
ಮುಂಡಗೋಡ : ಮುಂಡಗೋಡದ ಜ್ಯೋತಿ ಆಚಾರಿ ಅವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕರ್ನಾಟಕ ಚಲನಚಿತ್ರ ಕಲಾವಿದರ ಕ್ಷೇಮಾಭಿವೃದ್ಧಿ ಮಂಡಳಿ ಧಾರವಾಡ ಚೇತನ ಫೌಂಡೇಶನ್ ಧಾರವಾಡ ಅಪ್ಪನಾದೇಶ್ ಫೌಂಡೇಶನ್ ಧಾರವಾಡ ಇವರ ಆಶ್ರಯದಲ್ಲಿ ಜ್ಯೋತಿ ಆಚಾರಿ ಅವರು ಶಿಕ್ಷಣ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಕ್ಕಾಗಿ ರವಿವಾರ ದಿ.15ರಂದು ಅವರಿಗೆ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
