Raj Newsline

ಅನುದಾನದ ಬಳಕೆ ಬಗ್ಗೆ ಕೇಂದ್ರ ಸರಕಾರ ಹದ್ದಿನ ಕಣ್ಣಿಟ್ಟಿದೆ : ಸಂಸದ ಅನಂತಕುಮಾರ್ ಹೆಗಡೆ

ಕಾರವಾರ : ಜಲ ಜೀವನ ಮಿಷನ್, ನರೇಗಾ, ವಸತಿ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನೇರವಾಗಿ ನೀಡುತ್ತಿರುವ ವಿಶೇಷ ಅನುದಾನದ ಬಳಕೆ ಬಗ್ಗೆ ಕೇಂದ್ರ ಸರಕಾರ ಹದ್ದಿನ ಕಣ್ಣಿಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ತಿಳಿಸಿದರು. ಜಿಲ್ಲಾ ಪಂಚಾಯತ್‌ನ ಸಭಾಭವನದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ…

Read More

ಎಲ್ಲ ಬಿಪಿಎಲ್ ಕಾರ್ಡದಾರರಿಗೆ ರೇಶನ್ ಕಿಟ್ ನೀಡುತ್ತಿದ್ದೇವೆ : ಸಚಿವ ಹೆಬ್ಬಾರ್

ಮುಂಡಗೋಡ : ಮೂರು ಬಾರಿ ನನ್ನನ್ನು ಆಯ್ಕೆ ಮಾಡಿ ಕಳಿಸಿದ್ದೀರಿ. ನಿಮ್ಮ ಋಣ ನನ್ನ ಮೇಲಿದೆ. ಈಗ ನೀವು ಸಂಕಷ್ಟದಲ್ಲಿದ್ದಾಗ ಭಾಗಿಯಾಗುವುದು ನನ್ನ ಕರ್ತವ್ಯ. ಅದಕ್ಕಾಗಿ 63 ಸಾವಿರ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‍ದಾರರಿಗೆ ದಿನಸಿ ಕಿಟ್‍ಗಳನ್ನು ಸ್ವಂತ ಖರ್ಚಿನಿಂದ ನೀಡುತ್ತಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.   ಇಂದು ಅವರು ತಾಲೂಕಿನ ಮೈನಳ್ಳಿ ಹಾಗೂ ಉಗ್ಗಿನಕೇರಿ ಗ್ರಾಮದಲ್ಲಿ ಹೆಬ್ಬಾರ್ ರೇಶನ್ ಕಿಟ್‍ಗಳನ್ನು ವಿತರಿಸಿ ಮಾತನಾಡುತ್ತಿದ್ದರು.   ಯಾವುದೇ ಜಾತಿ,…

Read More

ಮುಂಡಗೋಡ : 5 ವರ್ಷದಲ್ಲಿ 19 ಜನ ರೈತರ ಆತ್ಮಹತ್ಯೆ….!

ಮುಂಡಗೋಡ : ಸರಿಯಾಗಿ ಬೆಳೆಬಾರದ ಕಾರಣ, ಬೆಳೆಸಾಲವೂ ತೀರಿಸಲಾಗದ ಹಿನ್ನೆಲೆಯಲ್ಲಿ ಕಳೆದ 5 ವರ್ಷದಿಂದ ಮುಂಡಗೋಡ ತಾಲೂಕಿನಲ್ಲಿ ಈವರೆಗೆ ಒಟ್ಟು 19 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕ ಹಾಗೂ ಸೊಸೈಟಿಯಲ್ಲಿ ಸಾಲ ತುಂಬುವಂತೆ ಒತ್ತಡ ಹೇರುತ್ತಿರುವುದರಿಂದ ರೈತರು ಮನನೊಂದು ಆತ್ಮಹತ್ಯೆ ಎಂಬ ಕೃತ್ಯಕ್ಕೆ ಕೈಹಾಕುತ್ತಿದ್ದಾರೆ. 2021-21ನೇ ಸಾಲಿನಲ್ಲಿ ಅತಿ ಹೆಚ್ಚು ರೈತರು ಅಂದರೆ 7 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017-18ರಲ್ಲಿ 3 ಜನ ರೈತರು, 2018-19ರಲ್ಲಿ 4 ಜನ ರೈತರು, 2019-20ರಲ್ಲಿ 3 ಜನ ರೈತರು,…

Read More

ಬಸಾಪುರದಲ್ಲಿ ರೈತನ ಆತ್ಮಹತ್ಯೆ

ಮುಂಡಗೋಡ : ಬೆಳೆ ಸರಿಯಾಗಿ ಬಂದಿಲ್ಲವೆಂದು ಮನನೊಂದು ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ತಾಲೂಕಿನ ಬಸಾಪುರದಲ್ಲಿ ಇಂದು ಸಂಭವಿಸಿದೆ.     ಬಸಾಪುರ ಗ್ರಾಮದ ಗಂಗಾರಾಮಸಿಂಗ ರಜಪೂತ(55) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.     ಗಂಗಾರಾಮಸಿಂಗನು ತನ್ನ ಗದ್ದೆಯಲ್ಲಿ ಯಾವುದೋ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.      

Read More

ವಿಕೋಪ ಪರಿಹಾರ ನಿಧಿ : ಚೆಕ್ ವಿತರಿಸಿದ ಸಚಿವ ಹೆಬ್ಬಾರ್

ಯಲ್ಲಾಪುರ : ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ಅರ್ಹ ಫಲಾನುಭವಿಗಳಿಗೆ ವಿಕೋಪ ಪರಿಹಾರ ನಿಧಿಯಡಿ ಮಂಜೂರಿಯಾದ ಚೆಕ್ ಅನ್ನು ವಿತರಿಸಿದರು.    ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನಗದ್ದೆ ಶ್ರೀ ವೀರಭದ್ರೇಶ್ವರ ದೇವಾಲಯದ ಜೀಣೋದ್ಧಾರಕ್ಕೆ ಸುಮಾರು 5 ಲಕ್ಷ ರೂಪಾಯಿ ಚೆಕ್ ವಿತರಿಸಿದರು. ಪ್ರಕೃತಿ ವಿಕೋಪದಿಂದ ಜಾನುವಾರ ಹಾನಿಯಾದ ಸಂತೃಸ್ಥ ನರಸಿಂಹ ವಿಶ್ವೇಶ್ವರ ಭಟ್ ಅವರಿಗೆ 30000 ಸಾವಿರಗಳ ಚೆಕ್ ಹಾಗೂ ಮಳೆಗಾಳಿಯಿಂದಾಗಿ ಹಾನಿಗೊಳಗಾದ ಜೈನಬಿ ಅಲ್ಲಾಬಕ್ಷ ಶೇಖ್ ಉದ್ಯಮನಗರ ಹಾಗೂ…

Read More

ಮನೆ ಮದ್ದು

ಇಸಬ್ಗೋಲ್ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಅರೆದು ಪೇಸ್ಟ ಮಾಡಿ ನಂತರ ಬಿಸಿ ಮಾಡಿ ಬಾವು ಮತ್ತು ನೋವಿರುವ ಸಂಧಿಗಳಿಗೆ ಹಚ್ಚಿದರೆ ಅವು ಕಡಿಮೆಯಾಗುತ್ತದೆ.

Read More

ನಿಜವಾದ ಕೊರೊನಾ ವಾರಿಯರ್ಸ ಪೌರ ಕಾರ್ಮಿಕರು : ಪ್ರಶಾಂತ ದೇಶಪಾಂಡೆ

ಮುಂಡಗೋಡ : ಕೊರೊನಾ ವಾರಿಯರ್ಸ ಎಂದು ವೈದ್ಯರಿಗೆ ಮತ್ತು ನರ್ಸಗಳಿಗೆ ಹೇಳುತ್ತೇವೆ. ಆದರೆ ನಿಜವಾದ ಕೊರೊನಾ ವಾರಿಯರ್ಸ ಪೌರ ಕಾರ್ಮಿಕರು ಎಂದು ಕೆ.ಪಿ.ಸಿ.ಸಿ ಸದಸ್ಯ ಪ್ರಶಾಂತ ದೇಶಪಾಂಡೆ ಹೇಳಿದ್ದಾರೆ.    ಶುಕ್ರವಾರ ಅವರು ಪಟ್ಟಣ ಪಂಚಾಯತ ಆವರಣದಲ್ಲಿ ಪೌರ ಕಾರ್ಮಿಕರಿಗೆ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ರೇಷನ ಕಿಟ್ ನೀಡಿ ಮಾತನಾಡುತ್ತಿದ್ದರು.    ಪೌರ ಕಾರ್ಮಿಕರು ಕಸ ವಿಲೇವಾರಿ ಮಾಡುವುದರ ಜೊತೆಗೆ ಸ್ಮಶಾನ ಸ್ವಚ್ಚ ಮಾಡುತ್ತಾರೆ. ಪೌರ ಕಾರ್ಮಿಕರು ಲಾಕ್ ಡೌನ ಸಂದರ್ಭದಲ್ಲಿ ತಮ್ಮ ಪರಿವಾರದ ಚಿಂತೆ…

Read More

ಪ್ರಶಾಂತ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಕಾಂಗ್ರೆಸ ಮುಖಂಡರ ಸಭೆ

ಮುಂಡಗೋಡ : ಜಿಲ್ಲಾ ಪಂಚಾಯತ ತಾಲೂಕಾ ಪಂಚಾಯತ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಕೆ.ಪಿ.ಸಿ.ಸಿ ಸದಸ್ಯ ಪ್ರಶಾಂತ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಮುಖಂಡರ ಸಭೆಯನ್ನು ನಡೆಸಲಾಯಿತು.   ಕಳೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಎಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡಿದ್ದಾರೋ ಅದೇ ರೀತಿಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ ,ತಾಲೂಕ ಪಂಚಾಯತ ಚುನಾವಣೆಯಲ್ಲಿ ಕೆಲಸ ಮಾಡಬೇಕು ಈಗಿನಿಂದಲೇ ಪಕ್ಷದ ಸಂಘಟನೆಗೆ ಕಾರ್ಯಕರ್ತರು ತೊಡಗಿಕೊಳ್ಳಬೇಕು ಅಂತಾ ಸೂಚಿಸಿದರು.    ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅಶೋಕ ಶಿರ್ಸಿಕರ, ನಾಗರಾಜ್ ನಾರ್ವೇಕರ ,ದೀಪಕ…

Read More