ಶಾಸಕ ಹೆಬ್ಬಾರ್ -ಶಾಸಕ ಮಾನೆ ಅವರಿಂದ ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಣೆ

Spread the love

ಮುಂಡಗೋಡ : ತಾಲೂಕಿನ ಮಳಗಿ ಸಮೀಪದ ಧರ್ಮ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಗುರುವಾರ ಯಲ್ಲಾಪುರ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಮತ್ತು ಹಾನಗಲ್ ಕ್ಷೇತ್ರದ ಶಾಸಕರಾದ ಶ್ರೀನಿವಾಸ ಮನೆ ಅವರು ಬಾಗಿನ ಅರ್ಪಿಸಿದರು. 

ಈ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಮುಂಡಗೋಡ ತಾಲೂಕಿನ ಜನರು, ರೈತರು ಹಾಗೂ ಹಾನಗಲ್ ತಾಲೂಕಿನ ಜನರು, ರೈತರು ಭಾಗಿಯಾಗಿ ಸಂತಸ ಪಟ್ಟರು. 

ಮಳೆಗಾಲ ಆರಂಭವಾಗಿ ಎರಡು ತಿಂಗಳಿನಲ್ಲಿಯೇ, ಕೋಡಿ ಬಿದ್ದ ತಾಲೂಕಿನ ಮೊದಲ ಜಲಾಶಯ ಇದಾಗಿದೆ.
ಶಿರಸಿ ತಾಲೂಕಿನ ಇಸಳೂರ, ಬಂಕನಾಳ, ಎಕ್ಕಂಬಿ, ಬೀಳೂರ, ಮುಂಡಗೋಡ ತಾಲ್ಲೂಕಿನ ಕಾಳೇಬೈಲ್‌, ತೊಗರಳ್ಳಿ, ಬೆಡಸಗಾಂವ್, ಮಳಗಿ ಭಾಗದಲ್ಲಿ ಬೀಳುವ ಮಳೆಯ ನೀರು ಈ ಜಲಾಶಯಕ್ಕೆ ಹರಿದು ಬರುತ್ತದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಧಾರಾಕಾರ ಮಳೆ ಆಗಿರುವುದರಿಂದ, ಧರ್ಮಾ ಜಲಾಶಯ ಭರ್ತಿ ಆಗಿದೆ. ಕೋಡಿ ಬಿದ್ದ ನೀರು ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಕೆರೆಕಟ್ಟೆಗಳು ಹಾಗೂ ಗದ್ದೆಗಳಿಗೆ ಹರಿಯುತ್ತದೆ. ಹೀಗಾಗಿ ಈ ಜಲಾಶಯವು ಹಾನಗಲ್ ತಾಲೂಕಿನ ರೈತರ ಜೀವನಾಡಿ ಆಗಿದೆ.