ಮುಂಡಗೋಡ : ಕರ್ನಾಟಕ ದಲಿತ ಸಂಘರ್ಷ ಸಮಿತಿ, ಆದಿಜಾಂಬವ ಪ್ರೌಢಶಾಲೆ ಹಾಗೂ ಡಾ.ಅಂಬೇಡ್ಕರ ವಿವಿದ್ದೋದೇಶ ಸಹಕಾರಿ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಸಿವಿಲ್ ಇಂಜರಿಂಗ್ ನಲ್ಲಿ ಶೇ.೯೦ ಸಾಧನೆ ಮಾಡಿದ ಶಾಹೀನ ತಾಡಪತ್ರಿ ವಿದ್ಯಾರ್ಥಿಗೆ ಸನ್ಮಾನ, ೨೦೨೪-೨೫ ನೇ ಶೈಕ್ಷಣಿಕ ವರ್ಷಕ್ಕೆ ಆದಿಜಾಂಬವ ಪ್ರೌಢಶಾಲೆಗೆ ೮ನೇ ಇಯತ್ತೆಗೆ ವಿದ್ಯಾರ್ಥಿಗಳು ಪ್ರವೇಶ ಪಡೆದವರಿಗೆ ಸ್ವಾಗತ ಹಾಗೂ ಜೂನ್ ೧೮ ರಂದು ಬ್ರಿಟಿಷ್ ಸೈನ್ಯದಲ್ಲಿ ಸೈನಿಕರ ಸಾಧನೆ ಮಹತ್ವವನ್ನು ಡಾ.ಬಿ.ಆರ್.ಅಂಬೇಡ್ಕರ ಮೆಚ್ಚಿದ ದಿನದ ಅಂಗವಾಗಿ ಮಂಗಳವಾರ ಆದಿಜಾಂಭವ ಪ್ರೌಢಶಾಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಪಿ.ಎಸ್.ಐ. ಪರುಷರಾಮ ಮಿರ್ಜಗಿ ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ವಿದ್ಯೆಯನ್ನು ಒಮ್ಮನಸ್ಸಿನಿಂದ ಓದಬೇಕು. ಓದಲು ಬೇಸರ ಬಂದರೆ ಪ್ರತಿ ದಿನ ಬೆಳಗ್ಗೆ ೪-೫ ಗಂಟೆಗೆ ಎದ್ದು ಓದಿ. ಇದೇ ಹವ್ಯಾಸವನ್ನು ಮುಂದುವರೆಸುತ್ತಾ ಹೋದರೆ ದಿನಕ್ಕೆ ೪-೫ತಾಸು ಓದುವುದು ಹವ್ಯಾಸವಾಗಿ ಬೆಳೆಯುತ್ತೆ ಇದರಿಂದ ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದರು.
ಶಾಹೀನ ತಾಡಪತ್ರಿ ಸಿವಿಲ್ ಇಂಜನಿರಿಂಗ್ ನಲ್ಲಿ ಶೇ.೯೦ ರಷ್ಟು ಅಂಕಪಡೆದು ಮುಂಡಗೋಡಗೆ ಕೀರ್ತಿ ತಂದಿದ್ದಾಳೆ. ವಿದ್ಯಾರ್ಥಿನಿ ಶಾಹೀನ ಇಷ್ಟಕ್ಕೆ ಸುಮ್ಮನೆ ಕುಳಿತುಕೊಳ್ಳದೆ ಮುಂದಿನ ಉನ್ನತ ಶಿಕ್ಷಣವನ್ನು ಪಡೆಯಬೇಕು. ಉತ್ತಮ ಉದ್ಯೋಗಕ್ಕೆ ಸೇರ್ಪಡೆಯಾಗಬೇಕು ಎಂದು ಶಾಹೀನ್‌ಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಹೀನ ತಾಡಪತ್ರಿಗೆ ಶಾಲು ಹೊದಿಸಿ ಸನ್ಮಾನ ಮಾಡಿ ಪೇಟ ತೋಡಿಸಿ ಆದಿಜಾಂಭ ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಅಂಬೇಡ್ಕರ ವಿವಿದ್ದೋದೇಶ ಸಹಕಾರಿ ಸೊಸೈಟಿ ಅಧ್ಯಕ್ಷ ಎಸ್.ಫಕ್ಕಿರಪ್ಪ ಅವರು ತಮ್ಮ ಸೊಸೈಟಿವತಿಯಿಂದ ಐದು ಸಾವಿರರೂ. ಚೆಕ್ ನೀಡಿದರು.
ಸಂತೋಷ ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ಸೋಮಣ್ಣ ಮುಡೆಣ್ಣವರ ಸ್ವಾಗತಿಸಿದರು. ರವಿ ಅಕ್ಕಿವಳ್ಳಿ ಕಾರ್ಯಕ್ರಮ ನಿರೂಪಿಸಿದರು. ಎಮ್.ಎಸ್.ಪಾಟೀಲ ವಂದಿಸಿದರು.