
ಮುಂಡಗೋಡ : ಪೊಲೀಸ ಜೀಪಗೆ ಡಿಸೇಲ್ ಹಾಕಿಸಿ ಹಣ ನೀಡದೇ ಹೋಗಿದ್ದಕ್ಕೆ ಡಿಸೇಲ್ ಹಣ ನೀಡುವಂತೆ ಪೆಟ್ರೋಲ್ ಬಂಕನ ಸಿಬ್ಬಂದಿ ಕೇಳಿದ್ದಕ್ಕೆ ಪೊಲೀಸ ಠಾಣೆಗೆ ಕರೆಸಿ ಆತನನ್ನು ಥಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ ಮಹದೇವ ಇಂದು ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್ ಮುಂದೆ ಕೇಳಿದ್ದಾನೆ.

ನಂತರ ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ಅವರು ಪೊಲೀಸ ಮಹದೇವನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡು, ಬುದ್ಧಿ ಮಾತು ಹೇಳಿದರು.

ಮುಂಡಗೋಡ ಪೊಲೀಸ ಠಾಣೆಯ ಪೊಲೀಸ ಮಹದೇವನು ಸೋಮವಾರ ಪೊಲೀಸ ಜೀಪಗೆ ಪೆಟ್ರೋಲ ಬಂಕನಲ್ಲಿ ಡಿಸೇಲ್ ಹಾಕಿಸಿಕೊಂಡಿದ್ದಾನೆ. ಡಿಸೇಲ ಹಾಕಿಸಿದ ಸಿಬ್ಬಂದಿ ರಾಘು ಹಣ ಕೇಳಿದಾಗ ಸಂಜೆ ಕೊಡುವುದಾಗಿ ಹೇಳಿ ಹೋದ ಪೊಲೀಸರು ಹಣ ನೀಡಲಿಲ್ಲ. ರಾಘು ಪೊಲೀಸನಿಗೆ ಕರೆ ಮಾಡಿದಾಗ ಪೊಲೀಸ ಮಹದೇವನು ಅವಾಚ್ಯ ಶಬ್ದದಿಂದ ಬೈಯ್ದು ಠಾಣೆಗೆ ಕರೆಸಿದ್ದಾನೆ. ಠಾಣೆಗೆ ರಾಘು ಬಂದಾಗ ಆತನನ್ನು ಥಳಿಸಲಾಗಿತ್ತು.

ಥಳಿತಕ್ಕೊಳಗಾದ ದಲಿತ ಯುವಕ ರಾಘು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದನು. ನಂತರ ಈ ಪ್ರಕರಣ ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದಂತೆ ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
*****
