ಹಳ್ಳದಲ್ಲಿ ತೇಲಿ ಬಂದ ಚಿರತೆ ಶವ…

Spread the love

ಮುಂಡಗೋಡ : ದೊಡ್ಡಹಾರವಳ್ಳಿ ಭಾಗದ ಅರಣ್ಯದಲ್ಲಿ  ಚಿರತೆ ಸಾವನಪ್ಪಿದೆ.
ಗುರುವಾರ ಅಲ್ಲಿ ಹರಿದಿರುವ ಹಳ್ಳದಲ್ಲಿ ಚಿರತೆ ಶವ ತೇಲಿ ಬಂದಿದೆ. 2.5 ವರ್ಷದ ಗಂಡು ಚಿರತೆ ಇದಾಗಿದೆ ಎಂದು ಅಂದಾಜಿಸಲಾಗಿದೆ. ಚಿರತೆಯ ದೇಹ ಕೊಳೆತಿದ್ದು ದೇಹದ ಮೇಲೆ ಹುಳಗಳಾಗಿವೆ. 

ಪಶುವೈದ್ಯರು ಆಗಮಿಸಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹಳ್ಳದ ನೀರಿನ ರಭಸಕ್ಕೆ ಚಿರತೆ ಸಾವನಪ್ಪಿದೆ ಎನ್ನಲಾಗಿದೆ.
7-8 ದಿನಗಳ ಹಿಂದೆಯೇ ಈ ಚಿರತೆ ಸಾವನ್ನಪ್ಪಿದ್ದು ಅದರ ದೇಹದ ಮೇಲೆಲ್ಲಾ ಹುಳುಗಳಾಗಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೃಷ್ಣಮೂರ್ತಿ ಹೆಗಡೆ ತಿಳಿಸಿದ್ದಾರೆ.