ಮುಂಡಗೋಡ : ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ

ಮುಂಡಗೋಡ : ಮುಂಡಗೋಡ ಗ್ರಾಮದೇವಿ ಶ್ರೀ ಮಾರಿಕಾಂಬಾ(ದ್ಯಾಮವ್ವ)ದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಇಂದು ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಈ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

Read More

ಮುಡಾ ವಿಚಾರದಲ್ಲಿ ಸಿಎಂಗೆ ಯಾವುದೇ ಆತಂಕ ಇಲ್ಲ : ಜಿ.ಪರಮೇಶ್ವರ್

ಬೆಂಗಳೂರು: ಮುಡಾ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ಆತಂಕ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಮಾತನಾಡಿದ ಅವರು, ಸಿಎಂಗೆ ಯಾವುದೇ ಆತಂಕ ಇಲ್ಲ. ಅವರು ಮುಡಾ ವಿಚಾರದಲ್ಲಿ ಸ್ಪಷ್ಟವಾಗಿದ್ದಾರೆ. ಅವರ ತಪ್ಪು ಏನೂ ಇಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಅನ್ನೋದು ಅವರ ತಲೆಯಲ್ಲಿ ಸ್ಪಷ್ಟವಾಗಿದೆ. ಅದನ್ನೇ ಅವರು ಎಲ್ಲರಿಗೂ ಹೇಳ್ತಿದ್ದಾರೆ. ತಾವೇನೂ ಕಾನೂನು ಬಾಹಿರ ತಪ್ಪು ಮಾಡಿಲ್ಲ ಅಂತನೇ ಹೇಳಿದ್ದಾರೆ. ಸಿಎಂ ಆಗಿದ್ದಾಗಲೂ, ವಿಪಕ್ಷ ನಾಯಕ ಆಗಿದ್ದಾಗಲೂ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಅಂತಾ…

Read More

ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್ : ಮಾಜಿ ಆಯುಕ್ತರ ವಿರುದ್ಧವೇ ಲೋಕಾಯುಕ್ತದಲ್ಲಿ ದೂರು ದಾಖಲು!

ಮೈಸೂರು: ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಜಿ.ಟಿ ಸೇರಿ ಇಬ್ಬರ ವಿರುದ್ಧ ದೂರು ದಾಖಲಾಗಿದೆ. ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಾದಲ್ಲಿ ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ಜಿ.ಟಿ ಹಾಗೂ ನಟೇಶ್ ವಿರುದ್ಧ ದೂರು ನೀಡಲಾಗಿದೆ. ಬಿಜೆಪಿ ಶಾಸಕ ಶ್ರೀವತ್ಸ ಅವರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಡಾ ಆಯುಕ್ತ ನಟೇಶ್ ಹಾಗೂ ದಿನೇಶ್ ಕುಮಾರ್ ಜಿ.ಟಿ…

Read More

ರೈಲ್ವೆ ಎಲ್ಲರಿಗೂ ಆರಾಮದಾಯಕ ಪ್ರಯಾಣದ ಖಾತರಿಯಾಗುವವರೆಗೂ ನಿಲ್ಲುವುದಿಲ್ಲ: ಪ್ರಧಾನಿ ಮೋದಿ

ನವದೆಹಲಿ: ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರೈಲ್ವೆ ದೊಡ್ಡ ದಾಪುಗಾಲು ಇಟ್ಟಿದೆ ಮತ್ತು ಸಮಾಜದ ಎಲ್ಲಾ ವರ್ಗಗಳಿಗೆ ಆರಾಮದಾಯಕ ಪ್ರಯಾಣದ ಖಾತರಿಯಾಗುವವರೆಗೆ ಇದು ನಿಲ್ಲುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ವರ್ಚುವಲ್ ಫ್ಲ್ಯಾಗ್ಆಫ್ ಸಮಾರಂಭದಲ್ಲಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. “ವರ್ಷಗಳಿಂದ ತನ್ನ ಕಠಿಣ ಪರಿಶ್ರಮದ ಮೂಲಕ, ರೈಲ್ವೆ ದೀರ್ಘಕಾಲೀನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ದೊಡ್ಡ ದಾಪುಗಾಲು ಹಾಕಿದೆ ಮತ್ತು ಹೊಸ ಭರವಸೆಗಳು ಮತ್ತು ಪರಿಹಾರಗಳನ್ನು ನೀಡಿದೆ. ಭಾರತೀಯ ರೈಲ್ವೆ…

Read More

ನಟ ದರ್ಶನ್‌ಗಾಗಿ ಬಟ್ಟೆ, ಡ್ರೈಪ್ರೂಟ್ಸ್ ತಂದ ಪತ್ನಿ ವಿಜಯಲಕ್ಷ್ಮಿ…..

ಬಳ್ಳಾರಿ : ಕೊಲೆ ಆರೋಪಿ ದರ್ಶನ್‌ನನ್ನ ನೋಡಲು ಬಳ್ಳಾರಿ ಸೆಂಟ್ರಲ್‌ ಜೈಲಿಗೆ ಭೇಟಿ ನೀಡಿರುವ ಪತ್ನಿ ವಿಜಯಲಕ್ಷ್ಮಿ ಅವರು, ದರ್ಶನ್‌ಗಾಗಿ ಸುಮಾರು ಮೂರು ಬ್ಯಾಗ್‌ಗಳಲ್ಲಿ ಬಟ್ಟೆ ಹಾಗೂ ಆರೋಗ್ಯಕರ ತಿಂಡಿಗಳನ್ನು ತಂದಿದ್ದಾರೆ ಎಂದು ತಿಳಿದುಬಂದಿದೆ.ಮೂರು ಬ್ಯಾಗ್‌ಗಳ ಸಮೇತ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದ ವಿಜಯಲಕ್ಷ್ಮಿ ದರ್ಶನ್‌ಗೆ ಕೊಡಲು ಟೀ ಶರ್ಟ್ ಸೇರಿದಂತೆ ಇತರ ಬಟ್ಟೆಗಳು, ಬಿಸ್ಕೆಟ್‌ ಹಾಗೂ ಡ್ರೈ ಫ್ರೂಟ್ಸ್‌ಗಳನ್ನೂ ತೆಗೆದುಕೊಂಡು ಬಂದಿದ್ದಾರೆ. ಪೊಲೀಸರು ಬ್ಯಾಗ್‌ ಪರಿಶೀಲಿಸಿದ ಬಳಿಕವೇ ಅವುಗಳನ್ನು ಜೈಲಿನ ಒಳಗೆ ಕೊಂಡೊಯ್ಯಲು ಅನುಮತಿಸಿದ್ದಾರೆ.   ದಿನದಲ್ಲೇ 4…

Read More

ಸಿಎಂ ಸಿದ್ಧರಾಮಯ್ಯಗೆ ಮತ್ತೆ ತಾತ್ಕಾಲಿಕ ರಿಲೀಫ್: ಸೆ.2ಕ್ಕೆ ಹೈಕೋರ್ಟ್ ನಿಂದ ಅರ್ಜಿ ವಿಚಾರಣೆ ಮುಂದೂಡಿಕೆ |

ಬೆಂಗಳೂರು: ಮುಡಾ ಹಗರಣದಲ್ಲಿ ರಾಜ್ಯಪಾಲರು ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್.2ಕ್ಕೆ ಮುಂದೂಡಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಮತ್ತೆ ತಾತ್ಕಾಲಿಕ ರಿಲೀಫ್ ನೀಡಿದೆ. ಇಂದು ಸಿಎಂ ಸಿದ್ಧರಾಮಯ್ಯ ಅವರು ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು. ದೂರುದಾರ ಪ್ರದೀಪ್ ಕುಮಾರ್ ಪರವಾಗಿ ಹಿರಿಯ ವಕೀಲ…

Read More

ಕಾರವಾರದ ಸೀಬರ್ಡ್ ನೌಕಾನೆಲೆ ಸಿಬ್ಬಂದಿಗಳಿಗೆ ಹನಿಟ್ರ್ಯಾಪ್, ಮಾಹಿತಿ ಸೋರಿಕೆ ಶಂಕೆ: NIAಯಿಂದ ತನಿಖೆ

ಕಾರವಾರ: ಇಲ್ಲಿನ ಸೀಬರ್ಡ್ ನೌಕಾನೆಲೆಯ ಸಿಬ್ಬಂದಿಗಳಿಗೆ ಹನಿಟ್ರ್ಯಾಪ್ ಮಾಡಿರುವಂತ ಯುವತಿಯೊಬ್ಬಳು ಮಾಡಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಪಾಕಿಸ್ತಾನಕ್ಕೆ ನೌಕಾನೆಲೆಯ ಮಾಹಿತಿ ಸೋರಿಕೆಯ ಶಂಕೆ ವ್ಯಕ್ತವಾಗಿರುವ ಕಾರಣ, ಎನ್ಐಎಯಿಂದ ತನಿಖೆಯನ್ನು ನಡೆಸಲಾಗುತ್ತಿದೆ. ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವಂತ ಮೂವರು ಸಿಬ್ಬಂದಿಗಳಿಗೆ ಫೇಸ್ ಬುಕ್ ಮೂಲಕ ತಾನು ಮರೈನ್ ಅಧಿಕಾರಿ ಎಂಬುದಾಗಿ ಯುವತಿಯೊಬ್ಬಳು ಪರಿಚಯ ಮಾಡಿಕೊಂಡು, ಹನಿಟ್ರ್ಯಾಪ್ ಮಾಡಿರುವುದಾಗಿ ತಿಳಿದು ಬಂದಿತ್ತು. ಮುದಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಸೇರಿದಂತೆ ಮೂವರು ಯುವಕರಿಗೆ ಯುವತಿಯೊಬ್ಬಳು ಹನಿಟ್ರ್ಯಾಪ್…

Read More

`ಪೋಕ್ಸೊ’ ಕೇಸ್ ನಲ್ಲಿ ಮಾಜಿ ಸಿಎಂ `BSY’ಗೆ ಹೈಕೋರ್ಟ್ ಬಿಗ್ ರಿಲೀಫ್ : ಬಂಧಿಸದಂತೆ ನೀಡಿದ್ದ ಆದೇಶ ಮತ್ತೆ ವಿಸ್ತರಣೆ!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಮಧ್ಯಂತರ ಆದೇಶದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಆದೇಶಿಸಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪೋಕ್ಸೋ ಪ್ರಕರಣದಲ್ಲಿ ಬಂಧನದ ಭೀತಿ ಎದುರಾಗಿತ್ತು. ಈ ಹಿನ್ನಲೆಯಲ್ಲಿ ಬಿಎಸ್ ಯಡಿಯೂರಪ್ಪ ಅವರು ಪ್ರಕರಣ ರದ್ದುಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ…

Read More

ಉ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷರ ಮೇಲೆ ಪೊಲೀಸ್ ಅಧಿಕಾರಿಯಿಂದ ದೌರ್ಜನ್ಯ : ಮುಂಡಗೋಡ ಕ.ಸಾ.ಪ. ಖಂಡನೆ

ಮುಂಡಗೋಡ : ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮೇಲೆ ಪೊಲೀಸ ಅಧಿಕಾರಿಯಿಂದ ದೌರ್ಜನ್ಯ ನಡೆದಿದ್ದನ್ನು ಮುಂಡಗೋಡ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಖಂಡಿಸಿ, ಸೂಕ್ತ ಕ್ರಮಕ್ಕಾಗಿ ಮೂಲಕ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದೆ.   ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಪತ್ರಕರ್ತರಾದ ದಾಂಡೇಲಿಯ ಬಿ.ಎನ್.ವಾಸರೆಯವರು ದಾಂಡೇಲಿಯ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯ ವಿಷಯ ತಿಳಿದು ವರದಿ ಮಾಡಲು ಹೋದಾಗ ಅಲ್ಲಿಗೆ ಬಂದ ದಾಂಡೇಲಿಯ ಸಿಪಿಐ ಭೀಮಣ್ಣ ಸೂರಿ…

Read More

ಪತ್ರಕರ್ತರ ವಿರುದ್ಧ ಪೊಲೀಸ್ ಅಧಿಕಾರಿಯ ವರ್ತನೆ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ

ಮುಂಡಗೋಡ : ದಾಂಡೇಲಿಯ ಪೊಲೀಸ್ ವೃತ್ತ ನಿರೀಕ್ಷಕರಾದ ಭೀಮಣ್ಣ ಎಂ. ಸೂರಿ ಅವರು ಪತ್ರಕರ್ತರ ಜೊತೆ ದರ್ಪದಿಂದ ಹಾಗೂ ಅನುಚಿತವಾಗಿ ನಡೆದುಕೊಂಡಿರುವುದನ್ನು ಖಂಡಿಸಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಇಲ್ಲಿನ ಉಪತಹಶೀಲ್ದಾರ್ ಜಿ.ಬಿ.ಭಟ್ಟ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು. ದಾಂಡೇಲಿ ನಗರದ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರ ವಿರುದ್ಧ ಅದೇ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ದಾಂಡೇಲಿಯ ಪೊಲೀಸ್ ವೃತ್ತ ನಿರೀಕ್ಷಕರಾದ ಭೀಮಣ್ಣ ಎಂ. ಸೂರಿ ಅವರು ಪತ್ರಕರ್ತರ…

Read More