ಟಿಬೆಟಿಕಾಲೋನಿಗೆ ಕೆಲಸಕ್ಕೆ ಹೋದ ಮಹಿಳೆ ಕಾಣೆ

Spread the love

ಮುಂಡಗೋಡ : ಟಿಬೆಟಿಯನ್ ಕಾಲೋನಿಗೆ ಕೆಲಸಕ್ಕೆ ಹೋದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ. 

ತಾಲೂಕಿನ ನಂದಿಕಟ್ಟಾದ ಚಂದ್ರಕ್ಕ ಸುಂಕಪ್ಪ ದುರಮುರ್ಗಿ (35) ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ನವೆಂಬರ 25ರಂದು ಅವರು ಟಿಬೆಟಿಯನ್ ಕಾಲೋನಿಯ ಕ್ಯಾಂಪ್ ನಂ 7ಕ್ಕೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಸಹ ಅಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದರು. ಆದರೆ, ಸಂಜೆ ಅವರು ಮನೆಗೆ ಮರಳಿಲ್ಲ.
ಚಂದ್ರಕ್ಕ ಅವರನ್ನು ಎಲ್ಲಾ ಕಡೆ ಹುಡುಕಲಾಯಿತು. ಆದರೂ, ಅವರು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅವರ ಮಗ ನಾಗರಾಜ ದುರಮುರ್ಗಿ ಪೊಲೀಸ್ ದೂರು ನೀಡಿದ್ದಾರೆ.