ಇಂದೂರ ಬಳಿ ಜೇನುಹುಳುಗಳ ದಾಳಿ : ಐವರು ಸರ್ಕಾರಿ ಆಸ್ಪತ್ರೆಗೆ ದಾಖಲು

ಮುಂಡಗೋಡ : ಹೊಲಕ್ಕೆ ಹೋಗುವಾಗ ಮಹಿಳೆಯರು ಸೇರಿದಂತೆ ಕೆಲವರ ಮೇಲೆ ಜೇನು ಹುಳುಗಳು ದಾಳಿ ಮಾಡಿದ ಘಟನೆ ಇಂದೂರ ಬಳಿ ಶನಿವಾರ ಸಂಭವಿಸಿದೆ.  ಜೇನುಹುಳುಗಳಿಂದ ಗಾಯಗೊಂಡ ಮಹಿಳೆಯರೂ ಸೇರಿದಂತೆ ಐದು ಜನರು ಮುಂಡಗೋಡ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. 

Read More

ಶೀಘ್ರದಲ್ಲಿ ಯತ್ನಾಳ್ ಪಕ್ಷದಿಂದ ‘ಉಚ್ಚಾಟನೆ’ ಆಗ್ತಾರೆ, ಕಾದು ನೋಡಿ : ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ

ಮೈಸೂರು : ರಾಜ್ಯ ಬಿಜೆಪಿಯ ಆಂತರಿಕ ಹಾಗೂ ಬಣ ಬಡಿದಾಟ ಇದೀಗ ಬೀದಿಗೆ ಬಂದಿದ್ದು, ಒಂದೆಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮಾಡುತ್ತಿದ್ದರೆ, ಇನ್ನು ಇತ್ತ ಬಿವೈ ವಿಜಯೇಂದ್ರ ಬೆಂಬಲಿಗರಾದಂತಹ ಎಂ.ಪಿ ರೇಣುಕಾಚಾರ್ಯ, ಬಿಸಿ ಪಾಟೀಲ್ ಸೇರಿದಂತೆ ಹಲವರು ಯತ್ನಾಳ್ ವಿರುದ್ಧ ಕಿಡಿ ಕಾರಿದ್ದಾರೆ. ಕಾದು ನೋಡಿ ಯತ್ನಾಳ್ ಪಕ್ಷದಿಂದ ಉಚ್ಚಾಟನೆ ಆಗ್ತಾರೆ ಎಂದು ಹೊಸ ಬಾಂಬ್ ಸಿಡಿಸಿದರು….

Read More

`ಲವ್ ಬ್ರೇಕಪ್’ ಆತ್ಮಹತ್ಯೆಗೆ ಪ್ರಚೋದನೆಯಲ್ಲ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು.!

ನವದೆಹಲಿ : ಸಂಬಂಧಗಳು ಮುರಿದು ಬಿದ್ದಾಗ ಮಾನಸಿಕ ಯಾತನೆ ಉಂಟು ಮಾಡಬಹುದಾದರೂ ಆತ್ಮಹತ್ಯೆಗೆ ಪ್ರಚೋದನೆ ಎಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಬ್ಬರ ನಡುವಿನ ದೀರ್ಘಕಾಲದ ಸಂಬಂಧವನ್ನು ಮುರಿಯುವುದನ್ನು ಕ್ರಿಮಿನಲ್ ಘಟನೆಯಾಗಿ ನೋಡಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಎಂಟು ವರ್ಷಗಳ ಸಂಬಂಧದ ನಂತರ ಯುವತಿಯೊಬ್ಬಳು ತನ್ನನ್ನು ಮದುವೆಯಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಈ ತೀರ್ಪು ನೀಡಿದೆ. ಆರೋಪಿಗಳು ಯುವತಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಸಿಗುವವರೆಗೆ ಆರೋಪಿಯನ್ನು…

Read More

ಮಂತ್ರಾಲಯದಲ್ಲಿ ಹುಂಡಿ ಎಣಿಕೆ: 31 ದಿನಗಳಲ್ಲಿ 3 ಕೋಟಿ 92 ಲಕ್ಷ ಕಾಣಿಕೆ ಸಂಗ್ರಹ

ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ (Mantralaya Sri Raghavendra Swamy Mutt) ಕಳೆದ 31 ದಿನಗಳಲ್ಲಿ ಭಕ್ತರಿಂದ ಭಾರೀ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಕಳೆದ 31 ದಿನಗಳ ಕಾಣಿಕೆ ಹುಂಡಿ ಎಣಿಕೆಕಾರ್ಯ ಮುಕ್ತಾಯಗೊಂಡಿದ್ದು, 3,92,58,940 ರೂ. ಕಾಣಿಕೆ ಸಂಗ್ರಹವಾಗಿದೆ. ರಜೆ, ಹಬ್ಬದ ಹಿನ್ನೆಲೆ ಮಂತ್ರಾಲಯ ಮಠಕ್ಕೆ ಕೋಟ್ಯಾಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ. ಸಂಗ್ರಹವಾದ ಒಟ್ಟು ಕಾಣಿಕೆಯಲ್ಲಿ 3 ಕೋಟಿ 83 ಲಕ್ಷ 93,760 ರೂ. ಕರೆನ್ಸಿ ನೋಟುಗಳು ಹಾಗೂ 8,65,180 ರೂ. ನಾಣ್ಯಗಳು…

Read More

ನಾಳೆ ರೋಮ್ ನಲ್ಲಿ ಅಂತಾರಾಷ್ಟ್ರೀಯ ‘ಸರ್ವಧರ್ಮ ಸಮ್ಮೇಳನ’ : ಮುಖ್ಯ ಅತಿಥಿಯಾಗಿ ಸ್ಪೀಕರ್ ಯುಟಿ ಖಾದರ್ ಭಾಗಿ!

ಬೆಂಗಳೂರು : ನಾಳೆ ರೋಮ್ ನಗರದ ವ್ಯಾಟಿಕನ್ ಸಿಟಿಯಲ್ಲಿ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಒಂದು ಕಾರ್ಯಕ್ರಮದಲ್ಲಿ ಕರ್ನಾಟಕದ ವಿಧಾನಸಭೆಯ ಸ್ಪೀಕರ್ ಆಗಿರುವಂತಹ ಯುಟಿ ಖಾದರ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ನವೆಂಬರ್ 30ರಂದು ಅಂದರೆ ನಾಳೆ ಅಂತರಾಷ್ಟ್ರೀಯ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು ರೋಮ್ ನ ವ್ಯಾಟಿಕನ್ ಸಿಟಿಯಲ್ಲಿ ಈ ಒಂದು ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ. ಸರ್ವಧರ್ಮ ಸಮ್ಮೇಳನದ ಅತಿಥಿಯಾಗಿ ಸ್ಪೀಕರ್ ಯು ಟಿ ಖಾದರ್ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ…

Read More

ಅಶ್ಲೀಲ ಚಿತ್ರಗಳ ವಿತರಣೆ ಆರೋಪ ಕೇಸ್ : ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಮನೆ ಮೇಲೆ ‘ED’ ದಾಳಿ!

ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಇಂದು ಬೆಳ್ಳಂ ಬೆಳಿಗ್ಗೆ ಇಡಿ ಶಾಕ್ ನೀಡಿದ್ದು, ಅಶ್ಲೀಲ ಚಿತ್ರಗಳ ವಿತರಣೆ ಆರೋಪ ಪ್ರಕರಣಕ್ಕೇ ಸಂಬಂಧಪಟ್ಟಂತೆ ಇಡಿ ಅಧಿಕಾರಿಗಳು ಅವರ ನಿವಾಸದ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಶ್ಲೀಲ ಜಾಲಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಮುಂಬೈನಲ್ಲಿರುವ ಉದ್ಯಮಿ ರಾಜ್ ಕುಂದ್ರಾ, ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಅವರ ನಿವಾಸ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ…

Read More

ಶೀಘ್ರದಲ್ಲಿ ವಿಪಕ್ಷ ಶಾಸಕರಿಗೆ 15 ಕೋಟಿ ರೂ. ಅನುದಾನ : ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆ

ತುಮಕೂರು : ಇತ್ತೀಚಿಗೆ ಕಾಂಗ್ರೆಸ್ ಶಾಸಕ ಗವಿಯಪ್ಪ ಗ್ಯಾರಂಟಿಗಳಲ್ಲಿ ಯಾವುದಾದರೂ ಎರಡು ಯೋಜನೆಗಳನ್ನು ನಿಲ್ಲಿಸಿ, ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಹೇಳಿಕೆ ನೀಡಿದ್ದರು. ಇದೀಗ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರಿಗೆ 25 ಕೋಟಿ ಹಾಗೂ ವಿಪಕ್ಷಗಳ ಶಾಸಕರಿಗೆ 10 ರಿಂದ 15 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು. ತುಮಕೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಕೆಲ ಶಾಸಕರಿಗೆ ಅನುದಾನವೇ ಕೊಡುತ್ತಿರಲಿಲ್ಲ….

Read More

ಟಿಬೆಟಿಕಾಲೋನಿಗೆ ಕೆಲಸಕ್ಕೆ ಹೋದ ಮಹಿಳೆ ಕಾಣೆ

ಮುಂಡಗೋಡ : ಟಿಬೆಟಿಯನ್ ಕಾಲೋನಿಗೆ ಕೆಲಸಕ್ಕೆ ಹೋದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ.  ತಾಲೂಕಿನ ನಂದಿಕಟ್ಟಾದ ಚಂದ್ರಕ್ಕ ಸುಂಕಪ್ಪ ದುರಮುರ್ಗಿ (35) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ನವೆಂಬರ 25ರಂದು ಅವರು ಟಿಬೆಟಿಯನ್ ಕಾಲೋನಿಯ ಕ್ಯಾಂಪ್ ನಂ 7ಕ್ಕೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಸಹ ಅಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದರು. ಆದರೆ, ಸಂಜೆ ಅವರು ಮನೆಗೆ ಮರಳಿಲ್ಲ.ಚಂದ್ರಕ್ಕ ಅವರನ್ನು ಎಲ್ಲಾ ಕಡೆ ಹುಡುಕಲಾಯಿತು. ಆದರೂ, ಅವರು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮಗ ನಾಗರಾಜ ದುರಮುರ್ಗಿ ಪೊಲೀಸ್ ದೂರು ನೀಡಿದ್ದಾರೆ.

Read More

ಕ.ಸಾ.ಪ.ದಿಂದ “ಕವಿ-ಕಾವ್ಯ-ಕೃತಿ-ಪರಿಚಯ” ಕಾರ್ಯಕ್ರಮ

ಮುಂಡಗೋಡ : ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಹಾಗೂ ಲೊಯೋಲ ಪ್ರೌಢಶಾಲೆ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಅನುದಿನ- ಅನುಷ್ಪಂದನ 2024…. ಕನ್ನಡ ಕಾರ್ತಿಕ ಸರಣಿ ಮಾಲಿಕೆಯಲ್ಲಿ ಲೊಯೋಲ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಕಾರರ ಪರಿಚಯ ಹಾಗೂ ಕೃತಿ ಪರಿಚಯ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಲಾಗಿತ್ತು.  ಈ ಕಾರ್ಯಕ್ರಮವನ್ನು ಲೊಯೋಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನಿರ್ದೇಶಕರಾದ ಫಾದರ್ ವಿಜಯರಾಜು ಅವರು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳ ಮನಸ್ಸಿನಲ್ಲಿ ಇಂತಹ ವಾತಾವರಣದ ಶೈಕ್ಷಣಿಕ ಚಟುವಟಿಕೆಗಳು ಬೆಳೆಯಬೇಕು. ಮಕ್ಕಳಲ್ಲಿ ಇರುವಂತ…

Read More

ಡಿಸೆಂಬರ್ 2ರಿಂದ ಶಿರಸಿ-ಕುಮಟಾ ರಸ್ತೆ ಬಂದ್

ಕಾರವಾರ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಾಷ್ಟ್ರೀಯ ಹೆದ್ದಾರಿ 766-ಇ ಕುಮಟ –  ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿಯು ದಿ. 02-12- 2024 ರಿಂದ ಪ್ರಾರಂಭವಾಗಲಿದ್ದು ಈ ಕಾಮಗಾರಿಯು ನಿಗದಿತ ಸಮಯದೊಳಗೆ ಮುಕ್ತಾಯಗೊಳಿಸಬೇಕಾಗಿರುವುದರಿಂದ ಈ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಿ ಬದಲಿ ಮಾರ್ಗದ ಕುರಿತು ಈ ಕೆಳಗಿನಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿರುತ್ತಾರೆ.1) ಕುಮಟಾ– ಸಿರ್ಸಿ ಮೂಲಕ ಸಿದ್ದಾಪುರ ರಾಷ್ಟ್ರೀಯ ಹೆದ್ದಾರಿ 766–ಇ ಲಘು ವಾಹನಗಳು ಸಂಚರಿಸಬಹುದು.2) ಅಂಕೋಲ– ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63…

Read More