ಮುಂಡಗೋಡ : ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಹನುಮಾಪುರ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಶಾಲೆ ಕುಸಿದಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ತಾಲೂಕಿನ ಹುನಗುಂದ ಹಾಗೂ ಲಕ್ಕೊಳ್ಳಿ ಗ್ರಾಮದಲ್ಲಿ ಮನೆ ಕುಸಿತಗೊಂಡಿವೆ. ತಾಲೂಕಿನ ಹುನಗುಂದ ಗ್ರಾಮದ ರೇಣವ್ವ ಕಣವಿ ಹಾಗೂ ಲಕ್ಕೊಳ್ಳಿ ಗ್ರಾಮದ ಶೋಭಾ ಕಿಳ್ಳಿಕ್ಯಾತರ್ ಎಂಬವರ ಮನೆಯೂ ಮಳೆಗೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಕಂದಾಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.