
ಗೋಕರ್ಣ: ಉತ್ತಮವಾಗಿ ಮಳೆ, ಬೆಳೆ ಆಗಲೆಂದು ಪ್ರಾರ್ಥಿಸಿ ಗೋಕರ್ಣದಲ್ಲಿ ಹಾಲಕ್ಕಿ ಒಕ್ಕಲಿಗರ ಸಮುದಾಯದವರು ರವಿವಾರ ಆಚರಿಸಿದ ‘ದಾದುಮ್ಮನ ಮದುವೆ’ ಎಲ್ಲರ ಗಮನ ಸೆಳೆಯಿತು.

ಆಷಾಢ ಅಮಾವಾಸ್ಯೆಯ ದಿನ ಗೋಧೂಳಿ ಮುಹೂರ್ತದಲ್ಲಿ ಗ್ರಾಮದ ಲಕ್ಷ್ಮೀ ಗೌಡ ಅವರು ದೇವಕಿ ಗೌಡರಿಗೆ ಮಾಲೆ ಹಾಕಿ ಮದುವೆಯಾಗುವುದರೊಂದಿಗೆ ಪರಂಪರೆಯನ್ನು ಆಚರಿಸಿದರು. ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಈ ಮದುವೆಗೆ ಸಾಕ್ಷಿಯಾದರು.
ಮಳೆಗಾಗಿ ಇಂದ್ರನನ್ನು ಪ್ರಾರ್ಥಿಸುವ, ಮಹಿಳೆ ಮಹಿಳೆಯರ ನಡುವೆ ನಡೆಯುವ ಮದುವೆ ಅನಾದಿ ಕಾಲದಿಂದಲೂ ನಡೆದು ಬಂದಿದೆ.
ಈ ಮದುವೆಯಲ್ಲಿ ವರ ಮತ್ತು ವಧು ಇಬ್ಬರೂ ಮಹಿಳೆಯರೇ ಆಗಿರುತ್ತಾರೆ. ಇದೇ ಈ ವಿವಾಹದ ವೈಶಿಷ್ಟ್ಯ..!