ಸನವಳ್ಳಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಕಳ್ಳತನ

Spread the love

ಮುಂಡಗೋಡ : ತಾಲೂಕಿನ ಸನವಳ್ಳಿಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಕಳ್ಳತನವಾದ ಘಟನೆ ಸಂಭವಿಸಿದೆ.
ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿದ್ದ ಹುಂಡಿಯಿಂದ ರೂ.2000 ನಗದು, 4 ಸೀರೆ, ರೂ.15,000 ಮೌಲ್ಯದ ಎಂಪ್ಲಿಫಾಯರನ್ನು ಕಳ್ಳರು ಕದ್ದೊಯ್ದಿದ್ದಾರೆ.

ಘಟನಾ ಸ್ಥಳಕ್ಕೆ ಸಿ.ಪಿ.ಐ. ರಂಗನಾಥ ನೀಲಮ್ಮನವರ್, ಪಿ.ಎಸ್.ಐ. ಪರಶುರಾಮ ಮಿರ್ಜಗಿ ಮತ್ತು ಪಿ.ಎಸ್.ಐ. ಕುಡಗುಂಟಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಶ್ವಾನ ಬರಲಿದೆ ಎಂದು ಹೇಳಲಾಗಿದೆ.