
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಆಕ್ಷೇಪಾರ್ಹ ಪೋಸ್ಟರ್‌ಗಳನ್ನ ಹಾಕಿದ್ದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 100 ಮಂದಿ ವಿರುದ್ಧ ಎಫ್‌ಐಆರ್‌ಗಳನ್ನ ದಾಖಲಿಸಿದ್ದಾರೆ. ವರದಿಗಳ ಪ್ರಕಾರ, ಈ ಪೋಸ್ಟರ್‌ಗಳಲ್ಲಿ ‘ಮೋದಿ ತೋಲಗಿಸಿ-ದೇಶವನ್ನ ಉಳಿಸಿ’ ಎಂದು ಬರೆಯಲಾಗಿದೆ.
ಇಡೀ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್‌ಗಳನ್ನ ಹಾಕಲಾಗಿದ್ದು, ಶೀಘ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೆಹಲಿ ಪೊಲೀಸರ ವಿಶೇಷ ಸಿಪಿ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ. ಈ (ಆಕ್ಷೇಪಾರ್ಹ) ಪೋಸ್ಟರ್‌ಗಳಲ್ಲಿ ಪ್ರಿಂಟಿಂಗ್ ಪ್ರೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
ಈವರೆಗೆ ಆರು ಮಂದಿಯನ್ನ ಬಂಧಿಸಲಾಗಿದೆ ಎಂದು ವಿಶೇಷ ಸಿಪಿ ದೀಪೇಂದ್ರ ಪಾಠಕ್ ತಿಳಿಸಿದ್ದು, ಈ ಪೋಸ್ಟರ್‌ಗಳನ್ನ ಆಮ್ ಆದ್ಮಿ ಪಕ್ಷವೇ ಮಾಡಿಸಿದ ಎನ್ನುವ ಅನುಮಾನವಿದೆ. ಆಮ್ ಆದ್ಮಿ ಪಕ್ಷದ ಕಛೇರಿಯಿಂದ ವ್ಯಾನ್ ಹೊರಡುತ್ತಿದ್ದಂತೆಯೇ ಪೊಲೀಸರು ವ್ಯಾನ್ ತಡೆದರು ಎಂದು ದೀಪೇಂದ್ರ ಪಾಠಕ್ ಹೇಳಿದ್ದಾರೆ. ನಂತ್ರ ಅನೇಕ ಪೋಸ್ಟರ್‌ಗಳನ್ನ ವಶಪಡಿಸಿಕೊಳ್ಳಲಾಗಿದ್ದು, ಕೆಲವರನ್ನ ಸ್ಥಳದಲ್ಲೇ ಬಂಧಿಸಲಾಯಿತು. ಪ್ರಿಂಟಿಂಗ್ ಪ್ರೆಸ್ ಕಾಯ್ದೆ ಮತ್ತು ಆಸ್ತಿ ದುರ್ಬಳಕೆ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ನಗರದಾದ್ಯಂತ ಸಾವಿರಾರು ಪೋಸ್ಟರ್ ತೆಗೆದುಹಾಕಲಾಗಿದೆ.!
ವರದಿಯ ಪ್ರಕಾರ, ಇಡೀ ದೆಹಲಿ ನಗರದಿಂದ ಸುಮಾರು 2000 ಪೋಸ್ಟರ್‌ಗಳನ್ನ ಕಿತ್ತು ಹಾಕಲಾಗಿದೆ. ಎಎಪಿ ಕಚೇರಿಯಿಂದ ಹೊರಡುವಾಗ ತಡೆದ ವ್ಯಾನ್‌ನಿಂದ ವ್ಯಕ್ತಿಯೊಬ್ಬನನ್ನ ಬಂಧಿಸಲಾಗಿದೆ ಎಂದು ವಿಶೇಷ ಸಿಪಿ ದೀಪೇಂದ್ರ ಪಾಠಕ್ ಹೇಳಿದ್ದಾರೆ.
ಎಷ್ಟೋ ಪೋಸ್ಟರ್’ಗಳಿಗೆ ಆರ್ಡರ್.!
ಪೊಲೀಸರ ಪ್ರಕಾರ, ಎರಡು ಪ್ರಿಂಟಿಂಗ್ ಪ್ರೆಸ್ ಸಂಸ್ಥೆಗಳಿಗೆ ತಲಾ 50,000 ಪೋಸ್ಟರ್‌ಗಳನ್ನ ತಯಾರಿಸಲು ಆದೇಶಿಸಲಾಯಿಗಿದೆ. ಇನ್ನು ಜಿಲ್ಲೆಯಲ್ಲಿ 20 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಡಿಸಿಪಿ (ವಾಯುವ್ಯ) ಜಿತೇಂದ್ರ ಮೀನಾ ಖಚಿತಪಡಿಸಿದ್ದಾರೆ. ‘ಹೆಚ್ಚಿನ ಎಫ್‌ಐಆರ್‌ಗಳನ್ನ ಸಾರ್ವಜನಿಕ ಆಸ್ತಿ ವಿರೂಪಗೊಳಿಸುವ ಕಾಯಿದೆ ಮತ್ತು ಪತ್ರಿಕಾ ಮತ್ತು ಪುಸ್ತಕಗಳ ನೋಂದಣಿ ಕಾಯಿದೆಯಡಿ ದಾಖಲಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.