Raj Newsline

ಎಸ್.ಪಿ. ಶಿವಪ್ರಕಾಶ ದೇವರಾಜ್ ವರ್ಗಾವಣೆ

ಕಾರವಾರ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್ ವರ್ಗಾವಣೆಯಾಗಿದೆ. ನೂತನ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ವರ್ತಿಕಾ ಕಟಿಯಾರ್ ನೇಮಕ ಮಾಡಲಾಗಿದೆ. ವರ್ತಿಕಾ ಕಟಿಯಾರ್ ಅವರು ಇದೇ ಮೊದಲ ಬಾರಿಗೆ ಜಿಲ್ಲೆಗೆ ಬರುತ್ತಿರುವ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ. ರಾಜ್ಯ ಅಪರಾಧ ವಿಭಾಗದಲ್ಲಿ ಕಾರ್ಯನಿರ್ವಸುತ್ತಿದ್ದ ವರ್ತಿಕಾ ಕಟಿಯಾರ ಅವರನ್ನು ಉತ್ತರಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ರಾಜ್ಯ ಸರಕಾರ ನೇಮಕ ಮಾಡಿದೆ. ಕಳೆದ ಎರಡು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದ ಶಿವಪ್ರಕಾಶ ದೇವರಾಜ ದಿಢೀರ್ ವರ್ಗಾವಣೆ ಎಲ್ಲರನ್ನೂ ಚಕಿತಗೊಳಿಸಿದೆ.

Read More

ರೋಟರಿ ಕ್ಲಬ್ ಮುಂಡಗೋಡ : ನೂತನ ಪದಾಧಿಕಾರಿಗಳ ಆಯ್ಕೆ

ಮುಂಡಗೋಡ : ರೋಟರಿ ಕ್ಲಬ್ ಮುಂಡಗೋಡ ನೂತನ ಅಧ್ಯಕ್ಷರಾಗಿ ಶಾಜಿ ಥಾಮಸ್ ಆಯ್ಕೆಯಾಗಿದ್ದಾರೆ.      ಕಾರ್ಯದರ್ಶಿಯಾಗಿ ಬೈಜು ವಿ.ಜೆ., ಖಜಾಂಚಿಯಾಗಿ ವಸಂತ ಕೊಣಸಾಲಿ ಆಯ್ಕೆಯಾಗಿದ್ದಾರೆ. ಪತ್ರಿಕಾಗೋಷ್ಟಿ : ತಮ್ಮ ಅವಧಿಯಲ್ಲಿ ರೋಟರಿ ಕ್ಲಬ್ ನಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲರೂ ಸಹಕಾರ ನೀಡಬೇಕೆಂದು ರೋಟರಿ ಕ್ಲಬ್ ನೂತನ ಅಧ್ಯಕ್ಷರಾದ ಶಾಜಿ ಥಾಮಸ್ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.    ಪತ್ರಕರ್ತರು ಸಮಾಜದ ಓರೆಕೋರೆಗಳನ್ನು ತಿದ್ದುವವರು, ಪತ್ರಕರ್ತರು ಸೈನಿಕರಿದ್ದಂತೆ ಹಾಗೂ ಕೊರೊನಾ ವಾರಿಯರ್ಸ ಎಂದು ಅವರು ನುಡಿದರು….

Read More

ಗೋಡೆ ಕುಸಿದು ಮೃತಳಾದವಳ ಕುಟುಂಬಕ್ಕೆ 16 ಗಂಟೆಯೊಳಗೆ ಪರಿಹಾರದ ಚೆಕ್ ನೀಡಿದ ಸಚಿವ ಹೆಬ್ಬಾರ

ಶಿರಸಿ : ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡಿಗೆಹಳ್ಳ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಯಶೋದಾ ಬಂಗಾರ ಗೌಡ ಎಂಬ ಮಹಿಳೆ ಮೃತಪಟ್ಟ ಅಹಿತಕರ ಘಟನೆ ಮಂಗಳವಾರ ನಡೆದಿದ್ದು,ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಮೃತರ ಮನೆಗೆ ಭೇಟಿ ನೀಡಿ ಮುಂದಿನ 48 ಗಂಟೆಗಳ ಒಳಗಾಗಿ ಪರಿಹಾರ ಧನವನ್ನು ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಸಚಿವ ಶಿವರಾಮ ಹೆಬ್ಬಾರ್ ಘಟನೆ ನಡೆದ 16 ಗಂಟೆಗಳ ಒಳಗಾಗಿ ಖುದ್ದು ತಾವೇ ಮೃತರ ಮನೆಗೆ ಭೇಟಿ ನೀಡಿ ಐದು…

Read More

ಬಾಚಣಕಿ ಜಲಾಶಯದಲ್ಲಿ ಶೇ.80ರಷ್ಟು ನೀರು ಸಂಗ್ರಹ

ಮುಂಡಗೋಡ : ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುಂಡಗೋಡ ತಾಲೂಕಿನ 5 ಜಲಾಶಯಗಳಲ್ಲಿ ನೀರು ಸಂಗ್ರಹವಾಗುತ್ತಿದೆ.    ಬಾಚಣಕಿ ಜಲಾಶಯದಲ್ಲಿ ಶೇ.80ರಷ್ಟು ನೀರು ಸಂಗ್ರಹವಾಗಿದೆ. ಅತ್ತಿವೇರಿ ಜಲಾಶಯದಲ್ಲಿ ಶೇ.60ರಷ್ಟು, ರಾಮಾಪುರ ಜಲಾಶಯದಲ್ಲಿ ಶೇ.55ರಷ್ಟು, ನ್ಯಾಸರ್ಗಿ ಜಲಾಶಯದಲ್ಲಿ ಶೇ.65ರಷ್ಟು, ಸನವಳ್ಳಿ ಜಲಾಶಯದಲ್ಲಿ ಶೇ.75ರಷ್ಟು ನೀರು ಸಂಗ್ರಹವಾಗಿದೆ.    ಇನ್ನು ತಾಲೂಕಿನಲ್ಲಿ 28 ಕೆರೆಗಳಿದ್ದು, ಅವುಗಳಲ್ಲಿ ಅಮ್ಮಾಜಿ ಕೆರೆ ತುಂಬಿದೆ.    ಸಾಲಗಾಂವ ಕೆರೆ ಶೇ.95ರಷ್ಟು, ಅರಶಿಣಗೇರಿ ಕೆರೆ ಮತ್ತು ಆಲಳ್ಳಿ ಅಯ್ಯನಕೆರೆಯಲ್ಲಿ ಶೇ.75ರಷ್ಟು ನೀರು ಸಂಗ್ರಹವಾಗಿದೆ.  …

Read More

ಸೆಲ್ಫೀ ನೋಡಿ ಮಾಜಿ ಪ್ರೇಯಸಿ ಹತ್ಯೆಗೆ ಬಂದವನ ಬಂಧನ

ಕಾರವಾರ : ಆಕೆಯ ಒಂದೇ ಒಂದು ಸೆಲ್ಫಿ ಸಾವಿನತ್ತ ಕರೆದುಕೊಂಡು ಹೋಗಿತ್ತು….. ನಿಜ, ಪ್ರೀತಿಸಿ ಕೈಕೊಟ್ಟ ಹುಡುಗಿ ಫೋಟೋ ನೋಡಿ ಕೊಲ್ಲಲು ಕುಡ್ಲೆ ಬೀಚ್‌ಗೆ ಬಂದಿದ್ದ ಮಾಜಿ ಪ್ರೇಮಿ, ಮಾಜಿ ಪ್ರಿಯತಮೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾಜಿ ಪ್ರೇಯಸಿಯನ್ನು ಹಿಂಬಾಲಿಸಿಕೊಂಡು ಬಂದು ಕೊಲೆಗೆ ಯತ್ನಿಸಿ,ಪರಾರಿಯಾಗಿ ವೇಷ ಬದಲಾಯಿಸಿಕೊಂಡಿದ್ದ ಆರೋಪಿಯನ್ನು ಪುಣೆಯಲ್ಲಿ ಬಂಧಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ 7 ರಂದು ಗೋಕರ್ಣದ ಕುಡ್ಲೆ ಬೀಚ್‌ಗೆ ಸ್ನೇಹಿತರ ಜೊತೆ ಬಂದಿದ್ದ…

Read More

ಹನಿಗವನಗಳು-2

ಹ(ಣ)ಗರಣ ಇದ್ದರೆ ಕೈ ತುಂಬ  ಹಣ ಮುಚ್ಚಿಹಾಕಬಹುದು ಸುಲಭವಾಗಿ, ಮಾಡಿದ ಹಗರಣ.! ಅಂದು –ಇಂದು ಅಂದಿನ  ಕವಿಗಳ ಕವನಗಳಲ್ಲಿ  ಕಾಣುತ್ತಿತ್ತು ಮಣ್ಣಿನವಾಸನೆ, ಇಂದಿನ ಕವಿಗಳ ಕವನಗಳಲ್ಲಿ? ಕಾಣುತ್ತಿದೆ ಬರೀ ಹೆಣ್ಣಿನ ವಾಸನೆ!.         ~ ಶಿವಪ್ರಸಾದ್  ಹಾದಿಮನಿ, ಕೊಪ್ಪಳ

Read More

17 ಚಾಕಪೀಸನಲ್ಲಿ ರಾಷ್ಟ್ರ ಗೀತೆ, ಏಷಿಯಾ ಬುಕ್ ಆಫ್ ರೆಕಾರ್ಡ್ಸಗೆ ದಾಖಲೆಯಾದ ಪ್ರದೀಪ ನಾಯ್ಕ

ಹೊನ್ನಾವರ : ತಾಲೂಕಿನ ಗೇರುಸೊಪ್ಪಾ ಗ್ರಾಮದ ಪ್ರದೀಪ್ ಮಂಜುನಾಥ ನಾಯ್ಕ ಅವರು ವಿಶೇಷವಾದ ಕಲೆಯಲ್ಲಿ ಪರಿಣತಿ ಪಡೆದಿದ್ದಾರೆ. ಹೊನ್ನಾವರದ ಎಸ್‌.ಡಿ.ಎಮ್‌. ಕಾಲೇಜಿನಲ್ಲಿ ಪದವಿ ಪೂರೈಸಿರುವ ಇವರು ಪ್ರಸ್ತುತ ಬಿ.ಎಡ್‌.ಶಿಕ್ಷಣವನ್ನು ಕಾರವಾರದ ಶಿವಾಜಿ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರದೀಪ್‌ ಅವರಿಗೆ ಚಾಕ್‌ ಆರ್ಟ್‌ ಎಂದರೆ ಏನೋ ಸಂತಸ. ಹಾಗೆ ಅದನ್ನು ಮಾಡಬೇಕೆಂಬ ಹಂಬಲದಿಂದ ಕೆಲವು ವರ್ಷಗಳಿಂದ ಈ ಹವ್ಯಾಸ ಶುರುವಾಗಿದೆ. ಮೊದ ಮೊದಲು ಇಂಗ್ಲಿಷ್‌ ನ ಅಕ್ಷರ ಕೆತ್ತುವ ಅಭ್ಯಾಸ ಮಾಡುತ್ತಾ ಹಾಗೆ ಕೆಲ ದಿನಗಳ ನಂತರ ತನ್ನ…

Read More