ಸಿವಿಲ್ ಇಂಜಿನೀಯರಿಂಗನಲ್ಲಿ ಚಿನ್ನದ ಪದಕ ಪಡೆದ ಲಕ್ಷ್ಮೀ ಕಪ್ಪತ್ತಮಠ

Spread the love

ವರದಿ : ಮಂಜುನಾಥ ನಡಿಗೇರ

ಮುಂಡಗೋಡ : ಧಾರವಾಡದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಇಂಜಿನೀಯರಿಂಗ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಈ ವರ್ಷದ ಅಂತಿಮ ಪರೀಕ್ಷೆಯಲ್ಲಿ ಮುಂಡಗೋಡ ತಾಲೂಕಿನ ಇಂದೂರ ಕೊಪ್ಪ ಗ್ರಾಮದ ಲಕ್ಷ್ಮೀ ಕಪ್ಪತ್ತಮಠ ಅವರು ಸಿವಿಲ್ ಇಂಜಿನೀಯರಿಂಗನಲ್ಲಿ ಚಿನ್ನದ ಪದಕ ಪಡೆದು ಮುಂಡಗೋಡ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಲಕ್ಷ್ಮೀ ಕಪ್ಪತ್ತಮಠ ಅವರು ಇಂದೂರ ಕೊಪ್ಪ ಗ್ರಾಮದ ರಾಜಕುಮಾರ ಹಾಗೂ ರೇಣುಕಾ ಕಪ್ಪತ್ತಮಠ ಅವರ ಪುತ್ರಿಯಾಗಿದ್ದಾರೆ. ಮಗಳ ಸಾಧನೆಗೆ ತಂದೆ-ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.