
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ವಿಚಾರವಾಗಿ ಸಿಡಬ್ಲ್ಯೂಸಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೋಗುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.
ದೆಹಲಿ ಭೇಟಿ ವೇಳೇ ಪಕ್ಷದ ವಿಷಯ ಬಗ್ಗೆ ಚರ್ಚೆ ಮಾಡುತ್ತಾರೆ ಅಲ್ಲದೆ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಬಗೆಯು ಚರ್ಚೆ ಮಾಡುತ್ತಾರೆ ನಿಗಮ ಮಂಡಳಿ ಅಧ್ಯಕ್ಷರ ನೇಮಕಕ್ಕೆ ಶಾಸಕರಿಂದಲೂ ಒತ್ತಡವಿದೆ ಈ ವಿಷಯದ ಕುರಿತಾಗಿ ಬೆಳಗಾವಿಯಲ್ಲಿ ನಡೆದಂತಹ ಸಿಎಲ್ಪಿ ಸಭೆಯಲ್ಲೂ ಒತ್ತಾಯ ಕೇಳಿ ಬಂದಿದೆ ಎಂದರು.ಮೊದಲು ಶಾಸಕರನ್ನು ನೇಮಕ ಮಾಡುತ್ತಾರೆ.ಆನಂತರ ಕಾರ್ಯಕರ್ತರಿಗೆ ಅವಕಾಶ ನೀಡಲಾಗುತ್ತದೆ ಎಂದು ಗ್ರಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ನಾಯಕರನ್ನು ಭೇಟಿ ಮಾಡಲಿದ್ದು, ನಿಗಮ ಮಂಡಳಿ ನೇಮಕ ಸೇರಿದಂತೆ ಲೋಕಸಭೆ ಚುನಾವಣೆ ಕುರಿತಂತೆ ಚರ್ಚಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಎನ್‌ಐಎ ಅಧಿಕಾರಿಗಳಿಂದ ಸರಣಿ ದಾಳಿ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿ ಬೇರೆ ಬೇರೆ ಕಡೆಯಿಂದ ಮಾಹಿತಿ ಸಿಗುತ್ತದೆ .ಆ ಮಾಹಿತಿ ಆಧಾರದಲ್ಲಿ ಅವರು ದಾಳಿ ಮಾಡುತ್ತಾರೆ ಎಂದು ಡಾ. ಜಿ ಪರಮೇಶ್ವರ್ ತಿಳಿಸಿದರು. ಕೆಲವು ದಾಳಿಗಳ ಬಗ್ಗೆ ರಾಜ್ಯದವರ ಜೊತೆ ಮಾಹಿತಿ ಹಂಚಿಕೊಳ್ಳುತ್ತಾರೆ ಯಾವಾಗಲೂ ಸ್ಲೀಪರ್ ಸೆಲ್ ಗಳಿರುವುದನ್ನು ಪತ್ತೆ ಮಾಡುತ್ತಾರೆ ಎಂದು ತಿಳಿಸಿದರು