ಇಂದೂರ ಜಿ.ಪಂ. ಕ್ಷೇತ್ರ : ರವಿಗೌಡ ಪಾಟೀಲರಿಗೆ ಟಿಕೆಟ್ ನೀಡುವಂತೆ ಆಗ್ರಹ
ಮುಂಡಗೋಡ : ಚುನಾವಣಾ ಆಯೋಗವು ತಾ.ಪಂ., ಜಿ.ಪಂ. ಮೀಸಲಾತಿ ಪ್ರಕಟಿಸುತ್ತಿದ್ದಂತೆ ರಾಜಕೀಯ ಪಕ್ಷದಲ್ಲಿ ಚಟುವಟಿಕೆ ತೀವ್ರಗೊಂಡಿದೆ. ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿಯು ಹನುಮಂತನ ಬಾಲದಂತೆ ದಿನವೂ ಬೆಳೆಯುತ್ತಿದೆ. ತಾಲೂಕಿನಲ್ಲಿ ಇಂದೂರ, ಮೈನಳ್ಳಿ (ಚಿಗಳ್ಳಿ ) ಮತ್ತು ಪಾಳಾ ಎಂಬ ಮೂರು ಜಿಲ್ಲಾ ಪಂಚಾಯತಿ ಕ್ಷೇತ್ರಗಳಿವೆ. ಇಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಸಾಮಾನ್ಯವಾದರೆ ಮೈನಳ್ಳಿ (ಚಿಗಳ್ಳಿ ) ಮತ್ತು ಪಾಳಾ ಕ್ಷೇತ್ರ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿದೆ. ಇಂದೂರು ಜಿಲ್ಲಾ ಪಂಚಾಯತ್ ಕ್ಷೇತ್ರ ಕಳೆದ…