ಮುಂಡಗೋಡ : ಮೊಹಸಿನ್-ಎ-ಆಝಮ್ ಮಿಷನ್ ಮುಂಡಗೋಡ ಹಾಗೂ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ರೋಣ ಮೆಡಿಕಲ್ಸನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಈ ಶಿಬಿರವನ್ನು ಶ್ರೀ ಬಾಲಾಜಿ ಆಸ್ಪತ್ರೆ ಹುಬ್ಬಳ್ಳಿಯ ಡಾ.ಅಬಿದ್ ಹುಸೇನ್ ಮತ್ತು ಮೊಹಸಿನ್-ಎ-ಆಝಮ್ ಮಿಷನ್ನಿನ ಅಧ್ಯಕ್ಷರಾದ ಮುಷ್ತಾಕ ಅಹ್ಮದ ನೇರ್ತಿ ಉದ್ಘಾಟಿಸಿದರು.
ಅತಿಥಿಗಳಾಗಿ ಡಾ.ಭಾಸ್ಕರರಾವ್, ಡಾ.ಅಬ್ರಾರ, ಡಾ.ಅಖಿಲೇಷ ಆಗಮಿಸಿದ್ದರು. ಮಕಬುಲ್ ಮಿರ್ಚೋಣಿ, ಇಜಾಜ ಅಹ್ಮದ ರೋಣ, ಮೊಹಸಿನ್-ಎ-ಆಝಮ್ ಮಿಷನ್ ಮುಂಡಗೋಡದ ಪದಾಧಿಕಾರಿಗಳು, ಸದಸ್ಯರು ಹಾಗೂ ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹುಬ್ಬಳ್ಳಿಯ ಸಿಬ್ಬಂದಿಗಳು ಇದ್ದರು.
ಮೊಹಸಿನ್-ಎ-ಆಝಮ್ ಮಿಷನ್ ಮುಂಡಗೋಡದ ಅಧ್ಯಕ್ಷರಾದ ಮುಷ್ತಾಕ ಅಹ್ಮದ ನೇರ್ತಿ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ಹಾಫಿಜ್ ಮಹಮದ್ ಇಸ್ಮಾಯಿಲ್ ಕುರಾನ್ ಪಠಣ ಮಾಡಿದರು. ಮಹಮದ್ ಸಲೀಂ ಶೇಖ ಸ್ವಾಗತಿಸಿದರು. ಜಿ.ಎಂ.ಬಮ್ಮಿಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೈದ್ಯರನ್ನು ಮೊಹಸಿನ್-ಎ-ಆಝಮ್ ಮಿಷನ್ನಿನ ಮುಖ್ಯಸ್ಥರನ್ನು ಹಾಗೂ ಉದ್ಯಮಿ ಇಜಾಜ ಅಹ್ಮದ ರೋಣ ಅವರನ್ನು ಸನ್ಮಾನಿಸಲಾಯಿತು.