ಮುಂಡಗೋಡ : ದಿ.21 ರಂದು ನಡೆಯಲಿರುವ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಾಳೆ ದಿ.10ರಿಂದ ದಿ.20 ರವರೆಗೆ ಪೂರ್ವಭಾವಿ ಯೋಗ ತರಬೇತಿ ಶಿಬಿರವನ್ನು ಆಯುಷ್ ಇಲಾಖೆ ಹಮ್ಮಿಕೊಂಡಿದೆ.
ಈ ಯೋಗ ತರಬೇತಿ ಶಿಬಿರ ಸರ್ಕಾರಿ ಆಯುರ್ವೇದ ಆಸ್ಪತ್ರೆ ಮುಂಡಗೋಡಿನ ಯೋಗ ಹಾಲ್ ನಲ್ಲಿ ನಾಳೆ ದಿ.10ರಂದು ಬೆಳಿಗ್ಗೆ 6-30ರಿಂದ ಬೆಳಿಗ್ಗೆ 7-15 ರವರೆಗೆ 45 ನಿಮಿಷ ನಡೆಯಲಿದೆ. ತರಬೇತಿದಾರರಾಗಿ ಡಾ.ಲಕ್ಷ್ಮೀ ನವೀನ್ ಬಡಿಗೇರ ಅವರು ಈ ಶಿಬಿರವನ್ನು ನಡೆಸಿಕೊಡಲಿದ್ದಾರೆ.
ಈ ಸಲದ ಘೋಷವಾಕ್ಯ “ಮಹಿಳೆಯರ ಸಬಲೀಕರಣಕ್ಕಾಗಿ ಯೋಗ” ಆಗಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಲಾಭ ಪಡೆಯಬೇಕು. ಯೋಗಾಭ್ಯಾಸದ ನಂತರ ವಿಶೇಷ ಆಯುರ್ವೇದ ಕಷಾಯ ಸೇವಿಸಲು ನೀಡಲಾಗುವುದು. ಉಚಿತವಾಗಿ ಚವನ್ ಪ್ರಾಶ್ ವಿತರಣೆ, ಆರೋಗ್ಯ ಸಂಬಂಧಿ ಮಾಹಿತಿ ಉಳ್ಳ ಸಾಹಿತ್ಯ (ಬ್ಯಾನರ್) ವಿತರಿಸಲಾಗುವುದು. ಮುಂಡಗೋಡಿನ ಸಮಸ್ತ ನಾಗರಿಕರು ಈ ಶಿಬಿರದ ಲಾಭ ಪಡೆಯಬೇಕೆಂದು ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸಂಜೀವ ಗಲಗಲಿ ತಿಳಿಸಿದ್ದಾರೆ.