ಬಿ.ಜೆ.ಪಿ., ಜೆ.ಡಿ.ಎಸ್. ಪಕ್ಷಗಳು ದೈವಜ್ಞ ಸಮಾಜದವರನ್ನು ಕಡೆಗಣಿಸಿದ್ದಾರೆ : ಆರೋಪ

Spread the love

ಮುಂಡಗೋಡ : ಯಲ್ಲಾಪುರ ಮತ್ತು ಮುಂಡಗೋಡ ಮತ ಕ್ಷೇತ್ರದಲ್ಲಿ ಸುಮಾರು 12 ಸಾವಿರ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರ ಮತಗಳು ಇವೆ ಎಂದು ತಿಳಿದು ಬಂದಿವೆ. ಆದರೂ ಬಿಜೆಪಿ, ಜೆಡಿಎಸ್ ಪಕ್ಷಗಳು ದೈವಜ್ಞ ಬ್ರಾಹ್ಮಣ ಸಮಾಜದವರನ್ನು ಕಡೆಗಣಿಸಿದ್ದಾರೆ ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಸದಸ್ಯರಾದ ಮೋಹನ ಪಾಲನಕರ ಗಂಭೀರವಾಗಿ ಆರೋಪಿಸಿದ್ದಾರೆ.
ಕಳೆದ 15 – 20 ವರ್ಷಗಳಲ್ಲಿ ಒಂದೂ ಸೀಟು ನಮಗೆ ಯಾವದೇ ಪಕ್ಷದಿಂದ ದೊರಕಲಿಲ್ಲ.
ಗಂಗಾಧರ ಭಟ್ ಅವರಿಗೆ ಕಾರವಾರದಲ್ಲಿ ಮತ್ತು ಸಂತೋಷ್ ರಾಯ್ಕರ್ ಅವರಿಗೆ ಯಲ್ಲಾಪುರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದ ಸೀಟು ಸಿಗದಿದ್ದ ಕಾರಣದಿಂದ ಪಕ್ಷೇತರರಾಗಿ ಗಂಗಾಧರ ಭಟ್ ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸಂತೋಷ ರಾಯ್ಕರ್ ಇವರು ನಾಮಪತ್ರ ಸಲ್ಲಿಸಬೇಕಾಯಿತು.
ಸಂತೋಷ ರಾಯ್ಕರ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
ಸಂತೋಷ ರಾಯ್ಕರ್ ಅವರು ಕಳೆದ ಎರಡು ವರ್ಷಗಳಿಂದ ಯಲ್ಲಾಪುರ ಮತ್ತು ಮುಂಡಗೋಡ ತಾಲೂಕಿನ ಹಳ್ಳಿ ಹಳ್ಳಿ ಹೋಗಿ ಸಮಾಜ ಸೇವೆ ಮಾಡುತ್ತಾ ಇದ್ದಾರೆ ಮತ್ತು ಅಲ್ಲಿಯ ಎಲ್ಲ ಸಮಾಜದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಈ ವಿಧಾನಸಭಾ ಚುನಾವಣೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ನಿಜವಾದ ಸತ್ವ ಪರೀಕ್ಷೆ ನಡೆಯಲಿದೆ.
ನಮ್ಮ ಭವಿಷ್ಯ ನಮ್ಮ ಸಮಾಜದ ಎರಡು ಅಭ್ಯರ್ಥಿಗಳ ಚುನಾವಣೆ ಫಲಿತಾಂಶದ ಮೇಲೆ ಅವಲಂಬಿಸಿ ಉಂಟು. ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣರು ಸಂಘಟಿತರಾಗಿ ಸಂತೋಷ ರಾಯ್ಕರ್ ಮತ್ತು ಗಂಗಾಧರ ಭಟ್ ಇವರನ್ನು ಗೆಲ್ಲಿಸಬೇಕು ಮತ್ತು ನಮ್ಮ ತಾಕತ್ತನ್ನು ಎಲ್ಲ ಪಕ್ಷಗಳಿಗೆ ತೋರಿಸಬೇಕು ಎಂದು ಅವರು ತಿಳಿಸಿದ್ದಾರೆ.
ದೈವಜ್ಞ ಬ್ರಾಹ್ಮಣ ಸಮಾಜದ ಬಾಂಧವರು ಸಂಘಟಿತರಾಗಿ ದೈವಜ್ಞ ಬ್ರಾಹ್ಮಣ ಸಮಾಜದ ಅಭ್ಯರ್ಥಿಗಳಾದ ಸಂತೋಷ್ ರಾಯ್ಕರ್ ಮತ್ತು ಗಂಗಾಧರ ಭಟ್ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಬೇಕೆಂದು ಅವರು ವಿನಂತಿಸಿದ್ದಾರೆ.