ಮುಂಡಗೋಡ : ಇಲ್ಲಿಯ ಸಿರ್ಸಿ ರಸ್ತೆಯಲ್ಲಿರುವ ನವರಂಗ ವೆಲ್ಡಿಂಗ್ ವರ್ಕ್ಸ್ ಅಂಗಡಿಯ ಮುಂದೆ ಇಟ್ಟಿದ್ದ 1ಲಕ್ಷ 30ಸಾವಿರರೂ. ಬೆಲೆ ಬಾಳುವ ಕಬ್ಬಿಣದ ವಸ್ತುಗಳನ್ನು ಕಳ್ಳರು ಕಳುವು ಮಾಡಿಕೊಂಡು ಹೋದ ಘಟನೆ ನಡೆದಿದೆ.
ಈ ಬಗ್ಗೆ ಏಜಾಜ್ ನವಾಜ್ ನರೇಗಲ್ ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನವರಂಗ ವೆಲ್ಡಿಂಗ್ ವರ್ಕ್ಸ ಅಂಗಡಿಯ ಮುಂದೆ ಇಟ್ಟಿದ್ದ ಮೂರು ಕಬ್ಬಿಣದ ಟೇಬಲ್, ಹತ್ತು ಫೂಟ ಉದ್ದದ ಒಂದು ಕಬ್ಬಿಣದ ಗೇಟು, 4 ಸಣ್ಣ ಗೇಟಗಳು, 11.5 ಉದ್ದದ ಕಬ್ಬಿಣದ ಸಾದಾ ಬೀಮಗಳು, 14*14 ಉದ್ದದ 4 ಕಬ್ಬಿಣದ ಟ್ರೆಸಗಳು, ತಯಾರಿಸುವ ಹಂತದಲ್ಲಿರುವ ಮೂರು ದೂಡುವ ಗಾಡಿಗಳು, 10 ಫೂಟು ಉದ್ದದ ಎರಡು ಕಬ್ಬಿಣದ ಏಣಿಗಳು, ಆರು ಫೂಟು ಉದ್ದದ ಎರಡು ಕಬ್ಬಿಣದ ಲಾಡರಗಳು ಮತ್ತು ಕೆಲವು ಕಬ್ಬಿಣದ ಸಾಮಾನುಗಳು ಸೇರಿ ಒಟ್ಟು 1,30,000ರೂ. ಮೌಲ್ಯದ ವಸ್ತುಗಳನ್ನು ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆಂದು ಏಜಾಜ್ ನವಾಜ್ ನರೇಗಲ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.