ಅರಶಿಣಗೇರಿಯಲ್ಲಿ ರೈತನ ಆತ್ಮಹತ್ಯೆ

ಮುಂಡಗೋಡ : ತಾಲೂಕಿನ ಅರಶಿಣಗೇರಿ ಗ್ರಾಮದಲ್ಲಿ ಶನಿವಾರ ರೈತನೊಬ್ಬ ಮನನೊಂದು ಅರಣ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರಶಣಗೇರಿ ಗ್ರಾಮದ ದೇವೇಂದ್ರಪ್ಪ ತೆಗ್ಗಳ್ಳಿ(60) ಮೃತಪಟ್ಟ ರೈತನಾಗಿದ್ದಾನೆ. ಜಮೀನಿನಲ್ಲಿ ಈ ಬಾರಿ ಶೇಂಗಾ ಬೆಳೆಯನ್ನು ಬೆಳೆಯಲು ವಿವಿಧ ಸಂಘ-ಸಂಸ್ಥೆ ಹಾಗೂ ಸೊಸೈಟಿಗಳಲ್ಲಿ ಸಾಲ ಮಾಡಿದ್ದ. ಆದರೆ ಶೇಂಗಾ ಬೆಳೆ ತೆಗೆಯುವ ವೇಳೆ ಮಳೆ ಬಂದು ಬೆಳೆ ಹಾಳಾಗಿತ್ತು. ಬೆಳೆ ಸರಿಯಾಗಿ ಸಿಗದಿದ್ದರಿಂದ ಬೇಸರದಲ್ಲಿದ್ದ ಈತನು ಮನನೊಂದು ಅರಶೀಣಗೇರಿ ವ್ಯಾಪ್ತಿಯ ಅರಣ್ಯದಲ್ಲಿರುವ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.  ಈ…

Read More

ತೆರಾಹಿ ಟ್ರಸ್ಟನಿಂದ ಕಾರ್ಮಿಕರಿಗೆ ಉಚಿತ ಊಟ

ಮುಂಡಗೋಡ : ತೆರಾಹಿ ಸಹರಾ ಫೌಂಡೇಶನ ಟ್ರಸ್ಟ ವತಿಯಿಂದ ಶನಿವಾರ ಕಾರ್ಮಿಕರಿಗೆ, ರೋಗಿಗಳಿಗೆ ಉಚಿತವಾಗಿ ಊಟ ನೀಡಲಾಯಿತು. ಈ ಸಂದರ್ಭದಲ್ಲಿ ತೆರಾಹಿ ಫೌಂಡೇಶನ ಅಧ್ಯಕ್ಷೆ ಸಲ್ಮಾ ಶೆರಖಾನೆ, ರೆಹನಾ ದಾವಣಗೇರಿ, ಮುಸ್ತಾನ ದರ್ಗಾವಾಲೆ, ಬಿಬಿಕತೂನ ದರ್ಗಾವಾಲೆ, ವೀರಭದ್ರ ಶೇರಖಾನೆ ಮುಂತಾದವರಿದ್ದರು.

Read More

ಬಾಲಕಿ ಮನೆಬಿಟ್ಟು ಬಂದಿರುವುದು ಜನರಿಗೆ ಶಾಕ್ ನೀಡಿತ್ತು….!

ಮುಂಡಗೋಡ : ಗ್ರಾಮೀಣ ಭಾಗದ ಬಾಲಕಿಯೊಬ್ಬಳು ಮನೆಬಿಟ್ಟು ಮುಂಡಗೋಡಿಗೆ ಬಂದು ತನಗೊಂದು ಬಾಡಿಗೆ ಮನೆ ಕೊಡಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡ ಘಟನೆ ಇಂದು ನಡೆದಿದೆ.     ಗ್ರಾಮೀಣ ಭಾಗದ ಅಪ್ರಾಪ್ತ ಬಾಲಕಿಯೊಬ್ಬಳು ತನಗೆ ಮನೆಯಲ್ಲಿ ಹೊಡೆಯುತ್ತಾರೆ, ಬಡಿಯುತ್ತಾರೆಂದು ಬ್ಯಾಗ್‍ಗಳಲ್ಲಿ ಬಟ್ಟೆಯನ್ನು ತುಂಬಿಕೊಂಡು ಪಟ್ಟಣದ ಮಾರ್ಕೆಟಿಂಗ್ ಸೊಸೈಟಿ ಆವರಣದಲ್ಲಿ ಕುಳಿತಿದ್ದಳು. ಸೊಸೈಟಿ ಸಿಬ್ಬಂದಿಗಳಿಗೆ ಮನೆಯಲ್ಲಿ ತೊಂದರೆ ಕೊಡುತ್ತಿರುವುದರಿಂದ ಮನೆ ಬಿಟ್ಟು ಬಂದಿದ್ಧೇನೆ. ನನಗೆ ಬಾಡಿಗೆ ಮನೆ ಕೊಡಿಸಿ ಪ್ರತ್ಯೇಕವಾಗಿ ಜೀವನ ನಡೆಸುತ್ತೇನೆ ಎಂದು ಹೇಳಿದಳೆಂದು ತಿಳಿದುಬಂದಿದೆ.   …

Read More

ಚವಡಳ್ಳಿ ಗ್ರಾಮದಲ್ಲಿ ಸರಾಯಿ ಪಾಕೀಟು ಸುಟ್ಟು ಹಾಕಿ ಜನ ಜಾಗೃತಿ ಮೂಡಿಸಿದ ಯುವಕರು, ಗ್ರಾಮಸ್ಥರು….!

ಮುಂಡಗೋಡ : ಸರಾಯಿ ವಿರುದ್ಧ ಜನಜಾಗೃತಿ ಗ್ರಾಮೀಣ ಭಾಗದಲ್ಲಿ ನಿಧಾನವಾಗಿ ಆಗುತ್ತಿದೆ. ಮೊನ್ನೆಯಷ್ಟೇ ತಾಲೂಕಿನ ಕಾಳಗನಕೊಪ್ಪ ಗ್ರಾಮದಲ್ಲಿ ಮಹಿಳೆಯರು ಸಿಡಿದೆದ್ದು ಗ್ರಾಮದಲ್ಲಿ ಸರಾಯಿ ಮಾರುವುದನ್ನು ಬಂದ್ ಮಾಡಿಸಿದ್ದರು.ಈ ಘಟನೆಯಿಂದ ಪ್ರೇರಿತರಾಗಿ ಚೌಡಳ್ಳಿಯಲ್ಲಿ ಗುರುವಾರ ರಾತ್ರಿ ಗ್ರಾಮಸ್ಥರು ಹಾಗೂ ಯುವಕರು ಒಂದಾಗಿ ಇನ್ನು ಮುಂದೆ ಸರಾಯಿ ಯಾರೂ ಮಾರಾಟ ಮಾಡಬಾರದೆಂದು ಅಂಗಡಿಕಾರರಿಗೆ ಮನವಿ ಮಾಡಿದರು. ಇದಕ್ಕೆ ಅಂಗಡಿಕಾರರು ಸ್ಪಂದಿಸಿದ್ದಾರೆ ಎನ್ನಲಾಗಿದೆ.ಲಾಕಡೌನ್ ಸಮಯದಲ್ಲಿ ಪಕ್ಕದ ಊರಿನ ಕೆಲವರು ಚೌಡಳ್ಳಿ ಗ್ರಾಮಕ್ಕೆ ಬಂದು ಸರಾಯಿ ಖರೀದಿಸಿ, ಕುಡಿಯುತ್ತಿದ್ದರು. ಇದನ್ನು ತಪ್ಪಿಸಲು ಹಾಗೂ…

Read More