
ಮುಂಡಗೋಡ : ತಾಲೂಕಿನ ಇಂದೂರ ಗ್ರಾಮದ ಜಾನಪದ ಕಲಾವಿದರೂ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಹದೇವಪ್ಪ ನಡಗೇರಿ ಅವರಿಗೆ 2022ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
4 ದಶಕಕ್ಕೂ ಹೆಚ್ಚು ಕಾಲದಿಂದ ಸಹದೇವಪ್ಪ ನಡಗೇರಿ ದೇಸಿ ಸೊಗಡಿನ ಜಾನಪದ ಕಲೆಯನ್ನು ಬೆಳೆಸುತ್ತಿದ್ದಾರೆ.
66 ವರ್ಷದ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ತಾಲೂಕಿನ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಸಹದೇವಪ್ಪ ನಡಗೇರಿ ಅವರು ಮುಂಡಗೋಡ ತಾಲೂಕಾ ಘಟಕದ ಕನ್ನಡ ಸಾಹಿತ್ಯ ಪರಿಪತ್ತಿನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಹಳ ಸಂತಸವಾಗಿದೆ….. ಪ್ರಶಸ್ತಿಯು ಜನಪದ ಸೇವೆಗೆ ಮತ್ತಷ್ಟು ಜವಾಬ್ದಾರಿ ನೀಡಿದೆ…..
ಜಾನಪದದ ಧ್ವನಿಯನ್ನು ಸರಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಬಹಳ ಸಂತಸವಾಗಿದೆ. ತಂದೆ, ತಾಯಿ, ಹಿರಿಯರು ಹಾಗೂ ಸಾಹಿತ್ಯಾಸಕ್ತರ ಆಶೀರ್ವಾದ, ಅಭಿಮಾನದಿಮದ ಜನಪದ ಕಲೆಯನ್ನು ಪಸರಿಸಲು ಇಲ್ಲಿಯವರೆಗೆ ಸಾಧ್ಯವಾಗಿದೆ. ಪ್ರಶಸ್ತಿಯು ಜನಪದ ಸೇವೆಗೆ ಮತ್ತಷ್ಟು ಜವಾಬ್ದಾರಿ ನೀಡಿದೆ ಎಂದು ಸಹದೇವಪ್ಪ ನಡಗೇರಿ ತಿಳಿಸಿದ್ದಾರೆ.
*****
