ಬಿಜೆಪಿಯವರದ್ದು ಮನೆಯೊಂದು ನೂರು ಬಾಗಿಲು ಆಗಿದೆ; ಸಚಿವ ಎಂ.ಬಿ. ಪಾಟೀಲ್ ಲೇವಡಿ

Spread the love

ಬೆಂಗಳೂರು: ಬಿಜೆಪಿ ಪಕ್ಷ ಛಿದ್ರ ಛಿದ್ರವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಿಜೆಪಿಯಲ್ಲಿನ ಆಂತರಿಕ ಕಲಹ ಬಹಿರಂಗವಾಗುತ್ತಿದೆ. ಬಿಜೆಪಿಯವರದ್ದು ಮನೆಯೊಂದು ನೂರು ಬಾಗಿಲು ಆಗಿದೆ.

ಪಕ್ಷ ಛಿದ್ರವಾಗಿದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಅಂತಿಮ ಘಟ್ಟ ತಲುಪಿದೆ. ಎಷ್ಟೇ ಫೆವಿಕಾಲ್ ಹಾಕಿದರೂ ಬಿಜೆಪಿಯನ್ನು ಜೋಡಿಸಲು ಆಗಲ್ಲ, ಪಾಪ ನಮ್ಮ ಗ್ಯಾರಂಟಿಗಳಿಂದ ತೊಂದರೆ ಆಗುತ್ತಿದೆ ಅವರಿಗೆ ಎಂದು ಲೇವಡಿ ಮಾಡಿದ್ದಾರೆ.

ಬಿಜೆಪಿಯವರು ಒಬ್ಬೊಬ್ಬರು ಒಂದೊಂದು ತರ ಮಾತನಾಡುತ್ತಿದ್ದಾರೆ. ಉರಿದುಕೊಂಡಿದ್ದಾರೆ ಉರಿದುಕೊಳ್ಳಲಿ ಎಂದು ಹೇಳಿದರು.