ಸ್ವತಃ ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿಬಂದರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ: ಅಮಿತ್‌ ಶಾ

ಮುಂಬೈ: ಸ್ವತಃ ಇಂದಿರಾ ಗಾಂಧಿ (Indira Gandhi) ಅವರೇ ಸ್ವರ್ಗದಿಂದ ಹಿಂತಿರುಗಿ ಬಂದರೂ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ (Amit Shah) ಗುಡುಗಿದರು.  ಮಹಾರಾಷ್ಟ್ರದ ಚುನಾವಣಾ (Maharashtra Elections) ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಸರ್ಕಾರವು 370ನೇ ವಿಧಿಯನ್ನು (Article 370) ಮರುಸ್ಥಾಪಿಸಲು ನಿರ್ಣಯ ಮಂಡಿಸಿದೆ. ನಾನು ಈಗಲೂ ಹೇಳುತ್ತೇನೆ ಸ್ವತಃ ಇಂದಿರಾ ಗಾಂಧಿ ಅವರೇ ಸ್ವರ್ಗದಿಂದ ಹಿಂತಿರುಗಿ ಬಂದರೂ…

Read More

ಕೊರೊನ ಹಗರಣ : ಅಗತ್ಯವೆ ಇಲ್ಲದ ಯಂತ್ರೋಪಕರಣ ಖರೀದಿಯಲ್ಲಿ 15 ಕೋಟಿಗೂ ಅಧಿಕ ಅಕ್ರಮ : ನ್ಯಾ.ಕುನ್ಹಾ ವರದಿ

ಬೆಂಗಳೂರು : ಕೊರೋನಾ ಸಮಯದಲ್ಲಿ ಅಗತ್ಯವೇ ಇಲ್ಲದೆ ಇರುವ ಸಂದರ್ಭದಲ್ಲಿ ಸುಮಾರು 84.99 ಕೋಟಿ ವೆಚ್ಚದಲ್ಲಿ ಸಿಟಿ ಸ್ಕ್ಯಾನ್ ಯಂತ್ರೋಪಕರಣಗಳನ್ನು ಖರೀದಿಸಿದ್ದು ಅದರಲ್ಲಿ 15.83 ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ನ್ಯಾ.ಕುನ್ಹಾ ಆಯೋಗದ ವರದಿಯಲ್ಲಿನ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಕೊರೋನಾ ವೈರಾಣು ಪತ್ತೆಗೆ ಯಾವ ರೀತಿಯಲ್ಲೂ ನೆರವಿಗೆ ಬರದ 17 ಸಿ.ಟಿ ಸ್ಕ್ಯಾನ್ ಯಂತ್ರಗಳನ್ನು, ಕೋವಿಡ್ ನಿರ್ವಹಣೆಗಾಗಿ ಬಿಡುಗಡೆ ಮಾಡಿದ ಅನುದಾನದಲ್ಲೇ ಖರೀದಿಸಲಾಗಿದೆ. ಇದರಿಂದ ಕೋವಿಡ್ ನಿಯಂತ್ರಣಕ್ಕೆ ಯಾವ ಪ್ರಯೋಜನವೂ ಆಗಿಲ್ಲ ಎಂದು ವರದಿ ಹೇಳಿದೆ.128…

Read More

‘ಮುಡಾ’ ಹಗರಣದ ತನಿಖೆ ಚುರುಕುಗೊಳಿಸಿದ ‘ED’ : ವಿಚಾರಣೆಗೆ ಹಾಜರಾಗುವಂತೆ ಸಿಎಂಗೆ ನೋಟಿಸ್ ಜಾರಿ ಸಾಧ್ಯತೆ!

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇದೀಗ ಜಾರಿ ನಿರ್ದೇಶನಾಲಯದ ಟೆನ್ಶನ್ ಶುರುವಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕುಮಾರ್ ನಾಯಕ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗಾಗಿ ಸಹಜವಾಗಿ ಸಿಎಂ ಸಿದರಾಮಯ್ಯ ಅವರಿಗೆ ಇದೀಗ ಇಡಿ ಅಧಿಕಾರಿಗಳ ಟೆನ್ಶನ್ ಹೆಚ್ಚಾಗಿದೆ. ಹಾಗಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ವಿಚಾರಣೆಗೆ ಹಾಜರಾಗುವಂತೆ ಶೀಘ್ರದಲ್ಲಿ ಇಡಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು…

Read More

ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರ್ ಬೈಎಲೆಕ್ಷನ್; ಬೆಳಗ್ಗೆಯಿಂದ ಬಿರುಸಿನಿಂದ ಸಾಗಿದ ಮತದಾನ

ರಾಮನಗರ/ಹಾವೇರಿ/ಬಳ್ಳಾರಿ: ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಜನರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಹಿರಿಯ ನಾಗರಿಕರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ.  ಚನ್ನಪಟ್ಟಣ ಸೂಕ್ಷ್ಮ ಕೇಂದ್ರ ಆಗಿರುವುದರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪ್ರತಿ ಕೇಂದ್ರಗಳಿಗೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 276 ಮತ ಕೇಂದ್ರಗಳಲ್ಲೂ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಷೇತ್ರದ ಮತಗಟ್ಟೆಗಳಲ್ಲಿ ಸರತಿ ಸಾಲಲ್ಲಿ ನಿಂತು ಜನರು ವೋಟ್ ಮಾಡುತ್ತಿದ್ದಾರೆ. ವೃದ್ಧರೊಬ್ಬರು ಚನ್ನಪಟ್ಟಣ ಸರ್ಕಾರಿ ಬಾಲಕಿಯರ ಕಾಲೇಜು ಬೂತ್‌ನಲ್ಲಿ ವ್ಹೀಲ್ ಚೇರ್‌ನಲ್ಲಿ…

Read More

H.D ಕುಮಾರಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ : ಸಚಿವ ಜಮೀರ್ ಅಹ್ಮದ್ ವಿರುದ್ಧ `FIR’ ದಾಖಲು!

ಬೆಂಗಳೂರು : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರದ ವೇಳೆ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ನೀಡಿದ್ದ ಹೇಳಿಕೆ ಸಂಬಂಧ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಚಿವ ಜಮೀರ್ ಅಹ್ಮದ್ ಅವರು ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಾರೆ. ಕರಿಯ ಕುಮಾರಸ್ವಾಮಿ ಎಂದು ವರ್ಣಭೇದ ಪ್ರದರ್ಶಿಸಿ ಅವಮಾನ…

Read More

ತುಳಸಿ ವಿವಾಹದ ಮಹತ್ವವೇನು..?

@ ರಾಜಶೇಖರ ನಾಯ್ಕತುಳಸಿ ವಿವಾಹವನ್ನು ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ತುಳಸಿಯನ್ನು ಪೂಜನೀಯ ಸಸ್ಯವಾಗಿ ಆರಾಧಿಸಲಾಗುತ್ತದೆ. ಪುರಾಣ ಕಾಲದಲ್ಲಿ ಮಥುರಾ ಪಟ್ಟಣವನ್ನು ದೈತ್ಯ ರಾಜ ಕಲನೇಮಿ ಆಳುತ್ತಿದ್ದನು. ಅವನ ಮಗಳು ವೃಂದಾ (ಬೃಂದಾ) ಮಹಾನ ದೈವಭಕ್ತಿಯಾಗಿದ್ದಳು. ಅವಳು ಅಸುರರ ರಾಜ ಜಲಂಧರನನ್ನು ಮದುವೆಯಾದಳು. ವೃಂದಾ ಧರ್ಮಿಷ್ಟಳಾಗಿದ್ದಳು ಹಾಗೂ ಮಹಾವಿಷ್ಣುವಿನ ಪರಮ ಭಕ್ತೆಯಾಗಿದ್ದಳು. ಅವಳ ಪಾವಿತ್ರ‍್ಯತೆ ಹಾಗೂ ದೈವಭಕ್ತಿಯ ಸಾತ್ವಿಕ ಶಕ್ತಿಯಿಂದ ಅವಳ ಗಂಡ ಜಲಂಧರ ಬಹಳಷ್ಟು ಶಕ್ತಿಶಾಲಿಯಾಗಿದ್ದನು.  ಜಲಂಧರನು ದೇವಲೋಕವನ್ನು ಗೆಲ್ಲುವ ಉದ್ದೇಶದಿಂದ ದೇವತೆಗಳ…

Read More

ಚುನಾವಣಾ ಪ್ರಚಾರಕ್ಕೂ ಜೈ, ‘ಬೋಂಡಾ ಮಾಡೋದಕ್ಕೆ ಸೈ’ ಎಂದ ‘ಎಂ.ಪಿ ರೇಣುಕಾಚಾರ್ಯ’

ಬಳ್ಳಾರಿ: ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಾಳೆ ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮನೆ ಮನೆ ಪ್ರಚಾರಕ್ಕೆ ಮಾತ್ರವೇ ಅವಕಾಶವಿದೆ. ಈ ವೇಳೆಯಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಮಾತ್ರ ತಾನು ಚುನಾವಣಾ ಪ್ರಚಾರಕ್ಕೂ ಜೈ, ಬೋಂಡಾ ಮಾಡೋದಕ್ಕೂ ಸೈ ಎಂಬುದಾಗಿ ಹೋಟೆಲ್ ಒಂದರಲ್ಲಿ ಮಿರ್ಚಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ವೀಡಿಯೋ ಸಹಿತ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಹೊನ್ನಾಳಿ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು,…

Read More

ಬಿಎಸ್‌ವೈಗೆ ಮತ್ತೊಂದು ಶಾಕ್ ಕೊಟ್ಟ ಸರ್ಕಾರ – 300 ಕೋಟಿ ಅನುದಾನ ಅಕ್ರಮ ತನಿಖೆಗೆ ಸಮಿತಿ ರಚನೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಕೋವಿಡ್ ಬಳಿಕ ಕೆಕೆಆರ್‌ಡಿಬಿ ಅಕ್ರಮದ ಕುರಿತು ತನಿಖೆಗೆ ಸರ್ಕಾರ ತಂಡ ರಚಿಸಿದೆ. ಕೋವಿಡ್ ಹಗರಣದ ತನಿಖೆಗೆ ಬಳಿಕ ಯಡಿಯೂರಪ್ಪ ವಿರುದ್ಧ ಮತ್ತೊಂದು ಹಗರಣದ ತನಿಖೆಗೆ ಸರ್ಕಾರ ಸಮಿತಿ ರಚನೆ ಮಾಡಿದೆ. ಕಲ್ಯಾಣ-ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ಅಕ್ರಮದ ಕುರಿತು ತನಿಖೆಗೆ ಆದೇಶ ಹೊರಡಿಸಿದೆ. 300 ಕೋಟಿ ಅನುದಾನ ಅಕ್ರಮ ಆಗಿದೆ ಎಂದು ತನಿಖೆಗೆ ಸರ‍್ಕಾರ ಸಮಿತಿ ರಚನೆ ಮಾಡಿದೆ. 2020-2023ರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ…

Read More

ಮಿಸ್ಟರ್ ದೇವೇಗೌಡ, ನಿಮ್ಮನ್ನ ಸಿಎಂ ಮಾಡಿದ್ದು ಯಾರು? – ಮೇಕೆದಾಟುಗಾಗಿ ಮೋದಿಯನ್ನ ಹಾಡಿ ಹೊಗಳ್ತೀರಿ – ಸಿಎಂ ವಾಗ್ದಾಳಿ

ರಾಮನಗರ: ದ್ವೇಷದ ರಾಜಕಾರಣ ಮಾಡೋದ್ರಲ್ಲಿ ದೇವೇಗೌಡರು ನಂಬರ್ 1. ಉಸಿರಿರುವ ವರೆಗೆ ಮೇಕೆದಾಟು ಮಾಡ್ತೇನೆ ಅಂದಿದ್ದಾರೆ, ಮಿಸ್ಟರ್ ದೇವೇಗೌಡ, ನಿಮ್ಮನ್ನ ಸಿಎಂ ಮಾಡಿದ್ದು ಯಾರು? ಮೇಕೆದಾಟು ಮಾಡಿಸಲು ಮೋದಿಯನ್ನ ಹಾಡಿ ಹೊಗಳ್ತೀರಿ. ಇದೇ 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಬಗ್ಗೆ ಏನು ಹೇಳಿದ್ರು? ಕುಮಾರಸ್ವಾಮಿ ಮೋದಿಯಂತಹ ಸುಳ್ಳುಗಾರ ಇಲ್ಲ ಅಂತ ಹೇಳಿದ್ದರು. ದೇವೇಗೌಡರು ಮೋದಿ ಯಾವುದೇ ಕಾರಣಕ್ಕೂ ಪ್ರಧಾನಿ ಆಗಲ್ಲ, ಒಂದು ವೇಳೆ ಪ್ರಧಾನಿ ಆದ್ರೆ ದೇಶ ಬಿಡ್ತಿನಿ ಅಂದರು, ಬಿಟ್ರಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈತ್ರಿ…

Read More

ಮುಂಡಗೋಡ ಪೊಲೀಸರ ಭರ್ಜರಿ ಸಾಹಸl ಮನೆ ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧನ

ಮುಂಡಗೋಡ : ಇಲ್ಲಿಯ ಭಾರತ ನಗರದ ಅರ್ಜುನಸಿಂಗ್ ಠಾಕೂರ್ ಅವರ ಮನೆ ಬಾಗಿಲು ಮುರಿದು, ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು ಹಾಗೂ ನಗದು ಹಣ 50,000 ಸೇರಿದಂತೆ ಒಟ್ಟು 1 ಲಕ್ಷ 46,500ರೂ. ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಅಕ್ಟೋಬರ್‌ 28ರಂದು ಈ ಕಳ್ಳತನದ ಘಟನೆ ಜರುಗಿತ್ತು.  ಮುಂಡಗೋಡ ಸುಭಾಸನಗರದ ಚೇತನ್ ಪಾರ್ಗೆ (23) ಮತ್ತು ಸುಭಾಸ ನಗರದ ವಿನಾಯಕ ಭೋವಿವಡ್ಡರ್ (23) ಬಂಧಿತ ಆರೋಪಿಗಳಾಗಿದ್ದಾರೆ.ಬಂಧಿತ ಆರೋಪಿತರಿಂದ10 ಗ್ರಾಂ. ಬಂಗಾರದ ಚೈನ್-(ಅಂದಾಜು ಮೊತ್ತ…

Read More