ಪಕ್ಷದ ಶಿಸ್ತು ಉಲ್ಲಂಘಿಸಿದ್ದು ಸಾಬೀತಾದ್ರೆ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಎಐಸಿಸಿ ಸೂಚನೆ: ಸಿಎಂ

ಬೆಂಗಳೂರು: ಎಐಸಿಸಿ ಅಧ್ಯಕ್ಷರು (AICC President) ಈಗಾಗಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸಚಿವ ಸುರ್ಜೆವಾಲಾ ಅವರಿಗೆ ಸ್ಪಷ್ಟವಾಗಿ ಸೂಚನೆ ನೀಡಿದ್ದಾರೆ. ಪಕ್ಷದ ಶಿಸ್ತು ಉಲ್ಲಂಗಿಸಿದ್ದು ಸಾಬೀತಾದರೇ ಸಚಿವ ಸ್ಥಾನದಿಂದ ವಜಾ ಮಾಡುವಂತೆ ನೀಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಂದು ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಮಾತಮಾಡಿದ ಅವರು, ಸಚಿವರಿಗೆ ಎಚ್ಚರಿಕೆ ಕೊಟ್ಟರು. ನನ್ನ ಮತ್ತು ಶಿವಕುಮಾರ್‌ ಇಬ್ಬರೊಟ್ಟಿಗೂ ಕೆ.ಸಿ ವೇಣುಗೋಪಾಲ್ (KC Venugopal) ಮಾತನಾಡಿದ್ದಾರೆ. ನೀವ್ಯಾರು ಇನ್ನುಮುಂದೆ ಸಭೆ ಸೇರುವುದು, ಮಾತನಾಡುವುದು,…

Read More

ಮಧ್ಯಮ ವರ್ಗದ ಭಾರತೀಯರ ಕನಸು ನನಸು ಮಾಡಿದ್ದ ರತನ್‌ ಟಾಟಾ– ಮೊದಲ ದೇಶೀ ಕಾರು ಮಾರುಕಟ್ಟೆಗೆ ಬಂದಿದ್ದು ಯಾವಾಗ?

ಮುಂಬೈ: ಇಂದು ಭಾರತದ ಅತಿದೊಡ್ಡ ಆಟೊಮೊಬೈಲ್ (Automobile) ಕಂಪನಿಯಾಗಿ ಹೆಸರು ಮಾಡಿರುವ ಟಾಟಾ ಮೋಟಾರ್ಸ್, ಟಾಟಾ ಸಮೂಹ ಸಂಸ್ಥೆಯ ಒಂದು ಅಂಗ ಸಂಸ್ಥೆ. 1945ರಲ್ಲಿ ಇದನ್ನು ಹುಟ್ಟು ಹಾಕಲಾಯಿತು. ರತನ್ ಅವರು ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಮೇಲೆ ಅವರ ಸಲಹೆ ಮೇರೆಗೆ ಮೋಟಾರ್ಸ್ (Tata Motors) ಟಾಟಾ ಕಂಪನಿ ಭಾರತದ ಷೇರು ಮಾರುಕಟ್ಟೆಯನ್ನೂ ಪ್ರವೇಶಿಸಿತು ಎಂಬುದಂತು ಸುಳ್ಳಲ್ಲ. 1998ರ ಡಿಸೆಂಬರ್30 ರಂದು ಟಾಟಾ ಮೋಟಾರ್ಸ್‌ನ ಕನಸಿನ ಕೂಸಾದ ʻಟಾಟಾ ಇಂಡಿಕಾʼ (TaTa indica) ಕಾರನ್ನು ಅಧಿಕೃತವಾಗಿ ಬಿಡುಗಡೆಮಾಡಲಾಯಿತು….

Read More

ನಾವು ಎಲ್ಲಿಯೂ, ಯಾವತ್ತೂ ಸಿಎಂ ಪದವಿ ಬಗ್ಗೆ ಚರ್ಚೆ ಮಾಡಿಲ್ಲ: ಸಚಿವ ಪರಮೇಶ್ವರ್‌

ಬೆಂಗಳೂರು: ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ಅವರಿಂದು ಸದಾಶಿವನಗರದ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್‌ ಅವರನ್ನ ಭೇಟಿ ಮಾಡಿದ್ದಾರೆ. ಹೆಚ್‌ಡಿಕೆ ಹಾಗೂ ಯಡಿಯೂರಪ್ಪ ವಿರುದ್ಧ ಗಂಗೇನಹಳ್ಳಿ ಡಿನೋಟಿಫಿಕೇಷನ್‌ ಪ್ರಕರಣ, ಮುಡಾ ಪ್ರಕರಣ ಸೇರಿ ಕೆಲವು ಮಹತ್ವದ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು, ಪ್ರತ್ಯೇಕ ಸಭೆಗಳಿಗೆ ಹೈಕಮಾಂಡ್ ಬ್ರೇಕ್ ಹಾಕಲು ತಾಕೀತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಾನಾಗಲೀ ಸತೀಶ್ ಜಾರಕಿಹೊಳಿ ಆಗಲೀ, ಮಹಾದೇವಪ್ಪ ಆಗಲೀ ನಾವು ಸಿಎಂ ಪದವಿ ಬಗ್ಗೆ ಚರ್ಚೆ ಯಾವತ್ತೂ ಮಾಡಿಲ್ಲ….

Read More

ರತನ್ ಟಾಟಾ ನಿಧನ; ಸರ್ಕಾರಿ ಗೌರವಗಳೊಂದಿಗೆ ಇಂದು ಅಂತ್ಯಕ್ರಿಯೆ – ಏಕನಾಥ್ ಶಿಂಧೆ

ಮುಂಬೈ: ಕೈಗಾರಿಕೋದ್ಯಮಿ ರತನ್ ಟಾಟಾ (Ratan Tata) ಅವರ ಅಂತ್ಯಕ್ರಿಯೆಯನ್ನು (Funeral) ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ. ಅನಾರೋಗ್ಯ ಹಿನ್ನೆಲೆ ಮುಂಬೈನ ಬ್ರೀಚ್ ಕಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಕೈಗಾರಿಕೋದ್ಯಮಿ ರತನ್ ಟಾಟಾ ಬುಧವಾರ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆ ಅನೇಕ ಗಣ್ಯರು, ರಾಜಕಾರಣಿಗಳು ರತನ್ ಟಾಟಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

Read More

ಶಾಲಾ ಶಿಕ್ಷಣದಲ್ಲಿ ನೀತಿ ನಾವೀನ್ಯತೆ ವೇಗಗೊಳಿಸಲು ಮಹತ್ವದ ಕ್ರಮ: ‘J-PAL South Asia’ದೊಂದಿಗೆ ಒಡಂಬಡಿಕೆ

ಬೆಂಗಳೂರು : ಬೆಂಗಳೂರು -ಕರ್ನಾಟಕ ಸರ್ಕಾರವು ಅಬ್ದುಲ್ ಲತೀಫ್ ಜಮೀಲ್ ಪಾವರ್ಟಿ ಆಕ್ಷನ್ ಲ್ಯಾಬ್ (J-PAL) ದಕ್ಷಿಣ ಏಷ್ಯಾ ದೊಂದಿಗೆ ಪಾಲುದಾರಿಕೆ ಹೊಂದಿದ್ದು, ವೈಜ್ಞಾನಿಕ ಸಂಶೋದನೆ ಮತ್ತು ದತ್ತಾಂಶದ ಮೂಲಕ ಶಾಲಾ ಶಿಕ್ಷಣದಲ್ಲಿನ ಕೆಲವು ಸವಾಲುಗಳನ್ನು ಪರಿಹರಿಸಲು “ಕಲಿಕೆ ಲ್ಯಾಬ್” ಅನ್ನು ಸ್ಥಾಪಿಸುತ್ತದೆ.“ಕಲಿಕೆ ಲ್ಯಾಬ್ ಗಳು” ಜಾಗತಿಕ ಸಂಶೋಧನಾ ಒಳನೋಟಗಳ ಮೂಲಕ ಕರ್ನಾಟಕದ ಶಾಲಾ ಶಿಕ್ಷಣದ ನೀತಿಗಳನ್ನು ರೂಪಿಸಲು ಸಹಕರಿಸುತ್ತದೆ ಹಾಗೂ ಯಾದೃಚ್ಛಿಕ ಮೌಲ್ಯಮಾಪನಗಳ ಮೂಲಕ ಹೊಸ ಮತ್ತು ಅಸ್ತಿತ್ವದಲ್ಲಿರುವ ಶಾಲಾ ಶಿಕ್ಷಣ ಕಾರ್ಯಕ್ರಮಗಳ ವೈಜ್ಞಾನಿಕ ಮೌಲ್ಯಮಾಪನಗಳಿಗೆ…

Read More

ಶಾಲಾ-ಕಾಲೇಜು ಆವರಣದಲ್ಲಿ `ತಂಬಾಕು’ ಸೇವನೆಯ ದುಷ್ಪರಿಣಾಮಗಳ ಫಲಕ ಅಳವಡಿಕೆ ಕಡ್ಡಾಯ : ರಾಜ್ಯ ಸರ್ಕಾರದಿಂದ ಮಹತ್ವದ ಸೂಚನೆ

ಬೆಂಗಳೂರು : ಶಾಲಾ-ಕಾಲೇಜುಗಳ ಆವರಣಗಳಲ್ಲಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಶಾಲೆಗಳಿಂದ 100 ಮೀಟರ್ ಅಂತರದಲ್ಲಿ ಯಾವುದೇ ರೀತಿಯ ತಂಬಾಕು ಪ್ರದೇಶಗಳು ಕಂಡುಬರದಂತೆ ಕ್ರಮ ಕೈಗೊಳ್ಳಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ‌ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ, ಜಿಲ್ಲಾ ಸಮನ್ವಯ ಸಮಿತಿ ಸಭೆಯ…

Read More

ಹಿರಿಯ ವಕೀಲರಾದ ಪೂಜಾರ್ ಅವರ ಮೇಲೆ ಉಪನೋಂದಣಾಧಿಕಾರಿಗಳ ಅನುಚಿತ ವರ್ತನೆ :  ವಕೀಲರ ಪ್ರತಿಭಟನೆ

ಮುಂಡಗೋಡ : ಮುಂಡಗೋಡ ತಾಲೂಕ ವಕೀಲರ ಸಂಘದ ಹಿರಿಯ ವಕೀಲರಾದ ಬಿ.ಎಫ್.ಪೂಜಾರ್ ಅವರ ಮೇಲೆ ಉಪನೋಂದಣಾಧಿಕಾರಿಗಳ ಅನುಚಿತ ವರ್ತನೆ ಹಾಗೂ ಅಗೌರವವಾಗಿ ನಡೆದುಕೊಂಡ ಬಗ್ಗೆ ವಕೀಲರ ಸಂಘದವರು ಇಂದು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.  ಉಪನೋಂದಣಾಧಿಕಾರಿಗಳ ನಡವಳಿಕೆಯನ್ನು ಖಂಡಿಸಿ ಸಂಘದ ಎಲ್ಲಾ ಸದಸ್ಯರು ಈ ಕುರಿತು ಸವಿಸ್ತಾರವಾಗಿ ಸಂಘದ ಸದಸ್ಯರ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ವರ್ತನೆಯನ್ನು ಖಂಡಿಸಿ ತೀರ್ಮಾನ ಕೈಗೊಳ್ಳಲಾಯಿತು. ಉಪನೋಂದಣಾಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

Read More

ಮುಖ್ಯಮಂತ್ರಿ ಮುಡಾ ಪ್ರಕರಣ :ಕೇಂದ್ರ ಸರಕಾರ ಮತ್ತು ರಾಜ್ಯಪಾಲರ ಜಂಟಿ ಕಾರ್ಯಚರಣೆ-ರವೀಂದ್ರ ನಾಯ್ಕ

ಶಿರಸಿ : ಮುಖ್ಯಮಂತ್ರಿಯ ವಿರುದ್ಧ ದಾಖಲಾಗಿರುವ ಮುಡಾ ಪ್ರಕರಣದೊಂದಿಗೆ ವಿಚಾರಣೆ ಸಂಬಂಧಿಸಿ ರಾಜ್ಯಪಾಲರು ಕಾನೂನು ಪ್ರಕ್ರಿಯೆ ಮೀರಿ ಕೇಂದ್ರ ಸರಕಾರದ ರಾಜಕೀಯ ಒತ್ತಡದ ಹಿನ್ನೆಲೆಯ ಆತುರದ ಕ್ರಮವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಸಮಿತಿಯ ಪ್ರಚಾರ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಇಂದು ಶಿರಸಿಯಲ್ಲಿ ಜಿಲ್ಲೆ ಕಾಂಗ್ರೇಸ್ ಸಮಿತಿಯ ಕಾರ್ಯಾಲಯದಲ್ಲಿ ಜಾಗೃತ ವಕೀಲರ ವೇದಿಕೆ, ಬೆಂಗಳೂರು ಅವರು ಪ್ರಕಟಿಸಿದ “ಮುಡಾ ಪ್ರಕರಣ ಕೋರ್ಟುಗಳ ಆದೇಶ ಸತ್ಯಾಸತ್ಯತೆ” ಎಂಬ ಪುಸ್ತಕ ಪ್ರದರ್ಶಿಸಿ ಮಾತನಾಡುತ್ತಿದ್ದರು.ಇನ್ನೀತರ…

Read More

ಸಿದ್ದರಾಮಯ್ಯರೇ ಮುಖ್ಯಮಂತ್ರಿ ಆಗಿರ್ತಾರೆ : ಸತೀಶ್ ಜಾರಿಕಿಹೊಳಿ ಮಹತ್ವದ ಹೇಳಿಕೆ

ಮೈಸೂರು : ಸಿದ್ದರಾಮಯ್ಯ ಅವರೆ ಮುಖ್ಯಮಂತ್ರಿ ಆಗಿ ಇರುತ್ತಾರೆ. ಅದರು 5 ವರ್ಷವೋ ಅಥವಾ 3 ವರ್ಷವೋ ಗೊತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಇರ್ತಾರೆ. 5 ವರ್ಷವೋ ಅಥವಾ 3 ವರ್ಷವೋ ಗೊತ್ತಿಲ್ಲ. ಹೈಕಮಾಂಡ್ ಗೆ ಕೇಳಿ. ಆದರೆ ಸಿದ್ದರಾಮಯ್ಯ ಅವರೆ ನಮ್ಮ ಮುಖ್ಯಮಂತ್ರಿ ಎಂದರು. ನಾನು ಸಿಎಂ ಸಿದ್ದರಾಮಯ್ಯನವರ ಜೊತೆಗೆ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಅದರ…

Read More

ಪೋಕ್ಸೋ ಪ್ರಕರಣ : ಜೈಲಿನಿಂದ ಮುರುಘಾ ಶ್ರೀ ಬಿಡುಗಡೆಗೆ ಕೋರ್ಟ್ ಆದೇಶ

ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಚಿತ್ರದುರ್ಗದ ಮುರುಘಾಶ್ರೀಗೆ ಬಿಗ್ ರಿಲೀಫ್ ಸಿಕ್ಕಿದ್ದು, ಜೈಲಿನಿಂದ ಬಿಡುಗಡೆಗೆ ಕೋರ್ಟ್ ಆದೇಶ ಹೊರಡಿಸಿದೆ. ಸಾಕ್ಷಿಗಳ ವಿಚಾರಣೆಗೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಮುರುಘಾ ಶ್ರೀಗಳ ಬಿಡುಗಡೆಗೆ ಆದೇಶ ಹೊರಡಿಸಿದೆ.

Read More