್ವಾಗತಿಸಿದ ಘಟನೆ ಜರುಗಿದೆ. ಚಂದ್ರು ಶಿಗ್ಗಾಂವಿ ಅವರು ಹೈದ್ರಾಬಾದ್, ಅರುಣಾಚಲ ಪ್ರದೇಶ, ಪಂಜಾಬ, ಜಮ್ಮು ಕಾಶ್ಮೀರ, ಲಡಾಕನಲ್ಲಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯದ ಹಿನ್ನೆಲೆಯಲ್ಲಿ ಇಂದು ಮಳಗಿಯಿಮದ ಅವರ ಸ್ವಂತ ಊರಾದ ಗೊಟಗೋಡಿಕೊಪ್ಪದ ವರೆಗೆ ಮೆರವಣಿಗೆಯಲ್ಲಿ ಚಂದ್ರು ಶಿಗ್ಗಾಂವಿ ಅವರನ್ನು ಸ್ವಾಗತಿಸಿ, ಕರೆತರಲಾಯಿತು. ಈ ಸಂದರ್ಭದಲ್ಲಿ…

Read More

ಪುತ್ರನಿಗೆ ಸಿಗದ ಸಚಿವ ಸ್ಥಾನ, ಬಿಎಸ್‍ವೈ ತಂತ್ರ ವಿಫಲ

ಬೆಂಗಳೂರು : ಮುಖ್ಯಮಂತ್ರಿ ಆಯ್ಕೆ ಯಲ್ಲಿ ಮೇಲುಗೈ ಸಾಧಿಸಿದ್ದ ಯಡಿಯೂರಪ್ಪ ಅವರು ಸಂಪುಟ ರಚನೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. ತಮ್ಮ ಪುತ್ರ ಹಾಗೂ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಲು ಕೊನೆ ಕ್ಷಣದವರೆಗೂ ನಡೆಸಿದ ಪ್ರಯತ್ನ ಫಲಕೊಟ್ಟಿಲ್ಲ. ಇದು ರಾಜಕೀಯವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹಿನ್ನಡೆಯೆಂದೇ ವ್ಯಾಖ್ಯಾನಿಸಲಾಗಿದೆ. ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅಚ್ಚರಿ ಅಭ್ಯರ್ಥಿಯಾಗಿ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದ ಯಡಿಯೂರಪ್ಪ, ಈ ಬಾರಿ ತಮ್ಮ…

Read More

ಒಂದೆರಡು ದಿನದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ – ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ನೂತನ ಸಂಚಿವ ಸಂಪುಟ ರಚನೆಯ ನಂತ್ರ, ಮೊದಲ ಸಂಪುಟ ಸಭೆಯನ್ನು ನಡೆಸಿದ ಬಳಿಕ, ಸಚಿವರಿಗೆ ಒಂದೆರಡು ದಿನಗಳಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು. ಈ ಕುರಿತಂತೆ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ರಾಜ್ಯದಲ್ಲಿನ ಕೊರೋನಾ 3ನೇ ಅಲೆ ತಡೆ, ನೆರೆ, ಪರಿಹಾರ ಕಾಮಗಾರಿ ನಿರ್ವಹಣೆಗಾಗಿ ಸಚಿವರಿಗೆ ಹೊಣೆಗಾರಿಕೆ ವಹಿಸಲಾಗುತ್ತದೆ. ಸ್ಥಳೀಯವಾಗಿಯೇ ನೆರೆಯಿಂದಾಗಿ ಸಂತ್ರಸ್ತರಾದಂತವರಿಗೆ ಪರಿಹಾರ ನೀಡುವಂತ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು. ನಾಳೆಯೇ ಜಿಲ್ಲೆಗಳಿಗೆ…

Read More

ಸಚಿವರಾಗಿ ಹೆಬ್ಬಾರ್ ಪ್ರಮಾಣ ವಚನ ಸ್ವೀಕಾರ : ಸಂಭ್ರಮ

ಮುಂಡಗೋಡ : ಶಾಸಕ ಶಿವರಾಮ ಹೆಬ್ಬಾರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮುಂಡಗೋಡನಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಿದ್ದಪ್ಪ ಹಡಪದ, ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಗಣೇಶ ಶಿರಾಲಿ, ಭರತರಾಜ ಹದಳಗಿ, ಪ್ರಶಾಂತ ಲಮಾಣಿ, ರಾಮಣ್ಣ ಲಮಾಣಿ, ಯಲ್ಲಪ್ಪ ಮಜ್ಜಿಗೇರಿ, ಅಶೋಕ ಹಸರಂಬಿ ಮುಂತಾದವರಿದ್ದರು.

Read More

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ : ರೈತಸಂಘದಿಂದ ಮುತ್ತಿಗೆ

ಮುಂಡಗೋಡ : ಖಾಸಗಿ ರಸಗೊಬ್ಬರಗಳ ಅಂಗಡಿಯಲ್ಲಿ ಯುರಿಯಾ ಗೊಬ್ಬರವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಇಂದು ರೈತ ಸಂಘದವರು ಮಹಾಲಕ್ಷ್ಮೀ ಆಗ್ರೋ ಟ್ರೆಡರ್ಸ ಮತ್ತು ಪ್ರಸನ್ನ ಆಗ್ರೋ ಟ್ರೆಡರ್ಸ ಅಂಗಡಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಈ ಎರಡು ಅಂಗಡಿಗಳ ಲೈಸನ್ಸ ರದ್ದು ಪಡಿಸುವಂತೆ ರೈತಸಂಘದವರು ಆಗ್ರಹಿಸಿದರು. ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಅವರು, ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಈ ಎರಡು ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳುವ…

Read More

ಬಸವನಹೊಂಡ ಸ್ವಚ್ಛಗೊಳಿಸುವಂತೆ ಬಿಜೆಪಿ ಯುವ ಮೋರ್ಚಾ ಮನವಿ

ಮುಂಡಗೋಡ : ನಗರದ ಬಸವನ ಹೊಂಡವನ್ನು ಸ್ವಚ್ಛಗೊಳಿಸುವಂತೆ ಬಿಜೆಪಿ ಯುವ ಮೋರ್ಚಾ ಮುಂಡಗೋಡ ಪಟ್ಟಣ ಪಂಚಾಯತ ಅಧ್ಯಕ್ಷರಿಗೆ, ಸದಸ್ಯರಿಗೆ ಮನವಿಯೊಂದು ಸಲ್ಲಿಸಿದೆ. ಬಸವನ ಹೊಂಡದಲ್ಲಿ ಕಳೆದ 4-5 ವರ್ಷಗಳಿಂದ 4 ಜನರು ಸಾವನ್ನಪ್ಪಿದ್ದಾರೆ. ಹಿಂದುಗಳ ಆರಾಧ್ಯ ದೈವವಾದ ಗಣೇಶನನ್ನು ಗಣೇಶ ಹಬ್ಬದಲ್ಲಿ ಇದೇ ಹೊಂಡದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಆದ ಕಾರಣ ಈ ಹೊಂಡವನ್ನು ಸ್ವಚ್ಛಗೊಳಿಸಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಅನುವು ಮಾಡಿಕೊಡಬೇಕೆಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಗಣೇಶ ಶಿರಾಲಿ ಅವರು ಪಟ್ಟಣ ಪಂಚಾಯತ ಅಧ್ಯಕ್ಷರಿಗೆ,…

Read More

ಗುಡ್ಡದ ಆಂಜನೇಯ ದೇವಸ್ಥಾನಕ್ಕೆ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮನವಿ

ಮುಂಡಗೋಡ : ನ್ಯಾಸರ್ಗಿ, ಕುಂದರಗಿ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀಸೂರ್ಯನಾರಾಯಣ ಮತ್ತು ಗುಡ್ಡದ ಆಂಜನೇಯ ದೇವಸ್ಥಾನದ ಗುಡ್ಡದ ಮೇಲ್ಭಾಗದಲ್ಲಿ ನೀರಿನ ಪೂರೈಕೆ, ವಿದ್ಯುತ್ ಸೌಕರ್ಯದ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ಗ್ರಾಮಸ್ಥರು, ಭಕ್ತರು, ದೇವಸ್ಥಾ ಭಕ್ತ ಮಂಡಳಿಯವರು ಇಂದು ಬಾಚಣಕಿ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರಿಗೆ ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಅಯ್ಯಪ್ಪ ಭಜಂತ್ರಿ, ಉದಯ ಶಿರಾಲಿ, ವೆಂಕಟೇಶ ಕಾಟವೇಕರ, ಮಾಂತೇಶ ಕೇಣಿ, ಅಣ್ಣಪ್ಪ ಭೋವಿ ಮುಂತಾದವರಿದ್ದರು.

Read More