ಕೇಂದ್ರ ಸರ್ಕಾರದಿಂದ ಕ್ರೆಡಿಟ್ ಗ್ಯಾರಂಟಿ ನಿಧಿಗೆ ತಿದ್ದುಪಡಿ: ಹೊಸ ಉದ್ಯೋಗಾವಕಾಶ ಸೃಷ್ಠಿಯೆಂದ ಸಿಎಂ ಬೊಮ್ಮಾಯಿ

Spread the love

ಬೆಂಗಳೂರು: ಕೇಂದ್ರ ಸರ್ಕಾರದಿಂದ ಕ್ರೆಡಿಟ್ ಗ್ಯಾರಂಟಿ ನಿಧಿಗೆ ಮಹತ್ವದ ತಿದ್ದುಪಡಿಯನ್ನು ಮಾಡಿ, ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಇದು ಹೊಸ ಉದ್ಯೋಗಾವಕಾಶ ಸೃಷ್ಠಿ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಅವರು ಈ ಬಗ್ಗೆ ಟ್ವಿಟ್ ಮಾಡಿದ್ದು, ಭಾರತದ ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗೆ ಇಂಬು ನೀಡಲು, ಸ್ವಸಹಾಯ ಸಂಘಗಳು ಮತ್ತು ಜಂಟಿ ಬಾಧ್ಯತಾ ಗುಂಪುಗಳು ಕೈಗೊಳ್ಳುವ ಕಿರು ಉದ್ದಿಮೆಗಳಿಗೆ ಹೆಚ್ಚಿನ ರೀತಿಯಲ್ಲಿ, ಸರಳವಾಗಿ ಹಣಕಾಸಿನ ನೆರವನ್ನು ಪಡೆಯುವ ನಿಟ್ಟಿನಲ್ಲಿ ಕ್ರೆಡಿಟ್ ಗ್ಯಾರಂಟಿ ನಿಧಿಗೆ ಕೆಲವು ಅವಶ್ಯಕ ತಿದ್ದುಪಡಿ ತಂದಿರುವುದು ಸ್ವಾಗತಾರ್ಹವಾಗಿದ್ದು ಎಂದು ಹೇಳಿದ್ದಾರೆ.