ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಡಾ.ನಾಗೇಶ ನಾಯ್ಕ ಕಾಗಾಲ ಚುನಾವಣಾ ಅಧಿಕಾರಿ ಅಜ್ಜಪ್ಪ ಸೊಗಲದ ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಯಲ್ಲಾಪುರ ತಾಲೂಕು ಅಧ್ಯಕ್ಷ ಬೆನಿತ್ ಸಿದ್ದಿ, ಜಿಲ್ಲಾ ಕಾರ್ಯಾಧ್ಯಕ್ಷ ಮುನಾಫ್ ಮಿರ್ಜಾನಕರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಮೋಹಿನಿ ನಾಯ್ಕ, ಶ್ರೀಮತಿ ಪುಷ್ಪಾ ನಾಗೇಶ, ಜಿಲ್ಲಾ ಉಪಾಧ್ಯಕ್ಷ ಜಿ. ಕೆ. ಪಟಗಾರ, ಹಿಂದುಳಿದ ವರ್ಗದ ಅಧ್ಯಕ್ಷ ರಮೇಶ ನಾಯ್ಕ ಕರ್ಕಿ, ಕ್ಷೇತ್ರಾಧ್ಯಕ್ಷ ಮುತ್ತಣ್ಣ ಸಂಗೂರಮಠ, ಬನವಾಸಿ ಬ್ಲಾಕ್ ಅಧ್ಯಕ್ಷ ಮಹದೇವ ಈಳಿಗೇರ, ಗೌರವಾಧ್ಯಕ್ಷ ಸೋಮೇಶ್ವರ ಗೌಡ ಉಂಚಳ್ಳಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಚಂದ್ರಪ್ಪ ಚೆನ್ನಯ್ಯ, ಮಹಿಳಾ ಜಿಲ್ಲಾ ಕಾರ್ಯದರ್ಶಿ ಮೇರಿ ರೆಬೆಲ್ಲೊ, ಬ್ಲಾಕ್ ಕಾರ್ಯದರ್ಶಿ ದೇವರಾಜ ನಾಯ್ಕ, ಯುವ ಅಧ್ಯಕ್ಷ ವಿಜಯ ಕಲ್ಕರ್ಡಿ ಮುಂತಾದವರಿದ್ದರು.