ಆನಂದನಗರದಲ್ಲಿ ಅನಧಿಕೃತ ಸರಾಯಿ ಅಂಗಡಿಯನ್ನು ತೆರವುಗೊಳಿಸುವಂತೆ ಮಹಿಳೆಯರಿಂದ ಶಾಸಕ ಹೆಬ್ಬಾರಗೆ ಮನವಿ

Spread the love

ಮುಂಡಗೋಡ : ಆನಂದನಗರದಲ್ಲಿ ಅನಧಿಕೃತವಾಗಿ ಸರಾಯಿ ಮಾರಾಟ ಅಂಗಡಿಯನ್ನು ತೆರೆವುಗೊಳಿಸುವಂತೆ ಬುಧವಾರ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಅವರಲ್ಲಿ ಮಹಿಳೆಯರು ಮನವಿಯೊಂದನ್ನು ಅರ್ಪಿಸಿ ವಿನಂತಿಸಿದ್ದಾರೆ.

ಸುಮಾರು ವರ್ಷಗಳಿಂದ ಆನಂದ ನಗರದಲ್ಲಿ ವಿಠ್ಠಲ್ ಮತ್ತು ಅವರು ಕುಟುಂಬದವರು ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಎಷ್ಟೋ ಸಲ ಹೇಳಿದರೂ ಕೇಳುತ್ತಿಲ್ಲ. ಯಾರ ಭಯವೂ ಅವರಿಗಿಲ್ಲ. ಇವರಂತೆ ಇನ್ನೂ ಎರಡು ಕಡೆ ಸರಾಯಿಯನ್ನು ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ. ದೇವಸ್ಥಾನದ ಮತ್ತು ಶಾಲೆಯ ಅಸುಪಾಸಿನಲ್ಲಿ ಈ ವ್ಯವಹಾರವನ್ನು ಮಾಡುತ್ತಿದ್ದಾರೆ. ಇದರಿಂದ ಅಲ್ಲಿಯ ಆಸುಪಾಸಿನ ಜನರಿಗೆ ತುಂಬಾ ಕಿರಿಕಿರಿಯಾಗಿದ್ದು, ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಓಡಾಡುವುದೇ ಕಷ್ಟಕರವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.