ಕ.ಸಾ.ಪ.ದಿಂದ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ

Spread the love

ಮುಂಡಗೋಡ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡಗೋಡ ಮತ್ತು ಸರ್ಕಾರಿ ತಾಂತ್ರಿಕ ತರಬೇತಿ ಮಹಾವಿದ್ಯಾಲಯ ನ್ಯಾಸರ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಐಟಿಐ ಮಹಾವಿದ್ಯಾಲಯದಲ್ಲಿ ಭಾರತರತ್ನ  ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ತಾಲೂಕಾಧ್ಯಕ್ಷರಾದ ಸಹದೇವಪ್ಪ ನಡಗೇರಿ ವಹಿಸಿದ್ದರು.  ಭಾರತರತ್ನ ಸರ್ ವಿಶ್ವೇಶ್ವರಯ್ಯನವರ ಕುರಿತು ಉಪನ್ಯಾಸವನ್ನು ಶಶಿಧರ ಹಿರೇಮಠ್ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಡಾ. ಪಿ.ಪಿ.ಛಬ್ಬಿ, ಕ.ಸಾ.ಪ. ಗೌರವ ಕಾರ್ಯದರ್ಶಿ ಎಸ್.ಡಿ.ಮುಡೆಣ್ಣವರ, ವಿ.ಎಸ್.ಕೊಣಸಾಲಿ ಮತ್ತು ಶ್ರೀಧರ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ರವಿ ಕಮಡೊಳ್ಳಿ ಇದ್ದರು. ರವಿ ಭಜಂತ್ರಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಗಪ್ಪ ಕೊಳೂರ, ಎಸ್. ಬಿ.ಹೂಗಾರ, ಎಸ್. ಕೆ. ಬೋರ್ಕರ್, ಕಾಲೇಜಿನ ಸಿಬ್ಬಂದಿಗಳು ಹಾಜರಿದ್ದರು.