ತುಮಕೂರು : ಇತ್ತೀಚಿಗೆ ಕಾಂಗ್ರೆಸ್ ಶಾಸಕ ಗವಿಯಪ್ಪ ಗ್ಯಾರಂಟಿಗಳಲ್ಲಿ ಯಾವುದಾದರೂ ಎರಡು ಯೋಜನೆಗಳನ್ನು ನಿಲ್ಲಿಸಿ, ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಿ ಎಂದು ಹೇಳಿಕೆ ನೀಡಿದ್ದರು. ಇದೀಗ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಶಾಸಕರಿಗೆ 25 ಕೋಟಿ ಹಾಗೂ ವಿಪಕ್ಷಗಳ ಶಾಸಕರಿಗೆ 10 ರಿಂದ 15 ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ಕೆಲ ಶಾಸಕರಿಗೆ ಅನುದಾನವೇ ಕೊಡುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ವಿಪಕ್ಷ ಶಾಸಕರಿಗೆ 10 ರಿಂದ 15 ಕೋಟಿ ಹಣ ಕೊಡುತ್ತೇವೆ. ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೆ ಆತಂಕ ಬೇಡ ಅನುದಾನ ಕೊಡುತ್ತೇವೆ ನಾನು ಮತ್ತು ಕೆ.ಎನ್ ರಾಜಣ್ಣ ಈ ಒಂದು ಜವಾಬ್ದಾರಿ ತೆಗೆದುಕೊಳ್ಳುತ್ತೇವೆ.
ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಆದಾಗ ಮಾತ್ರ ರಾಜ್ಯದ ಅಭಿವೃದ್ಧಿ ಆಗಲಿದೆ. ಬಿಜೆಪಿ ಜೆಡಿಎಸ್ ಶಾಸಕರು ಸಿಎಂ ಗೆ ಕಪ್ಪು ಬಾವುಟ ತೋರಿಸುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರಿಗೆ 25 ಕೋಟಿ ರೂಪಾಯಿ ಅನುದಾನ ಕೊಡುತ್ತೇವೆ. ಹಾಗೆ ವಿಪಕ್ಷಗಳ ಶಾಸಕರಿಗೆ 10 ರಿಂದ 15 ಕೋಟಿ ಅನುದಾನ ಬರಲಿದೆ ಎಂದು ತುಮಕೂರಿನಲ್ಲಿ ಗೃಹ ಇಲಾಖೆಯ ಸಚಿವ ಜಿ ಪರಮೇಶ್ವರ್ ತಿಳಿಸಿದರು.
ಸಿದ್ದರಾಮಯ್ಯ ನಾನು ಎಣ್ಣೆ ಸೀಗೆಕಾಯಿ ಎಂದು ತಪ್ಪಾಗಿ ತೋರಿಸಿದ್ದಾರೆ. ಡಿಸೆಂಬರ್ 5 ರಂದು ನಡೆಯುವ ಕಾರ್ಯಕ್ರಮದ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದೆ. ಅದಕ್ಕೆ ನಾನು ಮತ್ತು ಸಿದ್ದರಾಮಯ್ಯ ಎಣ್ಣೆ ಸೀಗೆಕಾಯಿ ಎಂದು ಹೇಳಿದ್ದಾರೆ. ನಾವು ತುಮಕೂರಿನಲ್ಲಿ ಸ್ವಾಭಿಮಾನಿ ಸಮಾವೇಶಕ್ಕೆ ಚಿಂತನೆ ಮಾಡಿದ್ದೆವು. ಆದರೆ ಸಚಿವ ಕೆ ಎನ್ ರಾಜಣ್ಣ ಹಾಸನದಲ್ಲಿ ಮಾಡುತ್ತೇನೆ ಅಂದರು. ಸಿದ್ದರಾಮಯ್ಯ ನಮ್ಮ ನಾಯಕ ನಾವು ಅವರ ಜೊತೆಯಲ್ಲಿಯೇ ಇದ್ದೇವೆ.ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಒಂದು ಸ್ಪಷ್ಟನೆ ನೀಡಿದರು.