ಮಾಗೋಡ ಜಲಪಾತ ರಸ್ತೆ ಕುಸಿತ : ಸಂಚಾರ ಬಂದ್

Spread the love

ಕಾರವಾರ : ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಗೋಡು ಜಲಪಾತಕ್ಕೆ ಹೋಗುವ ರಸ್ತೆ ಶನಿವಾರ ಮೊಟ್ಟೆಗದ್ದೆ ಕ್ರಾಸ್ ಸಮೀಪ ಕುಸಿದಿದೆ. 

ರಸ್ತೆಯ ಒಂದು ಬದಿ ಸುಮಾರು 10 ಅಡಿಗಳಷ್ಟು ಕುಸಿದಿದ್ದು ಯಾವುದೇ ವಾಹನ ಸಂಚರಿಸುವಂತಿಲ್ಲ. ಕಾರಣ ಮಾಗೋಡು ಜಲಪಾತಕ್ಕೆ ವಾಹನ ಸಂಚಾರ ನಿಷೇಧಿಸಲಾಗಿದೆ.
‘ಸಂಚಾರ ನಿಷೇಧದ ಬಗ್ಗೆ ರಸ್ತೆಯಲ್ಲಿ ಸೂಚನಾ ಫಲಕ ಅಡವಡಿಸಲಾಗಿದೆ. ತಾತ್ಕಾಲಿಕವಾಗಿ ರಸ್ತೆ ಸಂಚಾರವನ್ನು ಬಂದ್‌ ಮಾಡಲಾಗಿದೆ’ ಎಂದು ಈ ಭಾಗದ ಪಿಡಿಒ ತಿಳಿಸಿದ್ದಾರೆ. 

ಗಂಗಾವಳಿ ನದಿಯಾಳದಲ್ಲಿ ಬಗೆದಷ್ಟು ಮಣ್ಣು..!

ಕಾರವಾರ : ಗಂಗಾವಳಿ ನದಿ ಆಳದ 4 ಕಡೆ ಲೋಹ ಪತ್ತೆಯಾಗಿರುವ ಬಗ್ಗೆ ತಜ್ಞರು ಮಾಹಿತಿ ನೀಡಿದ್ದು, ಶನಿವಾರ ಅಲ್ಲಿ ಹುಡುಕಾಟ ನಡೆಸಿದವರಿಗೆ ಸಿಕ್ಕಿದ್ದು ಬರೀ ಮಣ್ಣು‌..! 

ಗುರುವಾರ ಡೋಣ್ ಹಾಗೂ ಹೆಲಿಕಾಪ್ಟರ್ ಬಳಸಿ
ಕಾರ್ಯಾಚರಣೆ ನಡೆಸಿದಾಗ ನೀರಿನ ಆಳದಲ್ಲಿ ನಾಲ್ಕು ಕಡೆ ನಾಲ್ಕು ಬಗೆಯ ಲೋಹದ ಕುರುಹುಗಳಿರುವುದು
ಗಮನಕ್ಕೆ ಬಂದಿತ್ತು. ಭೂಮಿ ಹಾಗೂ ನದಿ ಆಳದಲ್ಲಿ
ಹುಡುಕಾಟ ನಡೆಸಿದ್ದು, ಆಗ ರಸ್ತೆಯಿಂದ 60ಮೀ ದೂರದ ನದಿ ಆಳದಲ್ಲಿ ಅರ್ಜುನ ಓಡಿಸುತ್ತಿದ್ದ ಲಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಅನತಿ ದೂರದಲ್ಲಿ ಒಂದು ಕ್ಯಾಬಿನ್, ಟವ‌ರ್ ಸಹ ಕಾಣಿಸಿತ್ತು. ನದಿಯಲ್ಲಿ ಕಾಣಿಸಿದ ಕ್ಯಾಬಿನ್ ಗ್ಯಾಸ್ ಟ್ಯಾಂಕರ್‌’ಗೆ ಸೇರಿದ್ದು ಎಂದು ಅಂದಾಜಿಸಲಾಗಿತ್ತು. ಇನ್ನೊಂದು ಉದ್ದವಾದ ರಿಲಿಂಗ್ ನೀರಿನಾಳದಲ್ಲಿ ಕಾಣಿಸಿದ್ದು, ಅದು ಯಾವುದರ ಲೋಹ ಎಂದು ಗೊತ್ತಾಗಿರಲಿಲ್ಲ. ಇನ್ನೊಂದು ಥರ್ಮರ್ ಸ್ಕ್ಯಾನರ್ ನೀರಿನ ಆಳದಲ್ಲಿರುವ ಬಗ್ಗೆ ಶಂಕೆಯಿದ್ದು, ಅದು ಖಚಿತವಾಗಿರಲಿಲ್ಲ.
ಈ ಹಿನ್ನೆಲೆ ಲೋಹದ ಕುರುಹುಗಳು ಕಂಡುಬಂದ ಪ್ರದೇಶವನ್ನು ಗುರುತಿಸಿ ಅಲ್ಲಿ ಮುಳುಗು ತಜ್ಞರು ಶನಿವಾರ ಶೋಧ ನಡೆಸಿದರು. ನೀರನ ಆಳದಲ್ಲಿ ಕಲ್ಲು ಹಾಗೂ ಮಣ್ಣು ಹೊರತುಪಡಿಸಿ ಉಳಿದವೂ ಏನೂ ಸಿಕ್ಕಿಲ್ಲ. ನಾಳೆ ಸಹ ಹುಡುಕಾಟ ಮುಂದುವರೆಯಲಿದೆ.