
ಮುಂಡಗೋಡ : ನ್ಯಾಯಾಲಯದ ಆದೇಶ ಮೀರಿ ಅಡಿಕೆ ಬೆಳೆ ಕೊಯ್ಲು ಮಾಡಿದವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ನ್ಯಾಯಾಲಯವು ಕೃಷಿ ಇಲಾಖೆ ಉಸ್ತುವಾರಿಗೆ ವಹಿಸಿದ್ದ ಅಡಿಕೆ ತೋಟಕ್ಕೆ ನುಗ್ಗಿದ ಇಬ್ಬರು ಅಲ್ಲಿನ ಫಸಲುಗಳನ್ನು ಸಾಗಿಸುತ್ತಿರುವಾಗ ಕೃಷಿ ಅಧಿಕಾರಿ ತಡೆದಿದ್ದಾರೆ.

ಡಿ 15ರಂದು ಕೃಷಿ ಇಲಾಖೆ ಜವಾಬ್ದಾರಿಯಲ್ಲಿದ್ದ ತೋಟ ಪ್ರವೇಶಿಸಿದ ಈಶ್ವರ ಗೌಡ ಪಾಟೀಲ ಹಾಗೂ ವಿನಾಯಕ ಪಾಟೀಲ್ ಅಲ್ಲಿದ್ದ ಅಡಿಕೆಯನ್ನು ಮರದಿಂದ ಇಳಿಸಿದ್ದಾರೆ. ತಮಗೆ ಸಂಬಂಧಿಸಿದ ತೋಟ ಎಂದು ಅಲ್ಲಿದ್ದ 60 ಕ್ವಿಂಟಲ್ ಹಸಿ ಅಡಿಕೆಯನ್ನು ಬುಲೆರೋ ವಾಹನದಲ್ಲಿ ತುಂಬಿಕೊಂಡಿದ್ದಾರೆ. ಈ ವಿಷಯ ಅರಿತ ಸಹಾಯಕ ಕೃಷಿ ಅಧಿಕಾರಿ ಕೃಷ್ಣಪ್ಪ ಮಹಾರೆಡ್ಡಿ ಅವರು ಆ ವಾಹನ ತಡೆದು ನಿಲ್ಲಿಸಿದರು. ಪೊಲೀಸರಿಗೆ ಫೋನ್ ಮಾಡಿ ಆ ಅಡಿಕೆಯನ್ನು ಜಪ್ತು ಮಾಡಿಸಿದರು. ನ್ಯಾಯಾಲಯದ ಆದೇಶ ಮೀರಿ ವರ್ತಿಸಿದ ಆ ಇಬ್ಬರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.
