ಮುಂಡಗೋಡ : ತಾಲೂಕಿನ ಬಪ್ಪಲಗುಂಡಿಯಲ್ಲಿ ಅನಧಿಕೃತವಾಗಿ ನಾಲ್ಕು ಸಾಗುವಾನಿ ಮರಗಳನ್ನು ಕಡಿದ ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಅರಣ್ಯ ಇಲಾಖೆಯಲ್ಲಿ ಪ್ರಕರಣದ ದಾಖಲಿಸಿದ್ದಾರೆ.
ಈ ಪ್ರಕರಣದಲ್ಲಿ ಶಿಗ್ಗಾಂವ ತಾಲೂಕಿನ ಬಸವನಕಟ್ಟಿಯ ಬಸವರಾಜ ಆಡಿನವರ್ ಮತ್ತು ಬಸನಕಟ್ಟಿ ಗ್ರಾಮದ ಮಂಜುನಾಥ್ ತಿಗಡಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಒಂದು ಕೊಡಲಿ ಮತ್ತು ಒಂದು ಕೈಗರಗಸ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ನಾಲ್ಕು ಸಾಗುವಾನಿ ಕಟ್ಟಿಗೆ ಬೆಲೆ 45ಸಾವಿರರೂ. ಎಂದು ಅಂದಾಜಿಸಲಾಗಿದೆ.
ಈ ಕಾರ್ಯಚರಣೆಯಲ್ಲಿ ಯಲ್ಲಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಾಬಾನು, ಮುಂಡಗೋಡ ಎ.ಸಿ.ಎಫ್. ರವಿ ಹುಲಕೋಟಿ ಅವರ ಮಾರ್ಗದರ್ಶನದಲ್ಲಿ ಮುಂಡಗೋಡ ಆರ್.ಎಫ್.ಒ. ವಾಗೀಶ ಬಿ.ಜಿ.ಅವರ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿ ಶಂಕರ್ ಬಾಗೇವಾಡಿ, ಗಿರೀಶ್ ಕೊಳೆಕರ್, ಸುನಿತಾ ಬಿ.ಎಂ., ಗಸ್ತು ಅರಣ್ಯ ಪಾಲಕರಾದ ರಾಜು ಪರೀಟ್, ಮಲ್ಲಪ್ಪ ತುಳಜಣ್ಣವರ್, ದೇವರಾಜ ಆಡಿನ, ಶಿವಪ್ಪ ಬಿ ಭಾಗವಹಿಸಿದ್ದರು.