
ಕಾರವಾರ : ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿರುವ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ `ಇನ್ನಷ್ಟು ತಜ್ಞರನ್ನು ಕರೆಯಿಸಿ ಹುಡುಕಾಟ ಮುಂದುವರೆಸಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ.

ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡದವರು 4 ಕಡೆ ಶೋಧ ಮುಂದುವರೆಸಿದ್ದಾರೆ. ಶನಿವಾರ ರಾತ್ರಿ ಇನ್ನೊಂದು ತಂಡ ಆಗಮಿಸಲಿದ್ದು ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳ್ಳಲಿದೆ. ಸ್ಥಳೀಯ ಮೀನುಗಾರರ ಸಹಕಾರವೂ ಅಗತ್ಯ’ ಎಂದವರು ಹೇಳಿದರು. `ತಟರಕ್ಷಕಪಡೆಯವರಿಗೆ ಇನ್ನೊಮ್ಮೆ ಹೆಲಿಕಾಪ್ಟರ್ ಮೂಲಕ ಶೋಧನ ನಡೆಸಲು ಸೂಚಿಸಲಾಗಿದೆ’ ಎಂದವರು ವಿವರಿಸಿದರು.