ಮುಂಡಗೋಡ : ಕನ್ನಡ ಸಾಹಿತ್ಯ ಪರಿಷತ್ತು ಮುಂಡಗೋಡ ಹಾಗೂ ಲೊಯೋಲ ಪ್ರೌಢಶಾಲೆ ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಅನುದಿನ- ಅನುಷ್ಪಂದನ 2024…. ಕನ್ನಡ ಕಾರ್ತಿಕ ಸರಣಿ ಮಾಲಿಕೆಯಲ್ಲಿ ಲೊಯೋಲ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಕಾರರ ಪರಿಚಯ ಹಾಗೂ ಕೃತಿ ಪರಿಚಯ ಕಾರ್ಯಕ್ರಮವನ್ನು ಬುಧವಾರ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಲೊಯೋಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ನಿರ್ದೇಶಕರಾದ ಫಾದರ್ ವಿಜಯರಾಜು ಅವರು ಉದ್ಘಾಟಿಸಿ ಮಾತನಾಡುತ್ತಾ, ಮಕ್ಕಳ ಮನಸ್ಸಿನಲ್ಲಿ ಇಂತಹ ವಾತಾವರಣದ ಶೈಕ್ಷಣಿಕ ಚಟುವಟಿಕೆಗಳು ಬೆಳೆಯಬೇಕು. ಮಕ್ಕಳಲ್ಲಿ ಇರುವಂತ ಪ್ರತಿಭೆಗಳು ಹೊರಕ್ಕೆ ಬರಬೇಕು. ಇವತ್ತು ಮಕ್ಕಳು ವೇದಿಕೆ ಮೇಲೆ ಮಾತನಾಡಿ ನಾಳೆ ಮುಂದೊಂದು ದಿನ ಮಕ್ಕಳೇ ಸಾಹಿತಿಗಳಾಗಬೇಕು, ಕವಿಗಳೂ ಆಗಬೇಕು, ಲೇಖಕರಾಗಬೇಕು …..ಸಮಾಜಕ್ಕೆ ಅವರು ಕೊಡುಗೆ ನೀಡುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ ವಸಂತ ಕೊಣಸಾಲಿ ಅವರು ಮಾತನಾಡಿ, ಮಕ್ಕಳ ಕಾರ್ಯಕ್ರಮವು ಮೊದಲ ಪ್ರಯತ್ನವಾದರೂ ನಿಜವಾಗಲೂ ಯಶಸ್ಸಿನಿಂದ ಕೂಡಿದ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳೇ ಜ್ಞಾನಪೀಠ ಪುರಸ್ಕೃತರ ಪರಿಚಯವನ್ನು ಮಾಡಿ ಕೃತಿಯನ್ನು ಅವಲೋಕನ ಮಾಡಿ ಅದನ್ನ ಪರಿಚಯ ಮಾಡುವುದು ಬಹಳ ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ಸಾಹಿತ್ಯ ಕಾರ್ಯದ ಬಗ್ಗೆ ಪ್ರಸ್ತಾಪ ಮಾಡಿರುವುದು ಶ್ಲಾಘನಾರ್ಹ ಎಂದರು.
ವಿದ್ಯಾರ್ಥಿಗಳಾದ ಕುಮಾರ್ ಆಶೀರ್ವಾದ, ಕುಮಾರಿ ದಾನೇಶ್ವರಿ, ಕುಮಾರಿ ಪ್ರಿಯಾಂಕ, ಕುಮಾರಿ ಕಾಂಚನ, ಕುಮಾರಿ ತೇಜಸ್ವಿನಿ, ಕುಮಾರ್ ಇಸೂಫ, ಕುಮಾರಿ ಸಾಕ್ಷಿ ಜ್ಞಾನಪೀಠ ಪ್ರಶಸ್ತಿ ಪಡೆದ ಪುರಸ್ಕೃತರ ಪರಿಚಯವನ್ನು ಅತ್ಯಂತ ಸುಂದರವಾಗಿ ನಿರ್ವಹಿಸಿದರು. ಮುಖ್ಯಾಧ್ಯಾಪಕರಾದ ವಿ.ವಿ.ಮಲ್ಲನಗೌಡರ, ಅರುಣಕುಮಾರ್ ಬುದ್ದಿನಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್.ಡಿ.ಮುಡಣ್ಣವರ್, ವಿನಾಯಕ್ ಶೇಟ್ ಹಾಗೂ ಕೋಶಾಧ್ಯಕ್ಷರಾದ ನಾಗರಾಜ ಅರ್ಕಸಾಲಿ ಹಾಗೂ ಕಾರ್ಯಕಾರಿ ಸಮಿತಿಯವರಾದ ಎಸ್.ಬಿ.ಹೂಗಾರ್, ಗೌರಮ್ಮ ಕೊಳ್ಳಾನವರ್, ಆನಂದ ಹೊಸೂರು, ಮಂಜುನಾಥ ಕಲ್ಮಟ್ಕರ್, ಸಂತೋಷ ಕುಸ್ನೂರ್, ಶಿಕ್ಷಕಿಯರಾದ ರೇಷ್ಮಾ, ಕುಮಾರಿ ಪವಿತ್ರ, ಕುಮಾರಿ ದಿವ್ಯ, ಶಿಕ್ಷಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಸಂತೋಷ ಕುಸ್ನೂರ್ ಕಾರ್ಯಕ್ರಮವನ್ನು ನಿರೂಪಿಸಿದರು. ಗೌರವ ಕಾರ್ಯದರ್ಶಿಗಳಾದ ವಿನಾಯಕ ಶೇಟ್ ವಂದಿಸಿದರು. ಕಾಂಚನ ಸಂಗಡಿಗರು ಪ್ರಾರ್ಥನೆಯನ್ನು ನಾಡಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರವನ್ನು ನೆನಪಿನ ಕಾಣಿಕೆಯನ್ನು ನೀಡಲಾಯಿತು.